ಬುದ್ಧನ ಪಂಚಶೀಲಗಳನ್ನು ಪಾಲಿಸಿ
ತರೀಕೆರೆ ಮೇ.5

ಮಾನವನ ಕಲ್ಯಾಣಕ್ಕೆ ಬೌದ್ಧ ಧರ್ಮವನ್ನು ಪಾಲಿಸಬೇಕು ಎಂದು ಕ ದ ಸಂ ಸ ರಾಜ್ಯ ಸಂಘಟನಾ ಸಂಚಾಲಕರಾದ ತರೀಕೆರೆ ಎನ್ ವೆಂಕಟೇಶ್ ರವರು ಬೌದ್ಧ ಮಹಾಸಭಾ,ಪಟ್ಟಣದ ಡಾ. ಬಿಆರ್ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ, 2587 ನೇ ಬುದ್ಧ ಜಯಂತಿ ಕಾರ್ಯಕ್ರಮದಲ್ಲಿ ಹೇಳಿದರು. ಬುದ್ಧನ ಪಂಚಶೀಲಗಳನ್ನು ಪಾಲಿಸಿ, ಅಹಿಂಸಾ ಮಾರ್ಗದಲ್ಲಿ ಶಾಂತಿ ನೆಮ್ಮದಿಯ ಜೀವನ ಸಾಧ್ಯ ಆದ್ದರಿಂದ ಎಲ್ಲರೂ ಬೌದ್ಧ ಧರ್ಮವನ್ನು ಅನುಸರಿಸೋಣ ಪ್ರತಿ ಬುದ್ಧ ಪೂರ್ಣಿಮೆಯನ್ನು ಹಬ್ಬದಂತೆ ಆಚರಿಸೋಣ ಎಂದು ಹೇಳಿದರು. ಶಿಕ್ಷಕರಾದ ಕರಿಯಪ್ಪ ಮಾತನಾಡಿ ಈ ನೆಲದಲ್ಲಿ ಹುಟ್ಟಿದ ಬೌದ್ಧ ಧರ್ಮ ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಆಚರಣೆಯಲ್ಲಿದೆ. ಬುದ್ಧನ ಶಾಂತಿ ಮಾರ್ಗದಲ್ಲಿ ನಡಿಯೋಣ ಎಂದು ಕರೆ ನೀಡಿದರು. ಪತ್ರಕರ್ತರಾದ ಜಿ ಟಿ ರಮೇಶ್ ಮಾತನಾಡಿ ಬುದ್ಧನ ಅಹಿಂಸಾ ಮಾರ್ಗ ಶಾಂತಿ ಪಾಲನೆಯಿಂದ ಎಲ್ಲರೂ ಸುಖ ಜೀವನ ಸಾಗಿಸಬಹುದು ಎಂದು ಹೇಳಿದರು. ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಿ ಕೃಷ್ಣ ನಾಯ್ಕ್, ಕದ ಸಂಸ ಮುಖಂಡರಾದ ಕೆ ನಾಗರಾಜ್, ಶಿಕ್ಷಕ ಡಿಟಿ ಮಂಜಪ್ಪ, ಯರೇಹಳ್ಳಿ ಮಂಜಪ್ಪ , ಪಿರುಮೇನಹಳ್ಳಿ ದಾಸ್ಯ ನಾಯ್ಕ್, ಬಸವರಾಜ್, ಮುಂತಾದವರು ಎಲ್ಲರೂ ಬುದ್ಧನ ಭಾವಚಿತ್ರಕ್ಕೆ ಮೇಣದ ದೀಪ ಬೆಳಗಿಸಿ, ಪುಷ್ಪ ನಮನ ಸಲ್ಲಿಸಿ, ತ್ರೀ ಸರಣಿ ಪಠಿಸಿದರು. ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ

