ನಾವು ದುಷ್ಟ ಚಟಗಳಿಂದ ದೂರವಿದ್ದರ ಮಾತ್ರ ನಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕೊಡಲು – ಸಾಧ್ಯ ಆರ್.ಎಸ್ ಗಂಗನಹಳ್ಳಿ.
ಆಲಮೇಲ ಆ.08


ಮೊದಲು ನಾವು ದುಷ್ಟ ಚಟಗಳಿಂದ ದೂರವಿದ್ದರೆ ಮಾತ್ರ ನಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕೊಡಲು ಸಾಧ್ಯ. ತಂಬಾಕು ಗುಟ್ಕಾ ಮದ್ಯಪಾನ ಇಂತಹ ವ್ಯಸನದಿಂದ ದೂರವಿರಬೇಕು ಎಂದು ವಿದ್ಯಾರ್ಥಿಗಳಿಗೆ ಹಾಗೂ ವೇದಿಕೆಯ ಮೇಲಿನ ಎಲ್ಲಾ ಗಣ್ಯರಿಗೂ. ಮನವಿ ಮಾಡಿ ಕೊಂಡರು.
ಶುಕ್ರವಾರ ರಂದು ಶ್ರೀ ಪರಮಾನಂದ ಭೋಗಲಿಂಗೇಶ್ವರ ಸಂಯುಕ್ತ ಕಡಣಿಯ ಶಾಲೆಯಲ್ಲಿ. ವೖಸನ ಮುಕ್ತ ಪ್ರತಿಜ್ಞೆ ಪ್ರಜಾಪತಿ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಅಲಮೇಲ ಇವರ ಸೇವಾ ಕೇಂದ್ರದಿಂದ ನಶೆ ಮುಕ್ತ ಭಾರತ ಆಭಿಯಾನದಡಿ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಹಮ್ಮಿಕೊಂಡ ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭದಲ್ಲಿ ಪ್ರಾಚಾರ್ಯರಾದ ಆರ್.ಎಸ್ ಗಂಗನಹಳ್ಳಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಇಂದಿನ ದಿನಗಳಲ್ಲಿ ಮಕ್ಕಳಿಗೆ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಹೆಚ್ಚಿನ ಸ್ವಾತಂತ್ರಸಿಗುತ್ತಿರುವುದು ಸಂತಸದ ವಿಚಾರ ಆದರೆ ಪ್ರತಿ ಸ್ವಾತಂತ್ರದೊಂದಿಗೆ ಒಂದು ದೊಡ್ಡ ಜವಾಬ್ದಾರಿ ಇರುತ್ತದೆ ಎಂಬುದನ್ನು ಮಕ್ಕಳಿಗೆ ಕಡ್ಡಾಯವಾಗಿ ಅರ್ಥ ಮಾಡಿಸಬೇಕಿದೆ. ಇಂದಿನ ಮಕ್ಕಳು ಮೊಬೈಲ್ ಗಳಿಗೆ ಇಂದಿನ ಕಾಲದಲ್ಲಿ ಅತಿ ದೊಡ್ಡ ವ್ಯಸನ ಹಿಂದಿನ ಕಾಲದಲ್ಲಿ ಧೂಮಪಾನ ಅಥವಾ ಮಧ್ಯಪಾನವನ್ನು ಮಾತ್ರ ವ್ಯಸನ ಎಂದು ಪರಿಗಣಿಸಲಾಗಿತ್ತಿತ್ತು.

ಆದರೆ ಆಧುನಿಕ ದಿನಗಳಲ್ಲಿ ಹೊಸ ರೀತಿ ಡ್ರಗ್ಸ್ ಗಳ ಜೊತೆಗೆ ಅತಿ ದೊಡ್ಡ ನಶೆಯಾಗಿ ಕಾಡುತ್ತಿರುವುದು. ಮೊಬೈಲ್ ಗಳು ಕೇವಲ ಮಕ್ಕಳಿಗೆನ್ನಷ್ಟೇ ಅಲ್ಲ. ಪೋಷಕರನ್ನೂ ಅವರಿಸಿದೆ. ಮಕ್ಕಳ ಕೈಯಿಂದ ಮೊಬೈಲ್ ಕಿತ್ತುಕೊಳ್ಳುವ ಮುನ್ನ ಪೋಷಕರು ತಾವೇ ಮೊಬೈಲ್ ಬೆಳಕೆಯನ್ನು ಮಿತಿಗೊಳಿಸಬೇಕಿದೆ ಎಂದರು.
