ಸಾರ್ವಜನಿಕರಿಗೆ ಅಡಚಣೆ ಆಗದ ರೀತಿಯಲ್ಲಿ ನಿರ್ವಹಿಸಲು – ಅಧಿಕಾರಿಗಳಿಗೆ ಸೂಚಿಸಿದ ಸಾಹುಕಾರ.
ಮಾನ್ವಿ ಆ.09

ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಮಾನ್ವಿ ನಗರದ ಮಹಾ ಋಷಿ ವಾಲ್ಮೀಕಿ ವೃತ್ತದ ನೂತನ ಸ್ಥಳದಲ್ಲಿ ವೃತ್ತ ಸ್ಥಾಪನೆಗೆ ಸ್ಥಳ ವೀಕ್ಷಿಸಿದ ಮಾನ್ವಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಜಿ ಹಂಪಯ್ಯ ನಾಯಕ್ ಸಾಹುಕಾರ್ ಇವರು.
ರಾಜ್ಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವುದರಿಂದ ಮಾನ್ವಿ ನಗರದ ಮಹಾ ಋಷಿ ವಾಲ್ಮೀಕಿ ವೃತ್ತ ರಸ್ತೆ ಕಾಮಗಾರಿಗೆ ಅಡಚಣೆ ಉಂಟಾಗಿರುವುದರಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸ್ಥಳ ಹಾಗೂ ರಾಜ್ಯ ಉಗ್ರಣ ನಿಗಮದ ಸ್ಥಳದಲ್ಲಿ ವೃತ್ತವನ್ನು ನೂತನವಾಗಿ ನಿರ್ಮಿಸಲು ಈ ದಿನ ಸಮಾಜದ ಮುಖಂಡರೊಂದಿಗೆ ಹಾಗೂ ಅಧಿಕಾರಿಗಳೊಡನೆ ಸಂಬಂಧಪಟ್ಟ ಮೇಲಧಿಕಾರಿ ಗಳೊಂದಿಗೆ ಮಾತನಾಡಿ ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ವೃತ್ತ ನಿರ್ಮಾಣ ಮಾಡಲು ಅನುಕೂಲ ಮಾಡಿ ಕೊಡಲು ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.
ಈ ಸಂದರ್ಭದಲ್ಲಿ ಶಾಸಕರ ಸುಪುತ್ರರಾದ ಶಿವರಾಜ್ ನಾಯಕ್ ವಕೀಲರು, ರಾಜ ಸುಭಾಷ್ ಚಂದ್ರ ನಾಯಕ್, ಹನುಮೇಶ್ ನಾಯಕ್ ಸದಾಪೂರ್, ಹಂಪಯ್ಯ ನಾಯಕ್, ಹನುಮಂತ ಸಿಕಲ್, ಗಂಗಯ್ಯ ನಾಯಕ್,ರಾಮಣ್ಣ ನಾಯಕ್, ಕೊಂಡಯ್ಯ ನಾಯಕ್, ಹನುಮಂತರಾಯ ನಾಯಕ್, ಸತ್ತಾರ್ ಬಂಗ್ಲೆವಾಲೆ ಉಗ್ರಣದ ನಿಗಮದ ಮಾನ್ವಿ ವ್ಯವಸ್ಥಾಪಕರಾದ ಮುನಿಸ್ವಾಮಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಹಾಯಕ ಕಾರ್ಯದರ್ಶಿಗಳಾದ ಮಾಳಪ್ಪ ಇನ್ನಿತರರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

