ಜಾನಪದ ಕೋಗಿಲೆ ಉಮೇಶ್ ನಾಯಕ್ ಚಿನ್ನ ಸಮುದ್ರ ಇವರಿಗೆ – ಪ್ರೋತ್ಸಾಹಿಸಿ, ಬೆಂಬಲಿಸಲು ಕೋರಿಕೆ.
ಚಿನ್ನ ಸಮುದ್ರ ಆ.28

ಜೀ ಕನ್ನಡದ ವಾಹಿನಿಯ ಪ್ರಸಾರವಾಗುತ್ತಿರುವ ಸರಿಗಮಪ ತಂಡದವರಿಗೆ ಹಾಗೂ ರಾಘವೇಂದ್ರ ಹುಣಸೂರು ಸರ್ ಅವರಿಗೆ ಕೇಳಿ ಕೊಳ್ಳುವುದೇನೆಂದರೆ ಕಳೆದ 25/30 ವರ್ಷಗಳಿಂದ ಜನಪದ ಗಾಯನ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು ನಿಮ್ಮ ಚಾನಲ್ ಸರಿಗಮಪ ಕಾರ್ಯಕ್ರಮದಲ್ಲಿ ಸುಮಾರು 15 ವರ್ಷಗಳಿಂದ ನಾವು ಸಂಗೀತ ಸೇವೆ ನೀಡುತ್ತಾ ಬಂದಿರುತ್ತೇವೆ.

ನಾವು ಗ್ರಾಮೀಣ ಪ್ರದೇಶದ ಕಲಾವಿದರು ಬದುಕು ಸವೆಸುತ್ತಾ ಬಂದಿರುತ್ತೇವೆ. ಫಸ್ಟ್ ಸೆಕೆಂಡ್ ರೌಂಡ್ ನಲ್ಲಿ ಆಯ್ಕೆಯಾದ ನಂತರ ನಿಮ್ಮನ್ನು ಫೋನ್ ಮಾಡುತ್ತೇವೆ ಅಂತ ಹೇಳಿ ಕಳುಹಿಸುತ್ತಿದ್ದಾರೆ. ನಂತರ ಯಾವುದೇ ಕರೆ ಮಾಡದಂಗೆ ಕಲಾವಿದರನ್ನು ಅನ್ಯಾಯ ಮಾಡುತ್ತಿದ್ದೀರಿ ಇದಕ್ಕೆ ನಮ್ಮ ದಾವಣಗೆರೆಯ ಸಮಸ್ತ ಜನತೆಗೂ ಹಾಗೂ ಉಮೇಶ್ ನಾಯಕ್ ಕಲಾವಿದರ ಬಳಗ ಹಾಗೂ ಎಲ್ಲಾ ಪತ್ರಿಕಾ ಮಾಧ್ಯಮದವರನ್ನು ಕೇಳಿ ಕೊಳ್ಳುತ್ತಿದ್ದೇವೆ.

ಕಾರಣ ಏನು ಅಂತಾ ಗೊತ್ತಾಗ್ತಿಲ್ಲ ಹಾಡುಗಾರಿಕೆ ಕಲೆಯನ್ನು ವೃತ್ತಿಯನ್ನಾಗಿ ಮಾಡಿ ಕೊಂಡಿರುತ್ತೇವೆ ನೀವು ಇಂಥಾ ಪ್ರತಿಭೆಯನ್ನು ಪ್ರೋತ್ಸಾಹಿಸಬೇಕು ಯಾಕೆಂದರೆ ಈಗಿನ ಕಾಲದಲ್ಲಿ ಜಾನಪದ ಕಲೆಗಳು ನಶಿಸು ಹೋಗಬಾರ ದೆಂದು ತಮ್ಮಲ್ಲಿ ಕೇಳಿ ಕೊಳ್ಳುತ್ತಿದ್ದೇವೆ ಜೈ ಭೀಮ್ ಜೈ ಸೇವಾಲಾಲ್.

