ಪ್ರತಿಭೆಗಳ ಕಾರಂಜಿ ಶ್ರೀ ಶಾರದಾಂಬೆ – ಪ್ರಾಥಮಿಕ ಶಾಲೆ ಅಂಜುಟಗಿ.
ಅಂಜುಟಗಿ ಮೇ.29

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಂಜುಟಗಿ ಗ್ರಾಮದ ಹೊರವಲಯದ ಒಳ್ಳೆಯ ನೈಸರ್ಗಿಕ ಪರಿಸರದಲ್ಲಿ ನಿರ್ಮಾಣವಾದ ಶಾಲೆ ಅಂದರೆ ಅದೊಂದು ಶ್ರೀ ಶಾರದಾಂಬೆ ಆಂಗ್ಲ್ ಮತ್ತು ಕನ್ನಡ ಮಾಧ್ಯಮ ಶಾಲೆ. ಈ ಶಾಲೆಯ ಹೆಸರು ಹೇಳಿದರೆ ಸಾಕು ಅದು ತಾಲೂಕಿಗೆ ಹೆಮ್ಮೆ ಪಡುವ ಚಿರ ಪರಿಚಿತ ಶಾಲೆ. ಈ ಶಾಲೆಗೆ ಕಾಲಿಟ್ಟರೆ ಸಾಕು ಅಲ್ಲಿ ಹೋದ ಪ್ರತಿಯೊಬ್ಬರಿಗೂ ನೆನಪಾಗುವುದು ಪರಿಸರ ಮಡಿಲಿನ ಶಿಕ್ಷಣ. ಅದೇ ರೀತಿ ಶಾಲೆಯ ಸುತ್ತಮುತ್ತಲು ವಿವಿಧ ಗಿಡ ಮರಗಳಿಂದ ಕಂಗೊಳಿಸುವ ಮನಸ್ಸಿಗೆ ಶಾಂತಿ ನೆಮ್ಮದಿ ನೀಡುವ ಜ್ಞಾನ ದ ದೇಗುಲವಿದ್ದಂತೆ.

ಇಂದು ಪ್ರಾರಂಭವಾದ ಗಿನಿಂದಲೂ ಅಲ್ಲಿ ಕಲಿಯುವ ವಿದ್ಯಾರ್ಥಿಗಳು ಸಿಟಿಯಲ್ಲಿ ಉತ್ತೀರ್ಣರಾಗಿ ವಿವಿಧ ವಸತಿ ಶಾಲೆಗಳಿಗೆ ದಾಖಲಾತಿ ಪಡೆಯುತ್ತಿರುವುದು ತಾಲೂಕಿನಲ್ಲಿಯೇ ಹೆಸರು ವಾಸಿಯಾಗಿದೆ.

ಅದೇ ರೀತಿ 2024-2025 ನೇ. ಸಾಲಿನಲ್ಲಿ ಒಂದು ನವೋದಯ ಹತ್ತು ವಿವಿಧ ವಸತಿ ಶಾಲೆಗಳಿಗೆ ಆಯ್ಕೆ ಯಾಗಿರುವುದು ಉಂಟು. ಇದಕ್ಕೆಲ್ಲಾ ಅಲ್ಲಿಯ ಶಾಲಾ ಆಡಳಿತ ವರ್ಗ, ಶಾಲೆಯ ಸಿಬ್ಬಂದಿ ವರ್ಗ, ಗ್ರಾಮಸ್ಥರು, ಪಾಲಕರು ಶಿಕ್ಷಣ ಇಲಾಖೆ ಇತರೆ ಎಲ್ಲರ ಸಹಕಾರವೇ ಮೂಲ ಕಾರಣ ಎಂದು ಅಲ್ಲಿಯ ಮುಖ್ಯ ಶಿಕ್ಷಕರಾದ ಶ್ರೀ ರೇವಣಸಿದ್ದ ಆಳೂರ ಇವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶಿವಾನಂದ.ಬಿ.ಹರಿಜನ.ಇಂಡಿ