ಶ್ರೀ ವೀರ ಪುಲಿಕೇಶಿ ವಿದ್ಯಾ ವರ್ಧಕ ಸಂಸ್ಥೆಯ. 2026-2027 ನೆ ಸಾಲಿನ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ಕಾರ್ಯಕ್ರಮ.

ಶ್ರೀ ವೀರ ಪುಲಿಕೇಶಿ ವಿದ್ಯಾ ವರ್ಧಕ ಸಂಸ್ಥೆಯ ಶ್ರೀ ಜಿ ಎಂ ಕಲ್ಯಾಣಶೆಟ್ಟಿ ಪದವಿ-ಪೂರ್ವ ಮಹಾವಿದ್ಯಾಲಯ ಬಾದಾಮಿ. 2026-2027 ನೆ ಸಾಲಿನ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ,ಪ್ರತಿಭಾ ಪುರಸ್ಕಾರ, ಎನ್ಸಿಸಿ,ಎನ್ಎಸ್ಎಸ್,ರೋವರ್ ರೇಂಜರ್ಸ್ ಮತ್ತು ಸೇವಾದಳ ಘಟಕಗಳ ಉದ್ಘಾಟನಾ ಕಾರ್ಯಕ್ರಮ.ಇಂದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಮತಿ ಮೈತ್ರೇಯಿನಿ ಜಿ. ಗದಿಗೆಪ್ಪಗೌಡರ ಅವರು ವಿದ್ಯಾರ್ಥಿಗಳನ್ನ ಕುರಿತು ಜೀವನದಲ್ಲಿ ಶಿಸ್ತು, ಸಮಯ ಪಾಲನೆ ಅಗತ್ಯ,ಅಲ್ಲದೆ ಇಂದಿನ ಕಂಪ್ಯೂಟರ್ ಯುಗದಲ್ಲಿ ವಿದ್ಯಾರ್ಥಿಗಳಾದವರು ಬರೀ ಟಿವಿ, ಫೋನ್ ಅಂತ, ತಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥ ಹಾಳು ಮಾಡುತ್ತಿದ್ದಾರೆ.

ಫೋನಿನ ಹಿಂದೆ ಬೆನ್ನು ಹತ್ತಿ ತಾಸುಗಟ್ಟಲೆ ಸಮಯವನ್ನ ಹಾಳು ಮಾಡುತ್ತಾ ಓದಿನ ಕಡೆಗೆ ಹೆಚ್ಚಿನ ಗಮನವನ್ನು ಹರಿಸುತ್ತಿಲ್ಲ, ತಂದೆ -ತಾಯಿಗಳ ಮಾತುಗಳನ್ನು ಇತ್ತೀಚೆಗೆ ವಿದ್ಯಾರ್ಥಿಗಳು ನಿರ್ಲಕ್ಷಿಸುತ್ತಿರುವುದು ಸರಿಯಲ್ಲ ಎಂದು ಬುದ್ಧಿಮಾತು ಹೇಳಿದರು. ಹಾಗೆ ಹೆಚ್ಚಿನ ಸಮಯವನ್ನ ವಿದ್ಯಾರ್ಥಿಗಳು ಓದಿನ ಕಡೆಗೆ ಬಳಸಿಕೊಳ್ಳಬೇಕು ಏಕೆಂದರೆ *ವಿದ್ಯಾರ್ಥಿಗಳು 13 ರಿಂದ 19 ನೆಯ ವಯಸ್ಸಿನ ಒಳಗಡೆಯೇ ನೀವು ಜೀವನದ ಗುರಿಯನ್ನು ನಿರ್ಧರಿಸಿಕೊಂಡು 19 ರಿಂದ 32 ವಯಸ್ಸಿನ ಒಳಗಡೆಯೇ ನೀವೆಲ್ಲ ನಿಮ್ಮ ಗುರಿಯನ್ನು ತಲುಪಬೇಕಾಗುತ್ತದೆ.* ಗಣ್ಯವ್ಯಕ್ತಿಗಳಾದ ಸ್ವಾಮಿ ವಿವೇಕಾನಂದರ, ಸರ್.ಎಮ್.ವಿಶ್ವೇಶ್ವರಯ್ಯ ನವರ, ಡಾ .ಅಬ್ದುಲ್ ಕಲಾಂ ಅವರ ಹಾಗೆ ಉನ್ನತ ಸ್ಥಾನವನ್ನು ನೀವು ಕೂಡ ಅಲಂಕರಿಸಿ ಸಮಾಜಕ್ಕೆ ಮಾದರಿಯಾಗಬೇಕೆoದರು. ಕಳೆದುಹೋಗುವ ಸಮಯ ಎಂದು ಮರಳಿ ಬಾರದು ಎಂಬುದನ್ನು ವಿದ್ಯಾರ್ಥಿಗಳು ಅರಿಯಬೇಕು ಎಂದು ಸಮಯದ‌ ಮೌಲ್ಯವನ್ನು ತಿಳಿಸಿದರು. ಪರೀಕ್ಷೆಗಳಲ್ಲಿ ಯಶಸ್ಸು ಪ್ರಾಪ್ತಿಗೆ ಪ್ರಯತ್ನ ನಿರಂತರವಿದ್ದಾಗ ಮಾತ್ರ ಸಾಧ್ಯ, ಅನುತ್ತೀರ್ಣವೂ ಪರೀಕ್ಷೆಯ ಒಂದು ಭಾಗ ಅದಕ್ಕಾಗಿ ಜೀವವನ್ನ ಹಾನಿ ಮಾಡಿಕೊಳ್ಳಬಾರದು ಎಂಬ ಎಚ್ಚರಿಕೆ ಮಾತನ್ನು ಸಹ ಹೇಳಿದರು.

