ಬುದ್ಧನ ಬೋಧನೆಗಳು ಶಾಂತಿ ಮತ್ತು ಸೌಹಾರ್ದಯುತ ಬದುಕಿಗೆ ಮಾರ್ಗದರ್ಶಿ – ಶ್ರೀಮತಿ ಬಿ.ಎಂ ಗೀತಾ ಸುಂದರೇಶ್ ದೀಕ್ಷಿತ್.
ಚಳ್ಳಕೆರೆ ಮೇ.08

ಗೌತಮ ಬುದ್ಧನು ಪ್ರತಿಪಾದಿಸಿದ ಬೋಧನೆಗಳು ಶಾಂತಿ ಮತ್ತು ಸೌಹಾರ್ದಯುತ ಬದುಕಿಗೆ ಸದಾ ಮಾರ್ಗದರ್ಶಿಯಾಗಿವೆ ಎಂದು ಚಳ್ಳಕೆರೆಯ ತ್ಯಾಗರಾಜನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಸದಸ್ಯರಾದ ಶ್ರೀಮತಿ ಬಿ.ಎಂ.ಗೀತಾ ಸುಂದರೇಶ್ ದೀಕ್ಷಿತ್ ತಿಳಿಸಿದರು.

ತ್ಯಾಗರಾಜ ನಗರದ ಸದ್ಭಕ್ತರಾದ ಶ್ರೀಮತಿ ನಂಜಮ್ಮ ಕೆಂಚಪ್ಪ ಶಿಕ್ಷಕರ ಸವಿತಾ ನಿವಾಸದಲ್ಲಿ “ಬುದ್ಧ ಪೂರ್ಣಿಮೆ” ಯ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು “ಭಗವಾನ್ ಬುದ್ಧನ ಜೀವನ-ವ್ಯಕ್ತಿತ್ವ ಹಾಗೂ ಅವರ ಬೋಧನೆಗಳ” ಬಗ್ಗೆ ವಿಶೇಷ ಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.

ಬುದ್ಧ ಎಂದರೆ ಎಚ್ಚರ ಗೊಂಡವನು, ಜ್ಞಾನೋದಯ ಪಡೆದವನು ಎಂದರ್ಥ. ಚತುರ್ ಆರ್ಯ ಸತ್ಯಗಳು, ಅಷ್ಟಾಂಗ ಮಾರ್ಗಗಳು ಅವನ ಪ್ರಸಿದ್ಧ ಬೋಧನೆಗಳಾಗಿದ್ದು ಜಗತ್ತು ದುಃಖಮಯವಾದದ್ದು ಆಸೆಯೇ ದುಃಖಕ್ಕೆ ಮೂಲ, ಆಸೆಗಳ ಸಮರ್ಥ ನಿಯಂತ್ರಣದಿಂದ ಮಾತ್ರ ಕಷ್ಟಗಳನ್ನು ಗೆದ್ದು ಸಾರ್ಥಕ ಜೀವನ ಕಟ್ಟಿ ಕೊಳ್ಳಬಹುದು. ಬುದ್ಧ ಹುಟ್ಟಿದ್ದು- ಜ್ಞಾನೋದಯ ಪಡೆದದ್ದು-ನಿರ್ವಾಣ ಹೊಂದಿದ್ದು ವೈಶಾಖ ಬುದ್ಧ ಪೂರ್ಣಿಮೆಯಂದು ಎಂದು ಅವನ ಬೋಧನೆಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿ ಕೊಟ್ಟರು.

ಬುದ್ಧ ಪೂರ್ಣಿಮೆಯ ಪ್ರಯುಕ್ತ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ, ಬುದ್ಧನ ನಾಮಸ್ಮರಣೆ, ಯತೀಶ್ ಎಂ ಸಿದ್ದಾಪುರ ಅವರಿಂದ ಬುದ್ಧನ ಭಜನೆಗಳು ಹಾಗೂ “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ,ಶ್ರೀಮತಿ ಎಂ ಗೀತಾ ನಾಗರಾಜ್, ಪ್ರಮೀಳಾ ಜಗದೀಶ್, ಯಶೋಧಾ ದೇವರಾಜ್, ನೇತ್ರಾ ಮಂಜುನಾಥ, ತಿಪ್ಪಮ್ಮ ಉಮಾಶಂಕರ್ ಅವರಿಂದ ವಿಶೇಷ ಭಜನೆಗಳು, ಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು.

ವಿಶೇಷ ಸತ್ಸಂಗ ಸಭೆಯಲ್ಲಿ ಶ್ರೀಮತಿ ನಂಜಮ್ಮ ಕೆಂಚಪ್ಪ, ಭಾಗ್ಯಲಕ್ಷ್ಮೀ, ಎಚ್ ಲಕ್ಷ್ಮೀದೇವಮ್ಮ, ಎಂ ಲಕ್ಷ್ಮೀದೇವಮ್ಮ, ದ್ರಾಕ್ಷಾಯಣಿ, ಜಯಮ್ಮ ನರಸಿಂಹಮೂರ್ತಿ, ಸುವರ್ಣ ನಾಗರಾಜ್, ಸರಸ್ವತಿ ರಾಜು, ಪ್ರೇಮಾ, ಗೀತಾ ವೆಂಕಟೇಶ್, ಹನ್ವಿಕಾ, ಅನುಸೂಯ ರಾಘವೇಂದ್ರ, ಸಹನಾ ಸೇರಿದಂತೆ ಸದ್ಭಕ್ತರು ಪಾಲ್ಗೊಂಡಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.
