ದಕ್ಷಿಣ ಭಾರತದಲ್ಲಿ ಶ್ರೀರಾಮಕೃಷ್ಣರ ಸಂದೇಶಗಳನ್ನು ಪ್ರಸಾರ ಮಾಡಿದ ಗುರು ಸೇವಕ ಸ್ವಾಮಿ ರಾಮಕೃಷ್ಣಾನಂದರು – ಹೆಚ್ ಲಕ್ಷ್ಮೀದೇವಮ್ಮ.

ಚಳ್ಳಕೆರೆ ಆ.16

ಶ್ರೀರಾಮಕೃಷ್ಣ ಪರಮಹಂಸರ ಸಂದೇಶಗಳನ್ನು ಮದ್ರಾಸ್, ಬೆಂಗಳೂರು ಸೇರಿದಂತೆ ದಕ್ಷಿಣ ಭಾರತದ ಪ್ರದೇಶಗಳಲ್ಲಿ ಪ್ರಸಾರ ಮಾಡಿದ ನಿಷ್ಠಾ ಗುರುಸೇವಕ ಸ್ವಾಮಿ ರಾಮಕೃಷ್ಣಾನಂದರು ಎಂದು ಚಳ್ಳಕೆರೆಯ ತ್ಯಾಗರಾಜ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಹೆಚ್ ಲಕ್ಷ್ಮೀದೇವಮ್ಮ ಹೇಳಿದರು.

ತ್ಯಾಗರಾಜ ನಗರದ ಸದ್ಭಕ್ತರಾದ ಶ್ರೀಮತಿ ನಂಜಮ್ಮ ಕೆಂಚಪ್ಪ ಶಿಕ್ಷಕರ ಸವಿತಾ ನಿವಾಸದಲ್ಲಿ ಸ್ವಾಮಿ ರಾಮಕೃಷ್ಣಾನಂದರ ಜಯಂತ್ಯುತ್ಸವದ ಪ್ರಯುಕ್ತ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು “ಸ್ವಾಮಿ ರಾಮಕೃಷ್ಣಾನಂದ”ರ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

ಸತ್ಸಂಗದ ಪ್ರಯುಕ್ತ ಸತ್ಸಂಗ ಕೇಂದ್ರದ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ, ಶ್ರೀರಾಮಕೃಷ್ಣರ ನಾಮಸ್ಮರಣೆ, ಗೀತಾ ಪ್ರಕಾಶ್, ಗೀತಾ ನಾಗರಾಜ್, ಪ್ರಮೀಳಾ ಜಗದೀಶ್, ತಿಪ್ಪಮ್ಮ ಉಮಾಶಂಕರ್, ಜ್ಯೋತಿ ನಾಗರಾಜ್, ಶೋಭಾ ರಮೇಶ್ ಅವರಿಂದ ವಿಶೇಷ ಭಜನೆ ನಡೆದರೆ ಯತೀಶ್ ಎಂ ಸಿದ್ದಾಪುರ ಅವರು “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ವಾಚನ ಮಾಡಿದರು. ಕೊನೆಯಲ್ಲಿ ಆರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು.

ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಸವಿತಾ ತಿಪ್ಪೇರುದ್ರಪ್ಪ, ಪುಷ್ಪಲತಾ ವಿಜಯ್, ವನಜಾಕ್ಷಿ ಪಂಚಾಕ್ಷರಿ, ಪ್ರೇಮಾ, ರಾಘವೇಂದ್ರ, ನಂಜಮ್ಮ ಕೆಂಚಪ್ಪ, ಸರಸ್ವತಿ ನಾಗರಾಜ್, ಎಂ ಲಕ್ಷ್ಮೀದೇವಮ್ಮ, ದ್ರಾಕ್ಷಾಯಣಿ, ಸರಸ್ವತಿ ರಾಜು, ಗೀತಾ ಸುಂದರೇಶ್ ದೀಕ್ಷಿತ್, ಸೌಮ್ಯ ಪ್ರಸಾದ್, ಸಿರಿಚಂದನ ಪಾಲ್ಗೊಂಡಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button