ಸಾಮಾಜಿಕ ಹೋರಾಟಗಾರ ಭೂಮಾನಂದ ಅವರ ಭೀಕರ ಹತ್ಯೆ ಖಂಡಿಸಿ ಆ.10 ರಂದು ಬೃಹತ್ ಪ್ರತಿಭಟನೆ – ಮಾದಿಗ ಮಹಾ ಸಭಾ ವತಿಯಿಂದ ಹೋರಾಟಕ್ಕೆ ಕರೆ.
ಗದಗ ಆ.09


ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಬೂದಿಹಾಳ ಗ್ರಾಮದ ಮಾದಿಗ ಸಮುದಾಯದ ಪ್ರಮುಖ ಮುಖಂಡ ಹಾಗೂ ಸಾಮಾಜಿಕ ಹೋರಾಟಗಾರ ಶ್ರೀ ಭೂಮಾನಂದ ಅವರ ಅಮಾನುಷ ಹತ್ಯೆಯನ್ನು ಗದಗ ಜಿಲ್ಲಾ ಮಾದಿಗ ಮಹಾ ಸಭಾ ಅತ್ಯಂತ ತೀವ್ರವಾಗಿ ಖಂಡಿಸಿದೆ.
ದಲಿತರ ಮೇಲೆ ದಿನೇ ದಿನೇ ಹೆಚ್ಚುತ್ತಿರುವ ದೌರ್ಜನ್ಯ ಅಸ್ಪೃಶ್ಯತೆಯ ಕಂದಾಚಾರ ಹಾಗೂ ಹತ್ಯೆಗಳ ವಿರುದ್ಧ ಮಾದಿಗ ಮಹಾ ಸಭಾ ಸದಾ ಹೋರಾಟ ನಡೆಸಲಿದ್ದು ಸರ್ಕಾರಕ್ಕೆ ಕಟ್ಟು ನಿಟ್ಟಿನ ಎಚ್ಚರಿಕೆ ನೀಡಲಿದೆ.
ಈ ಕೊಲೆ ಪ್ರಕರಣದಲ್ಲಿ ತೊಡಗಿರುವ ಆರೋಪಿಗಳನ್ನು ತಕ್ಷಣವೇ ಬಂಧಿಸಿ, ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಹಾಗೂ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸ ಬೇಕೆಂದು ಸಂಘಟನೆ ಆಗ್ರಹಿಸಿದೆ.
ಈ ಭೀಕರ ಹತ್ಯೆಯನ್ನು ಖಂಡಿಸಿ ಮತ್ತು ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸ ಬೇಕೆಂದು ಆಗ್ರಹಿಸಿ ದಿನಾಂಕ:- 10-08-2026 (ಸೋಮವಾರ) ರಂದು ಬೆಳಿಗ್ಗೆ 10:00 ಗಂಟೆಗೆ ಗದಗ ನಗರದ ಟಿಪ್ಪು ಸರ್ಕಲ್ ಬಳಿ ಬೃಹತ್ ಪ್ರತಿಭಟನಾ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ನಂತರ ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗುವುದು.

ಗದಗ ಜಿಲ್ಲೆಯ ಲಕ್ಷ್ಮೇಶ್ವರ ಶಿರಹಟ್ಟಿ, ಮುಂಡರಗಿ, ರೋಣ, ನರಗುಂದ ಮತ್ತು ಗಜೇಂದ್ರಗಡ ತಾಲೂಕುಗಳ ಎಲ್ಲಾ ಸಮುದಾಯದ ಮುಖಂಡರು, ವಿವಿಧ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಜಿಲ್ಲೆಯ ಸರ್ವ ದಲಿತ ಕುಲ ಬಾಂಧವರು ಈ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಹೋರಾಟವನ್ನು ಯಶಸ್ವಿ ಗೊಳಿಸಬೇಕಾಗಿ ವಿನಂತಿಸಿ ಕೊಳ್ಳಲಾಗಿದೆ.
ನೊಂದ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡಲು ಹಾಗೂ ದಲಿತರ ಮೇಲಿನ ದೌರ್ಜನ್ಯ ತಡೆಯಲು ಪ್ರತಿಯೊಬ್ಬರೂ ಈ ಹೋರಾಟಕ್ಕೆ ಕೈಜೋಡಿಸ ಬೇಕು.
ಸ್ಥಳ:- ಟಿಪ್ಪು ಸರ್ಕಲ್ ಹತ್ತಿರ, ಗದಗ ದಿನಾಂಕ:- 10-08-2026 ಸೋಮವಾರ ಸಮಯ:- ಬೆಳಿಗ್ಗೆ 10:00 ಗಂಟೆಗೆ ಪ್ರಕಟಣೆಯಲ್ಲಿ ವಿನಂತಿಸಿದವರು ಶ್ರೀ ವಿಜಯ ಕಲ್ಮನಿ (ಗೌರವಾಧ್ಯಕ್ಷರು, ಗದಗ ಜಿಲ್ಲಾ ಮಾದಿಗ ಮಹಾ ಸಭಾ) ಶ್ರೀ ಉಡಚಪ್ಪ ಹಳ್ಳಿಕೇರಿ (ಜಿಲ್ಲಾಧ್ಯಕ್ಷರು, ಗದಗ ಜಿಲ್ಲಾ ಮಾದಿಗ ಮಹಾ ಸಭಾ) ಮತ್ತು ಸರ್ವ ಪದಾಧಿಕಾರಿಗಳು ಗದಗ ಜಿಲ್ಲಾ ಮಾದಿಗ ಮಹಾ ಸಭಾ. ಸೇರಿದಂತೆ ವಿವಿಧ ದಲಿತರ ಪರ ಸಂಘಟನೆಯ ಒಕ್ಕೂಟದವರು ವಿನಂತಿಸಿದ್ದಾರೆ ಎಂದು ವರದಿಯಾಗಿದೆ.
