🚨ರಾಜ್ಯಮಟ್ಟದ ವಿಶೇಷ ತನಿಖಾ ವರದಿ, ಪತ್ರಿಕೋದ್ಯಮದ ಹೆಸರಲ್ಲಿ ಹಾದಿರಂಪ ಮಾಡುತ್ತಿರುವ ನೀಚ ನಕಲಿಗಳ ದಂಧೆ!🚨ಸೌಜನ್ಯ ಹೋರಾಟದ ಪವಿತ್ರತೆಗೆ ಮಸಿ ಬಳಿದ ನಾಲಾಯಕ್ ನಕಲಿಗಳು: ‘ನ್ಯೂಸ್ ನೆಕ್ಸ್ಟ್’ ಲೂಟಿ ಗ್ಯಾಂಗ್‌ನ ಕಿಡಿಗೇಡಿತನಕ್ಕೆ ನ್ಯಾಯದ ಹಾದಿ ಬಂದ್..? – ಈ ಬ್ಲಾಕ್ ಮೇಲ್ ಮಾಫಿಯಾವನ್ನು ಜೈಲಿಗಟ್ಟದಿದ್ದರೆ ರಾಜ್ಯಕ್ಕೆ ಉಳಿಗಾಲವಿಲ್ಲ..!
ಬೆಂಗಳೂರು/ಉಡುಪಿ ಏ.15

ಸಮಾಜದ ಕನ್ನಡಿ ಎಂದು ಕರೆಸಿ ಕೊಳ್ಳುವ ಪತ್ರಿಕೋದ್ಯಮಕ್ಕೆ ಇವತ್ತು ಕೆಲವೊಬ್ಬ ಗಬ್ಬು ನಾರುವ ನಕಲಿಗಳಿಂದಾಗಿ ಗತಿ ಇಲ್ಲದಂತಾಗಿದೆ. ದಶಕಗಳಿಂದ ನ್ಯಾಯಕ್ಕಾಗಿ ಕಣ್ಣೀರು ಸುರಿಸುತ್ತಿರುವ “ಸೌಜನ್ಯ ಹೋರಾಟಗಾರರಿಗೂ” ಅಡ್ಡಗಾಲಾಗಿ ನಿಂತಿರುವ ಈ ‘ನ್ಯೂಸ್ ನೆಕ್ಸ್ಟ್’ ಎಂಬ ದಂಧೆಕೋರ ಯೂಟ್ಯೂಬ್ ಚಾನೆಲ್‌ನ ಅಸಲಿ ಬಣ್ಣ ಈಗ ಬೀದಿಗೆ ಬಂದಿದೆ.
ನ್ಯಾಯಕ್ಕಾಗಿ ಬೀದಿಯಲ್ಲಿ ಹೋರಾಡುವವರ ಬೆನ್ನಿಗೆ ಚೂರಿ ಹಾಕುತ್ತಿರುವ ಈ ನಕಲಿ ಪತ್ರಕರ್ತ “ಪ್ರನೂತ್ ಗಾಣಿಗ” ಮತ್ತು ಅವನ ಗ್ಯಾಂಗ್‌ನ ನವರಂಗಿ ಆಟಕ್ಕೆ ಈಗ ಸರ್ಕಾರವೇ ಬ್ರೇಕ್ ಹಾಕ ಬೇಕಿದೆ.
🔥 ಹೋರಾಟಗಾರರ ಹೊಟ್ಟೆಗೆ ಹೊಡೆಯುತ್ತಿರುವ ನಕಲಿಗಳು, ಇವರಿಂದಲೇ ಜಯ ಸಿಗುತ್ತಿಲ್ಲವೇ..?
