ಸಿ.ಇ.ಟಿ ಕೌನ್ಸಿಲಿಂಗ್ – ಪೂರ್ವ ತಯಾರಿ.
ಗದಗ ಜೂ.04

ವಿದ್ಯಾಪೋಷಕ ಸಂಸ್ಥೆ ಧಾರವಾಡ ವತಿಯಿಂದ ೨೦೨೫-೨೬ ನೇ. ಶೈಕ್ಷಣಿಕ ಸಾಲಿನಲ್ಲಿ ಇಂಜನೀಯರಿಂಗ್ ಕೋರ್ಸ ವಿಭಾಗಕ್ಕೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗಾಗಿ ಉಚಿತ ಸಿ.ಇ.ಟಿ ಕೌನ್ಸಿಲಿಂಗ್ ಪೂರ್ವ ತಯಾರಿ ಬಗ್ಗೆ ದಿ. ೧೦-೦೬-೨೦೨೫ ರಂದು ಮಧ್ಯಾಹ್ನ ೧೨.೦೦ ಗಂಟೆಗೆ ಆನ್‌ಲೈನ್ ಮೂಲಕ ಕಾರ್ಯಾಗಾರವನ್ನು ಆಯೋಜಿಸಿದೆ. ಈ ಕಾರ್ಯಾಗಾರಕ್ಕೆ ಗದಗ ತೋಂಟದಾರ್ಯ ಇಂಜನೀಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಡಾ, ರಮೇಶ ಎಂ. ಬಡಿಗೇರ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಪಿ.ಯು.ಸಿ ನಂತರದ ಅವಕಾಶಗಳು, ಇಂಜನೀಯರಿಂಗ್ ಕೋರ್ಸನಲ್ಲಿಯ ಅವಕಾಶಗಳು, ಇಂಜನೀಯರಿಂಗ್ ನಲ್ಲಿಯ ಬ್ರ್ಯಾಂಚುಗಳು, ರ‍್ಯಾಂಕಿಂಗ್ ಮತ್ತು ಕಟ್‌ಆಫ್ % , ಸೀಟ್ ಆಯ್ಕೆ ಪ್ರಕ್ರಿಯೆ, ಇಂಜನೀಯರಿಂಗ್ ನಂತರದ ಉದ್ಯೋಗಾವಕಾಶಗಳ ಮಾಹಿತಿ ನೀಡಲಿದ್ದಾರೆ. ಕಾರ್ಯಾಗಾರದಲ್ಲಿ ತಮ್ಮ ಭಾಗವಹಿಸುವಿಕೆಯನ್ನು ದಿನಾಂಕ ೦೬-೦೬-೨೦೨೫ ರ ಒಳಗಾಗಿ ವಿದ್ಯಾಪೋಷಕ ಸಂಸ್ಥೆಯ ಮೊಬೈಲ್ ನಂ- ೯೯೮೦೧೨೫೬೮೬ , ೮೮೬೧೨೦೧೮೨೮ ಸಂಪರ್ಕಿಸುವ ಮೂಲಕ ವಿದ್ಯಾರ್ಥಿ/ವಿದ್ಯಾರ್ಥಿನಿಯರು ತಮ್ಮ ಹೆಸರನ್ನು ನೋಂದಾಯಿಸ ಬೇಕು. ನಿಗದಿತ ಸಮಯಕ್ಕಿಂತ ೧೦ ನಿಮಿಷ ಮುಂಚಿತವಾಗಿ ಇಲ್ಲಿನ https://us೦6web.zoom.us/j/೮೩೫೩೭೪೭೮೦೮೧?pwd=WjdwOThTQmVkS1ZtNmkvS1hka2g4dz09, ಮೀಟಿಂಗ್ ಆಯ್ ಡಿ: ೮೩೫ ೩೭೪೭ ೮೦೮೧, ಪಾಸ್ ಕೋಡ: ೧೨೩೪೫೬ ಲಿಂಕ್‌ನಲ್ಲಿ ಹಾಜರಾಗ ಆಗಬೇಕು.
*****
– ಡಾ, ಪ್ರಭು ಗಂಜಿಹಾಳ
ಮೊ-೯೪೪೮೭೭೫೩೪೬