ಆದರ್ಶ ವಿದ್ಯಾಲಯಕ್ಕೆ 6 ನೇ. ತರಗತಿಗೆ – ಅರ್ಜಿ ಆಹ್ವಾನ.
ಇಂಡಿ ಮೇ.25

2025-2026 ರ ಸಾಲಿನ ಆದರ್ಶ ವಿದ್ಯಾಲಯಕ್ಕೆ 6 ನೇ. ತರಗತಿಗೆ ಮೊದಲ ಸುತ್ತಿನ ದಾಖಲಾತಿ ಪ್ರಾರಂಭವಾಗಿದ್ದು ದಾಖಲಾತಿಗೆ ಮೇ 29 ಕೊನೆ ದಿನ. ಈಗಾಗಲೇ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು ಮೊದಲ ಸುತ್ತಿನಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳ ಪಾಲಕರಿಗೆ ಸಂದೇಶ ಬಂದಿರುತ್ತದೆ. ಆಯ್ಕೆ ಯಾದವರು ಮೇ 29 ರೊಳಗೆ ಹಾಜರಾಗಿ ದಾಖಲಾತಿ ಸಲ್ಲಿಸಿ ದಾಖಲಾತಿ ನೋಂದಣಿ ಮಾಡಿ ಕೊಳ್ಳಬೇಕು. ವರ್ಗಾವಣೆ ಪ್ರಮಾಣ ಪತ್ರ, ಮೂಲ ಪ್ರತಿ ಹಾಗೂ 2 ಝರಾಕ್ಸ್ ಪ್ರತಿ 5 ನೇ. ತರಗತಿ ಅಂಕಪಟ್ಟಿ ಹಾಗೂ ಆನ್ ಲೈನ್ ಟಿ.ಸಿ ವಿದ್ಯಾರ್ಥಿಯ ಆಧಾರ ಕಾರ್ಡ 2 ಝರಾಕ್ಸ್ ಪ್ರತಿ ತಂದೆ ತಾಯಿಯ ಆಧಾರ ಕಾರ್ಡ್ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಮೂಲ ಪ್ರತಿ ಹಾಗೂ ಝರಾಕ್ಸ್ ಪ್ರತಿ ವಾಸ ಸ್ಥಳ ದೃಡೀಕರಣ ಪತ್ರ ಬೇರೆ ತಾಲೂಕಿನವರಿಗೆ ಮಾತ್ರ ಅಂಗವಿಕಲ ಪ್ರಮಾಣ ಪತ್ರ ಮೂಲ ಪ್ರತಿ ಹಾಗೂ 2 ಝರಾಕ್ಸ್ ಪ್ರತಿ ಪರೀಕ್ಷಾ ಪ್ರವೇಶ ಪತ್ರ ಆರೋಗ್ಯ ಕಾರ್ಡ್ ಹಾಗೂ ಪಾಸ್ಪೋರ್ಟ್ 4 ಪೋಟೋಗಳು ವಿದ್ಯಾರ್ಥಿಯ ಬ್ಯಾಂಕ ಪಾಸ್ ಬುಕ್ ಝರಾಕ್ಸ್ ಪ್ರತಿ ಪಾಲಕರ ಮೊಬೈಲ ಸಂಖ್ಯೆ ಪಿ.ಇ.ಎನ್ ಹಾಗೂ ಎ.ಪಿ.ಎ.ಎ.ಆರ್.ಐ.ಡಿ ಸಂಖ್ಯೆಯೊಂದಿಗೆ ನಿಗದಿತ ಸಮಯ ದೊಳಗೆ ದಾಖಲಾತಿ ಮಾಡಿ ಕೊಳ್ಳಬೇಕು. ಮಾಹಿತಿಗೆ ಮುಖ್ಯೋಪಾಧ್ಯಾಯ ಎಸ್.ಜಿ ಬನಸೋಡೆ ಮೊ.8970716054 ಗೆ ಸಂಪರ್ಕಿಸಲು ಆದರ್ಶ ಮಹಾವಿದ್ಯಾಲಯದ ಪ್ರಾಚಾರ್ಯರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.