ಭಕ್ತರ ಸಹಾಯದಿಂದ ಹಿಂದುಳಿದ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ – ಮಾತಾಜೀ ತ್ಯಾಗಮಯೀ.

ಚಳ್ಳಕೆ ಆ.16

ಶ್ರೀಶಾರದಾಶ್ರಮದಿಂದ ಆರ್ಥಿಕವಾಗಿ ಹಿಂದುಳಿದ 21 ಕುಟುಂಬಗಳಿಗೆ ಪೂಜೆ, ಆರತಿಯೊಂದಿಗೆ ದಿನ ಬಳಕೆಯ ದಿನಸಿ ಕಿಟ್ ವಿತರಣೆ …..💐

ಭಕ್ತರ ಉದಾರ ಆರ್ಥಿಕ ನೆರವಿನಿಂದ ದಿನ ಬಳಕೆಯ ರಾಗಿ, ಬೆಳೆ, ಗೋಧಿ, ಬೆಲ್ಲ, ಎಣ್ಣೆ, ಸೋಪು ಒಳಗೊಂಡ ದಿನಸಿ ಕಿಟ್ ಗಳನ್ನು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ವಿತರಿಸಲಾಗುತ್ತಿದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷೆ ಮಾತಾಜೀ ತ್ಯಾಗಮಯೀ ತಿಳಿಸಿದರು.

ಮಾತಾಜೀ ತ್ಯಾಗಮಯೀ ಅವರಿಂದ ಆಶೀರ್ವಚನ…..

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮದಕರಿ ನಗರದ ಆರ್ಥಿಕವಾಗಿ ಹಿಂದುಳಿದ 21 ಕುಟುಂಬಗಳಿಗೆ ದಿನಸಿ ಕಿಟ್ ಗಳನ್ನು ಪೂಜೆ,ಆರತಿಯೊಂದಿಗೆ ವಿತರಿಸಿ ಆಶೀರ್ವಚನ ನೀಡಿದರು.

ಕಾರ್ಯಕ್ರಮದ ಆರಂಭದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಭಜನೆ, ದಿವ್ಯತ್ರಯರಿಗೆ ಆರತಿ ಮತ್ತು ಜಿ ಯಶೋಧಾ ಪ್ರಕಾಶ್ ಅವರಿಂದ ಶ್ರೀಲಂಕಾ ಯಾತ್ರೆಯ ಅನುಭವಗಳು, ಪ್ರಸಾದ ವಿನಿಯೋಗ ನಡೆಯಿತು.

ಕಾರ್ಯಕ್ರಮದಲ್ಲಿ ಗೀತಾ ನಾಗರಾಜ್, ಯತೀಶ್ ಎಂ ಸಿದ್ದಾಪುರ, ವನಜಾಕ್ಷಿ, ಪಂಕಜಾ, ಬಿ ಸುಮನಾ, ಪಿ.ಎಸ್ ಮಾಣಿಕ್ಯ, ಸತ್ಯನಾರಾಯಣ, ಅಂಬುಜಾ, ಹೃತಿಕ್, ಸಂತೋಷ್, ಡಾ, ಭೂಮಿಕ, ಪ್ರವಲ್ಲಿಕ, ಪುಷ್ಪಲತಾ, ಡಿ ಕಾವೇರಿ ಸುರೇಶ್ ಸೇರಿದಂತೆ ಸದ್ಭಕ್ತರು ಉಪಸ್ಥಿತರಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button