ಚಟ್ಟೇಕಂಬದಲ್ಲಿ ಕಣಜನಹಳ್ಳಿ ನಾಗರಾಜ್ ಅವರ – ಬಯಲು ಸೀಮೆಯ ಬೆಳಗು ಗ್ರಂಥ ಬಿಡುಗಡೆ.
ಚಳ್ಳಕೆರೆ ಆ.07



ತಾಲ್ಲೂಕಿನ ಚಟ್ಟೇಕಂಬದ ಮಠದಲ್ಲಿ ಅವಧೂತ ಶ್ರೀವೀರಪ್ಪ ತಾತಾನವರ 40 ನೇ. ಆರಾಧನಾ ಮಹೋತ್ಸವದ ಪ್ರಯುಕ್ತ ಕಣಜನಹಳ್ಳಿ ನಾಗರಾಜ್ ಅವರು ಬರೆದಿರುವ ವೀರಪ್ಪ ತಾತಾನವರ ಜೀವನ ಕಥೆಯನ್ನು ಒಳಗೊಂಡ “ಬಯಲು ಸೀಮೆಯ ಬೆಳಗು” ಗ್ರಂಥವನ್ನು ಶ್ರೀ ಬ್ರಹ್ಮಾನಂದ ತೀರ್ಥ ಭಿಕ್ಷು ಸ್ವಾಮೀಜಿ, ಚಿತ್ರದುರ್ಗದ ಕಬೀರಾನಂದ ಆಶ್ರಮದ ಪೀಠಾಧ್ಯಕ್ಷರಾದ ಸ್ವಾಮಿ ಶಿವಲಿಂಗಾನಂದಜೀ, ಶ್ರೀಕಾಂತಾನಂದಜೀ,ಸ್ವಾಮಿ ವಿನಯಾನಂದಜೀ, ಸ್ವಾಮಿ ಶಿವಾನಂದಜೀ.

ಬೆಂಗಳೂರಿನ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ ಮಲ್ಲೇಶ್ವರಂ ಜಿ ವೆಂಕಟೇಶ್, ಜಿ.ಎಸ್ ವೀರಭದ್ರಪ್ಪ, ಕಣಜನಹಳ್ಳಿ ನಾಗರಾಜ್, ಪುರುಷೋತ್ತಮ ಸೇರಿದಂತೆ ವಿವಿಧ ಗಣ್ಯರು ಬಿಡುಗಡೆ ಗೊಳಿಸಿ ಕೃತಿಯ ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ಜಯಮ್ಮ, ನರಸಿಂಹಮೂರ್ತಿ, ಯತೀಶ್ ಎಂ ಸಿದ್ದಾಪುರ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ತಾತಾನವರ ಭಕ್ತರು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