ಅಲ್ಲದೆ ಹಲವಾರು ಮಹನೀಯರ ಆದರ್ಶಗಳನ್ನು ಅವರ ಸಂದೇಶಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ತಮ್ಮ ಜೀವನದ ಕೆಲವು ಕಹಿ ಮತ್ತು ಸಿಹಿ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.ಕಾರ್ಯಕ್ರಮದಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯುಸಿಯಲ್ಲಿ ಪ್ರಥಮಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಹಾಗೆ 100ಕ್ಕೆ 100 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಮತ್ತು ಈ ಸಾಧನೆಗೈಯಲು ಮಾರ್ಗದರ್ಶನ ನೀಡಿದ ಉಪನ್ಯಾಸಕರೆಲ್ಲರಿಗೂ ಸನ್ಮಾನ ಏರ್ಪಡಿಸಲಾಗಿತ್ತು, ವಿದ್ಯಾರ್ಥಿಗಳು ಭಾವ ಗೀತೆಗಳನ್ನು ಹಾಡಿದರು, ಭರತನಾಟ್ಯವನ್ನೂ ಮಾಡಿದರು.! ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಯುತ ಅನಿಲ್ ಕಲ್ಯಾಣ್ ಶೆಟ್ಟಿ ಅವರ ವಹಿಸಿಕೊಂಡು, ವಿದ್ಯಾರ್ಥಿಗಳಿಗೆ ಅಧ್ಯಯನದ ಮಹತ್ವ, ಸಮಯ ಪಾಲನೆಯ ಅರಿವನ್ನು ಮೂಡಿಸಿದರು.

ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಶ್ರೀಯುತ ಶ್ರೀಧರ್ ಪತ್ತೇಪುರ ಅವರು ಪಾರಿತೋಷಕ ವಿತರಿಸಿದರು. ಇವರೊಂದಿಗೆ ಕಾಲೇಜು ಸುಧಾರಣಾ ಸಮಿತಿಯ ಸದಸ್ಯರಾದ ಶ್ರೀಯುತ ಮಹಾಂತೇಶ್ ಚೌಕಿಮಠ್ ಹಾಗೂ ರವಿ ಮಮದಾಪುರ ಅವರು ವೇದಿಕೆಯನ್ನು ಹಂಚಿಕೊಂಡಿದ್ದರು ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ದೀಪಾ ಜಿಗಬಡ್ಡಿ,ಪ್ರಾಸ್ತಾವಿಕ ನುಡಿ ಪ್ರಾಚಾರ್ಯರಾದ ಶ್ರೀ ಪಿ ಎಸ್ ಜವಳಿ,ಗಣ್ಯರ ಪರಿಚಯ ಶ್ರೀಮತಿ ಪಿ ಬಿ ಲೆಂಕೆನ್ನವರ, ಪುಷ್ಪ ವಿತರಣೆ ಶ್ರೀ ಎಂ ಜೆ ಪತ್ರಿಮರದ, ಬಹುಮಾನ ವಿತರಣೆ ಕಾರ್ಯಕ್ರಮವನ್ನು ಕುಮಾರ್ ಎ ಎಮ್ ನಾಡಗೌಡರ ಮತ್ತು ಶ್ರೀ ಬಸವರಾಜ ಗುರಿಕಾರ, ವಂದನಾರ್ಪಣೆಯನ್ನು ಶ್ರೀಮತಿ ಸುಧಾ ಮಾಡಿದರು ಕಾರ್ಯಕ್ರಮದಲ್ಲಿ ಉನ್ಯಾಸಕರಾದ ಡಾ.ಅವಿನಾಶ್ ಮಮದಾಪೂರ, ಇನ್ನಿತರ ಉಪನ್ಯಾಸಕರೆಲ್ಲರೂ ಹಾಜರಿದ್ದರು. ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ವಿಜೃಂಭಣೆಯಿಂದ ಜರುಗಿತು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button