ಮೇ 10 ರಂದು ಡಾ, ಚಾಂದಿನಿ ಖಲೀದ್ ರವರ ಒಂದು ಬೊಗಸೆ ಪ್ರೀತಿಯ – ಕವನ ಸಂಕಲನ ಬಿಡುಗಡೆ.

ಚಿತ್ರದುರ್ಗ ಮೇ.08

ನಗರದ ಪತ್ರಕರ್ತರ ಭವನದಲ್ಲಿ ಮೇ 10 ರ ಭಾನುವಾರ ಬೆಳಗ್ಗೆ 10 ಗಂಟೆಯಿಂದ ಚಿನ್ಮೂಲದ್ರಿ ಸಾಹಿತ್ಯ ವೇದಿಕೆ ಅವನಿ ಕಲೆ ಸಾಹಿತ್ಯ ಹಾಗೂ ಸಾಂಸ್ಕೃತಿಕ ವೇದಿಕೆ ಸುರಭಿ ಮೆಲೋಡಿಸ್ ಚಿತ್ರದುರ್ಗ ಇವುಗಳ ಸಂಯುಕ್ತ ಆಶ್ರಯದಲ್ಲಿ ಡಾ, ಚಾಂದಿನಿ ಖಲೀದ್ ಅವರ “ಒಂದು ಬೊಗಸೆ ಪ್ರೀತಿ” ಕವನ ಸಂಕಲನ ಬಿಡುಗಡೆ ಮತ್ತು “ಬೆಳದಿಂಗಳು” ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದ್ದು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ, ಬಿ. ರಾಜಶೇಖರಪ್ಪ ವಹಿಸಲಿದ್ದು ಉದ್ಘಾಟನೆಯನ್ನು ಖ್ಯಾತ ವಕೀಲರಾದ ಬಿ.ಕೆ‌ ರಹಮತ್ ವುಲ್ಲಾ ನೆರವೇರಿಸಲಿದ್ದು ಕವನ ಸಂಕಲನವನ್ನು ಡಾ, ಜಿ.ಎನ್ ಮಲ್ಲಿಕಾರ್ಜುನಪ್ಪ ಬಿಡುಗಡೆ ಮಾಡಲಿದ್ದು.

ನೂತನ ಕವನ ಸಂಕಲನದ ಕುರಿತು ಸಂತೇಬೆನ್ನೂರು ಫೈಜ್ನಟರಾಜ ಮಾತನಾಡಲಿದ್ದು ಹುಡುಕಾಟ ಶುರುವಾಗಿದೆ ಕವನ ಸಂಕಲನದ ಕುರಿತು ರಂಗನಾಯ್ಕ ಮಾತನಾಡಲಿದ್ದು ಬೆಳದಿಂಗಳು ಪ್ರಶಸ್ತಿಯನ್ನು ಹಿರಿಯೂರಿನ ಕವಿ-ಚಿತ್ರಕಾರ ಜಬೀವುಲ್ಲಾ ಎಂ ಅಸದ್ ಅವರಿಗೆ ಕೊಡಲಾಗುತ್ತಿದ್ದು.

ಸಂಗೀತ ಕಾರ್ಯಕ್ರಮವನ್ನು ಸತೀಶ್ ಮತ್ತು ಲತಾ ನಡೆಸಿ ಕೊಡಲಿದ್ದು ಕಾರ್ಯಕ್ರಮದಲ್ಲಿ ಚಿನ್ಮೂಲದ್ರಿ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ದಯಾ ಪುತ್ತೂರ್ಕರ್, ಶಾರದಾ ಜೈರಾಮ್, ಸುನೀತಾ ಮಲ್ಲಿಕಾರ್ಜುನ, ಹುರುಳಿ ಬಸವರಾಜ್, ಸತೀಶ್ ಎಸ್.ವಿ ರೇಣುಕಾ ಪ್ರಕಾಶ್, ಡಾ, ಬಸವರಾಜ ಹರ್ತಿ ಸೇರಿದಂತೆ ಸಾಹಿತ್ಯಾಸಕ್ತರು ಭಾಗವಹಿಸಲಿದ್ದಾರೆ ಎಂದು ಕವನ ಸಂಕಲನದ ಕವಯಿತ್ರಿ ಡಾ, ಚಾಂದಿನಿ ಖಲೀದ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button