ಸೌಜನ್ಯ ಪ್ರಕರಣದಲ್ಲಿ ನ್ಯಾಯ ಸಿಗಬೇಕೆಂದು ಇಡೀ ರಾಜ್ಯವೇ ಎದ್ದು ನಿಂತಿದೆ. ಆದರೆ ಮಾಧ್ಯಮದ ಮುಖವಾಡ ಹಾಕಿ ಕೊಂಡಿರುವ ಈ ಲೂಟಿಕೋರರು ಹೋರಾಟಗಾರರ ಹಾದಿ ತಪ್ಪಿಸಿ, ಅವರ ಪವಿತ್ರ ಹೋರಾಟವನ್ನೇ ಬ್ಲಾಕ್ ಮೇಲ್ ಮಾಡಲು ಬಳಸಿ ಕೊಳ್ಳುತ್ತಿದ್ದಾರೆ. ಇಂತಹ ಕೆಟ್ಟ ಹೈಬ್ರೀಡ್ ನಕಲಿ ಗಳಿಂದಲೇ ಇವತ್ತಿಗೂ ನ್ಯಾಯ ಸಿಗದೆ ಹೋರಾಟಗಾರರು ಬೀದಿಯಲ್ಲಿ ಅಲೆಯುವಂತಾಗಿದೆ. ಇಂತಹ ಕಿಡಿಗೇಡಿಗಳಿಗೆ ಬ್ರೇಕ್ ಹಾಕದಿದ್ದರೆ ಸತ್ಯಕ್ಕೆ ಜಯ ಸಿಗುವುದು ಯಾವಾಗ? ಎಂದು ಸಾರ್ವಜನಿಕರು ಆಕ್ರೋಶದ ಬೆಂಕಿ ಉಗುಳುತ್ತಿದ್ದಾರೆ.
🚨ಒಂದೇ ದಿನದಲ್ಲಿ ಎರಡು ವೇಷ, ಸುಲಿಗೆಕೋರರ ನವರಂಗಿ ಬಯಲು..!
ಕುಕ್ಕೆಹಳ್ಳಿಯ ಬೆಳ್ಳಂಪಳ್ಳಿಯಲ್ಲಿ ಕಾನೂನು ಬದ್ಧವಾಗಿ ಉದ್ಯಮ ನಡೆಸುತ್ತಿರುವ ಅಜಿತ್ ಶೆಟ್ಟಿ ಅವರನ್ನು ಸುಲಿಗೆ ಮಾಡಲು ಈ ಚಾನೆಲ್ ಹೂಡಿದ ತಂತ್ರ ಸತ್ತವನಿಗೂ ನಗು ಬರುವಂತಿದೆ.
ವೇಷ 1:-
ಅಜಿತ್ ಶೆಟ್ಟಿ ಕಚೇರಿಗೆ ಬಂದಾಗ “ನೀವು ನಿಯತ್ತಾಗಿ ಕೆಲಸ ಮಾಡುತ್ತಿದ್ದೀರಿ” ಎಂದು ಅವರ ಮುಖಕ್ಕೆ ಮಂಗಳಾರತಿ ಎತ್ತಿದ ಇದೇ ನಕಲಿ ಪತ್ರಕರ್ತ, ಬೆನ್ನಲ್ಲೇ ಕೈ ಚಾಚಿದ್ದಾನೆ.
ವೇಷ 2:-
ಅಜಿತ್ ಶೆಟ್ಟಿ ಲಕ್ಷ ಲಕ್ಷ ಹಣ ಕೊಡಲು ಒಪ್ಪದಿದ್ದಾಗ, ತಕ್ಷಣ ಅದೇ ವಿಡಿಯೋವನ್ನು ನೀಚವಾಗಿ ಎಡಿಟ್ ಮಾಡಿ ಅವರನ್ನು “ಗಣಿಗಾರಿಕೆಯ ಕಿಂಗ್ ಪಿನ್” ಎಂದು ಸುಳ್ಳು ಸುದ್ದಿ ಹರಡಿದ್ದಾನೆ. ಈ ನಾಲಾಯಕ್ ಬುದ್ಧಿಯನ್ನು ನೋಡಿ ಸಾರ್ವಜನಿಕರು ಉಗಿಯುತ್ತಿದ್ದಾರೆ.
💰 ₹22.50 ಲಕ್ಷದ ಹಗಲು ದರೋಡೆ, ಕೋಟಾ ಠಾಣೆಯಲ್ಲಿ FIR ಬ್ರಾಂಡ್..!
