ಶ್ರೀ ಕಾಳಿದಾಸ ಶಿಕ್ಷಣ ಮಹಾವಿದ್ಯಾಲಯ ಬಾದಾಮಿಯಲ್ಲಿ ನಾಟಕ ಮತ್ತು ಕಲಾ ಕಾರ್ಯಾಗಾರಕ್ಕೆ ಉತ್ತಮ ಸ್ಪಂದನೆ….

ಜುಲೈ ಬಾಗಲಕೋಟೆ ವಿಶ್ವವಿದ್ಯಾಲಯ ಜಮಖಂಡಿ ಸಂಯೋಜಿಯ ಶ್ರೀ ಕಾಳಿದಾಸ ಶಿಕ್ಷಣ ಮಹಾವಿದ್ಯಾಲಯ, ಬಾದಾಮಿಯಲ್ಲಿ 2026ರ ಜುಲೈ 20 ರಿಂದ 24 ರವರೆಗೆ ಐದು ದಿನಗಳ ನಾಟಕ ಮತ್ತು ಕಲಾ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು..ಈ ಕಾರ್ಯಾಗಾರಕ್ಕೆ ಹಿರಿಯ ಸಂಪನ್ಮೂಲ ವ್ಯಕ್ತಿಗಳಾದ ನೀನಾಸಂ ನಲ್ಲಿ ತರಬೇತಿ ಹೊಂದಿದ ಶ್ರೀ ಎಚ್. ಸಿ. ಚಲವಾದಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದು, ನಾಟಕ ಮತ್ತು ಕಲೆಯ ಮಹತ್ವ, ಅಭಿನಯ ಕೌಶಲ್ಯ, ದೇಹಭಾಷೆ, ಧ್ವನಿ ಬಳಕೆ, ವೇದಿಕೆ ನಿರ್ವಹಣೆ ಹಾಗೂ ಸೃಜನಶೀಲ ಕಲಿಕೆಯ ವಿವಿಧ ಆಯಾಮಗಳ ಕುರಿತು ಪ್ರಾಯೋಗಿಕ ತರಬೇತಿಯನ್ನು ನೀಡಿದ್ದಾರೆ.

ಕಾರ್ಯಾಗಾರದಲ್ಲಿ ಬಿ.ಎಡ್. ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ, ವಿವಿಧ ನಾಟಕ ಚಟುವಟಿಕೆಗಳು, ಆಟಗಳು ಹಾಗೂ ಕಲಾತ್ಮಕ ಅಭಿವ್ಯಕ್ತಿ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡರು. ಶಿಕ್ಷಣದಲ್ಲಿ ನಾಟಕ ಮತ್ತು ಕಲೆಯ ಬಳಕೆಯಿಂದ ವಿದ್ಯಾರ್ಥಿಗಳ ಸೃಜನಶೀಲತೆ, ಸಂವಹನ ಕೌಶಲ್ಯ, ಆತ್ಮವಿಶ್ವಾಸ ಹಾಗೂ ಸಹಕಾರ ಮನೋಭಾವ ವೃದ್ಧಿಯಾಗುತ್ತದೆ ಎಂದು ಶ್ರೀ ಎಚ್. ಸಿ. ಚಲವಾದಿ ಅವರು ತಿಳಿಸಿದರು.ಮಹಾವಿದ್ಯಾಲಯದ ಪ್ರಾಂಶುಪಾಲರು ಹಾಗೂ ಸಿಬ್ಬಂದಿಗಳು ಕಾರ್ಯಾಗಾರದ ಯಶಸ್ಸಿಗೆ ಸಹಕರಿಸಿದ್ದು, ಈ ತರಬೇತಿ ಭವಿಷ್ಯದ ಶಿಕ್ಷಕರಿಗೆ ಪರಿಣಾಮಕಾರಿ ಬೋಧನಾ ಕೌಶಲ್ಯಗಳನ್ನು ಬೆಳೆಸಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಶ್ರೀ ಕಾಳಿದಾಸ ಶಿಕ್ಷಣ ಮಹಾವಿದ್ಯಾಲಯ ಬಾದಾಮಿಯಲ್ಲಿ ನಾಟಕ ಮತ್ತು ಕಲಾ ಕಾರ್ಯಾಗಾರಕ್ಕೆ ಉತ್ತಮ ಸ್ಪಂದನೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button