ಕರ್ನಾಟಕ ಟೆಲಿವಿಷನ್ ಅಸೋಷಿಯೇಷನ್ – ಅಧ್ಯಕ್ಷರಾಗಿ ಗಣೇಶರಾವ್ ಆಯ್ಕೆ.
ಬೆಂಗಳೂರು ಆ.16



ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ (ರಿ) ನೂತನ ಅಧ್ಯಕ್ಷರಾಗಿ ಚಲನ ಚಿತ್ರ ನಟ ಗಣೇಶರಾವ್ ಕೇಸರಕರ್ ಬಹುಮತದಿಂದ ಆಯ್ಕೆಯಾಗಿದ್ದು, 25 ವರ್ಷಗಳ ಇತಿಹಾಸದಲ್ಲೇ ಕಲಾವಿದ ರೊಬ್ಬರು ಮೊದಲ ಬಾರಿಗೆ ಅಧ್ಯಕ್ಷರಾಗಿ ಆಯ್ಕೆ ಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಗಳಾಗಿ ಡಿಸಿ ವೀರೇಂದ್ರ ಬೆಳ್ಳಿಚುಕ್ಕಿ ಆಯ್ಕೆ ಯಾಗಿದ್ದಾರೆ.
ಉಳಿದಂತೆ ಭಾಸ್ಕರ ಎನ್.ಎಸ್, ಸುನೀಲ್ ಪುರಾಣಿಕ, ರಾಮಸ್ವಾಮಿ ಗೌಡ, ರೇಣು ಶಿಕಾರಿ, ಪದ್ಮವಾಸಂತಿ, ವಿಕ್ರಂ ಸೂರಿ, ಸತ್ಯ ವಿಕಾಸ್ ಕೆ, ಸಾಗರ್ ಬಿ.ಕೆ, ಗುರುಮೂರ್ತಿ ಹೆಗ್ಡೆ, ಸಂಜೀವ ಸಿ.ಕೆ, ಗಿರೀಶ್ ಕೆ.ಟಿ, ಅಶೋಕ್ ಸುಲೇಗಾಯ್, ರಾಮು ಎಮ್.ಎಸ್, ವ್ಯಾಸರಾಜ ಎಸ್.ವೃ, ವಿಠ್ಠಲ್ ಎನ್.ಎಂ, ಸಂದೇಶ್ ಹೆಚ್.ಸಿ, ತಿಮ್ಮರಾಜು ಟಿ, ವೆಂಕಟೇಶ ಡಿ ಒಟ್ಟು ೨೧ ಅಭ್ಯರ್ಥಿಗಳು ನಿರ್ಮಾಪಕರು, ನಿರ್ದೇಶಕರು, ಕಲಾವಿದರು, ಛಾಯಾಗ್ರಾಹಕ ವಲಯ, ಧ್ವನಿ ಗ್ರಾಹಕರು, ಸಂಕಲನಕಾರರ ವಲಯ, ಪ್ರಸಾಧನ ಕಾರರು, ಕಲಾ ನಿರ್ದೇಶಕರು, ವಸ್ತ್ರವಿನ್ಯಾಸಕರು, ಬರಹಗಾರರ ವಲಯ, ಸ್ಟುಡಿಯೋ ಮಾಲೀಕರ ವಲಯ, ಯೂನಿಟ್ ಮಾಲೀಕರ ವಲಯ, ಸಂಗೀತ ವಲಯ, ನಿರ್ಮಾಣ ನಿರ್ಮಾಪಕರ ವಲಯ, ಜಾಹೀರಾತು ವಲಯ, ಸಹಾಯಕರ ವಲಯದಿಂದ ಆಯ್ಕೆಯಾಗಿದ್ದು ಮುಂದಿನ ಎರಡು ವರ್ಷಗಳ ವರೆಗೆ ಕಾರ್ಯ ನಿರ್ವಹಿಸಲಿದ್ದಾರೆಂದು ಚುನಾವಣಾಧಿಕಾರಿ ಎನ್.ಓ ಚಂದ್ರಶೇಖರ ತಿಳಿಸಿದ್ದಾರೆ.
ಇವರ ಆಯ್ಕೆಗೆ ಕಲಾ ಪೋಷಕರ ಮಠ ಸುಕ್ಷೇತ್ರ ಸಿದ್ದನಕೊಳ್ಳದ ಶಿವಕುಮಾರ ಮಹಾ ಸ್ವಾಮಿಗಳು, ಹಿರಿಯ ಪತ್ರಕರ್ತರು ಸಾಹಿತಿ, ನಿರ್ದೇಶಕರಾದ ಹಿರಿಯೂರು ರಾಘವೇಂದ್ರ, ಪತ್ರಿಕಾ ಸಂಪಾದಕರಾದ ಗಣಪತಿ ಗಂಗೊಳ್ಳಿ, ಚಲನ ಚಿತ್ರ ಪತ್ರಕರ್ತರಾದ ಡಾ, ಪ್ರಭು ಗಂಜಿಹಾಳ, ಡಾ, ವೀರೇಶ ಹಂಡಿಗಿ, ನಿರ್ದೇಶಕ, ನಿರ್ಮಾಪಕರಾದ ಲೋಕೇಶ ವಿದ್ಯಾಧರ, ರೇಣುಕುಮಾರ ಸಂಸ್ಥಾನ ಮಠ, ಸಂಗೀತ ಸಂಯೋಜಕ ರವೀಂದ್ರ ರಾಮದುರ್ಗಕರ ಮೊದಲಾದವರು ಅಭಿನಂದಿಸಿದ್ದಾರೆ.
ರಾಜ್ಯ ಮಟ್ಟದ ವಿಶೇಷ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಡಾ, ಪ್ರಭು ಗಂಜಿಹಾಳ ಗದಗ