ಮಾಧ್ಯಮ ಅಂದ್ರೆ ಗೌರವ ಅಂದು ಕೊಂಡರೆ, ಈ ಲೂಟಿಕೋರರು ಅದನ್ನೊಂದು ಸುಲಿಗೆಯ ಆಯುಧ ಮಾಡಿ ಕೊಂಡಿದ್ದಾರೆ. ಉದ್ಯಮಿ ಅಜಿತ್ ಶೆಟ್ಟಿ ಅವರಿಂದ ಬರೋಬ್ಬರಿ ₹22.50 ಲಕ್ಷ. ಹಣಕ್ಕೆ ಡಿಮ್ಯಾಂಡ್ ಇಟ್ಟಿರುವ ಈ ಭ್ರಷ್ಟ ಗ್ಯಾಂಗ್ ಮೇಲೆ ಈಗ ಕೋಟಾ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 62/2026 ರಡಿ ಎಫ್‌ಐಆರ್ ಹೂಡಲಾಗಿದೆ.
ಪೊಲೀಸರ ಅತಿಥಿಗಳಾಗಲಿರುವ ನಕಲಿಗಳು:-
ಕೊತ್ತಾಡಿ ವಿಜಯಕುಮಾರ್ ಶೆಟ್ಟಿ.
ಬನ್ನಾಡಿ ಅಶೋಕ್ ಶೆಟ್ಟಿ.
ರಮೇಶ್ ಕೋಟ್ಯನ್ ಮತ್ತು ಗ್ಯಾಂಗ್.
⚖️ ಹೊಸ ಕಾನೂನಿನ ಅಡಿ ಇವರಿಗೆ ‘ಜೈಲು’ ಗ್ಯಾರಂಟಿ..!
ಹೊಸ ಭಾರತೀಯ ನ್ಯಾಯ ಸಂಹಿತೆ (BNS) ಅಡಿ ಇಂತಹj ಕಿಡಿಗೇಡಿಗಳಿಗೆ ಸಿಡಿಲು ಬಡಿವುದು ಖಚಿತ.
ಬಿಎನ್ಎಸ್ ಸೆಕ್ಷನ್ 308(2):-
ಬ್ಲಾಕ್ ಮೇಲ್ ಮೂಲಕ ಹಣ ವಸೂಲಿ ಮಾಡುವವರಿಗೆ ಕಠಿಣ ಜೈಲು ಶಿಕ್ಷೆ.
ಬಿಎನ್ಎಸ್ ಸೆಕ್ಷನ್ 126(2):-
ಜನರ ಹಾದಿ ತಡೆದು ಬೆದರಿಕೆ ಹಾಕುವ ನೀಚ ಕೃತ್ಯಕ್ಕೆ ಶಿಕ್ಷೆ.
ವಂಚನೆ:-
ಪತ್ರಕರ್ತರಲ್ಲದಿದ್ದರೂ ಪತ್ರಕರ್ತರೆಂದು ನಟಿಸಿ (Personation) ಜನರನ್ನು ಲೂಟಿ ಮಾಡುವುದು ಅಕ್ಷಮ್ಯ ಅಪರಾಧ.
🎙️ “ಈ ನೀಚ ಷಡ್ಯಂತ್ರಕ್ಕೆ ನಾನು ತಲೆಬಾಗಲ್ಲ” – ಅಜಿತ್ ಶೆಟ್ಟಿ ಸವಾಲು.