10 ಕೋಟಿ ನಶೇ ಮುಕ್ತ ರಾಗುವ ಪ್ರತಿಜ್ಞೆಗಳು ಮಹಾ ಆಭಿಯಾನಕ್ಕೆ ಮಾದಕ ವಸ್ತು ಮುಕ್ತ ಭಾರತಕ್ಕಾಗಿ 10 ಕೋಟಿ ದೃಢ ಸಂಕಲ್ಪಗಳಲ್ಲಿ ಅವರು ಭಾಗವಹಿಸಿ ಪ್ರತಿಜ್ಞೆ ಮಾಡಿದ್ದರು ಹಾಗೂ ಪ್ರತಿಜ್ಞೆ ಬೋಧಿಸಲಾಯಿತು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ನಮ್ಮ ಗುರಿ ವ್ಯಸನ ಮುಕ್ತ ಭಾರತವನ್ನಾಗಿಸುವ ಉದ್ದೇಶವನ್ನು ಶ್ರೀ ರೇಣುಕಾ ಅಕ್ಕನವರು ಮಕ್ಕಳಿಗೆ ಸವಿಸ್ತಾರವಾಗಿತಿಳಿಸಿದರು.
ನಂತರ ಬಿ.ಸಿ.ಎಂ ವಸತಿ ನಿಲಯದ ಮೇಲ್ವಿಚಾರಕರಾದ ಪ್ರಭಾಕರ್ ಬಿರಾದಾರ ಮಾತನಾಡಿ ಈಗಿನ ಮಕ್ಕಳು ನಾಳಿನ ದೇಶದ ಭವಿಷ್ಯ ತಂಬಾಕು ಗುಟ್ಕಾ ಮುಂತಾದ ದುಷ್ಟ ಚಟಗಳಿಗೆ ದಾಸರಾಗಬೇಕು.ಎಂದು ಹೇಳಿದರು.
ಕಾರ್ಯಕ್ರಮದ ಪರಮಾನಂದ ಭೋಗಲಿಂಗೇಶ್ವರ ಶಿಕ್ಷಣ ಸಮಿತಿಯ ಅಧ್ಯಕ್ಷರು ಶ್ರೀ ಬೋಗಣ್ಣ ಲಾಳಸಂಗಿ. ಆರ್ ಎಸ್. ಗಂಗನಹಳ್ಳಿ ಪ್ರಾಚಾರ್ಯರು ಕಡಣಿ. ಎಸ್ ಆರ್ ಗಂಗನಹಳ್ಳಿ. ಡಿ ಎಂ ಕೊಟ್ಟಲಗಿ. ವೆಂಕಟೇಶ್ ಟಿ. ಆರ್.ಬಿ ಚವ್ಹಾಣ. ಎಸ್.ಬಿ ಬಡಿಗೇರ. ಬಿ.ಸಿ ಕೆಸರಟ್ಟಿ. ಎಲ್.ಬಿ ಲಾಳಸಂಗಿ. ಬಿ.ಎ ಹಿಕ್ಕಿನಗುತ್ತಿ. ಬಿ.ಕೆ ಆವಜಿ ಉಪನ್ಯಾಶಕರು. ಎಸ್ ಎಂ ಚರಂತಿಮಠ. ಜಿ ಕೆ ಮುಜಾವರ. ಪಿ ಎ .ಕ್ಷತ್ರಿ ಎಸ್‌ಬಿ ಸುತಾರ ಶಿಕ್ಷಕರು ಆರ್ ಎಸ್ ಗೋರನಾಳ ಎಸ್ ಡಿ. ತಾವರಗೇರಿ ಶಿಕ್ಷಕಿಯರು. ಶೃತಿ Y. ಭೋಗೂಂಡಿ. ಶ್ರೀಶೈಲ್ ಎಮಾಶೇಟ್ಟಿ.. ಹಾಗೂ ಸಿಬ್ಬಂದಿ ವರ್ಗ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ ಹಿರೇಮಠ ಆಲಮೇಲ