ಈ ಬಗ್ಗೆ ಗುಡುಗಿರುವ ಉದ್ಯಮಿ ಅಜಿತ್ ಶೆಟ್ಟಿ, “ನನ್ನ ಮೇಲೆ ಸುಳ್ಳು ಆರೋಪ ಮಾಡಿ ಬ್ಲಾಕ್ ಮೇಲ್ ಮಾಡುತ್ತಿರುವ ಈ ಪ್ರನೂತ್ ಗಾಣಿಗ ತನ್ನ ಅಪ್ಪನ ಆಣೆಗೂ ಆರೋಪ ಸಾಬೀತು ಮಾಡಲಿ. ಇವನು ಕೇಳಿದ ಹಣ ಕೊಡದಿದ್ದಕ್ಕೆ ಈ ರೀತಿ ನವರಂಗಿ ಆಟವಾಡುತ್ತಿದ್ದಾನೆ. ಇಂತಹ ಲೂಟಿಕೋರರ ವಿರುದ್ಧ ನಾನು ಸುಮ್ಮನೆ ಕೂರುವುದಿಲ್ಲ, ಇವರನ್ನು ಜೈಲಿಗೆ ಅಟ್ಟಿಯೇ ಸಿದ್ಧ” ಎಂದು ಸವಾಲು ಹಾಕಿದ್ದಾರೆ.
🔥 ಸರ್ಕಾರಕ್ಕೆ ನೇರ ಎಚ್ಚರಿಕೆ, ಈ ಮಾಫಿಯಾವನ್ನು ಬೇರು ಸಮೇತ ಕಿತ್ತು ಹಾಕಿ..!
ಯಾವುದೇ **ಆರ್‌ಎನ್‌ಐ (RNI)** ಮಾನ್ಯತೆ ಇಲ್ಲದ ಇಂತಹ ಯೂಟ್ಯೂಬ್ ಚಾನೆಲ್‌ಗಳು ಸಮಾಜದ ಶಾಂತಿ ಕೆಡಿಸುತ್ತಿವೆ. ಈ ಕೂಡಲೇ ರಾಜ್ಯ ಸರ್ಕಾರ ಎಚ್ಚೆತ್ತು ಕೊಳ್ಳದಿದ್ದರೆ ಸಾರ್ವಜನಿಕರೇ ಇಂತಹ ನಕಲಿಗಳಿಗೆ ಬೀದಿಯಲ್ಲಿ ಬುದ್ಧಿ ಕಲಿಸುವ ಕಾಲ ಹತ್ತಿರ ಬಂದಿದೆ.
‘ನ್ಯೂಸ್ ನೆಕ್ಸ್ಟ್’ ಚಾನೆಲ್ ಅನ್ನು ಇಂದೇ ಬ್ಯಾನ್ ಮಾಡಬೇಕು.
ವರದಿ ಮಾಡಿದ ಎಲ್ಲಾ ನಕಲಿಗಳ ಮೇಲೆ ದೇಶ ದ್ರೋಹದ ಪ್ರಕರಣ ದಾಖಲಿಸಿ ಒಳಗೆ ಹಾಕಬೇಕು.
ಜಿಲ್ಲಾಡಳಿತವು ಇಂತಹ ನಕಲಿಗಳ ಪರವಾನಗಿ ಕಿತ್ತು ಕೊಂಡು ಇವರನ್ನು ಕೂಡಲೇ ಬಂಧಿಸ ಬೇಕು.
“ಪತ್ರಿಕೋದ್ಯಮ ಸಮಾಜದ ಕನ್ನಡಿ ಯಾಗಬೇಕೇ ಹೊರತು ಸುಲಿಗೆಯ ಆಯುಧ ವಾಗಬಾರದು.
” ರಾಜ್ಯ ಸರ್ಕಾರವು ಈ ವರದಿಯನ್ನೇ ಗಂಭೀರವಾಗಿ ಪರಿಗಣಿಸಿ ಈ ಮಾಫಿಯಾಕ್ಕೆ ಮುಕ್ತಿ ನೀಡಲಿ ಎಂಬುದು ಜನರ ಆಗ್ರಹ.
“ಮಾಧ್ಯಮದ ಹೆಸರಲ್ಲಿ ಸುಲಿಗೆ ಮಾಡುವ ನಕಲಿಗಳಿಗೆ ಸಮಾಜದಲ್ಲಿ ಜಾಗವಿಲ್ಲ!”
ವರದಿ:ಆರತಿ.ಗಿಳಿಯಾರು.ಉಡುಪಿ
