80 ನೇ. ವರ್ಷದ ಸ್ವಾತಂತ್ರೋತ್ಸವದ ನಿಮಿತ್ತವಾಗಿ – ಧ್ವಜಾರೋಹಣ ನೆರವೇರಿಸಿದ ಶಾಸಕರು.
ಮಾನ್ವಿ ಆ.16



ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಮಾನ್ವಿ ನಗರದಲ್ಲಿ ಈ ದಿನ 80 ನೇ. ಸ್ವಾತಂತ್ರ್ಯೋತ್ಸವದ ಅಂಗವಾಗಿ ಪುರಸಭೆ, ತಾಲೂಕ ದಂಡಾಧಿಕಾರಿಗಳ ಕಾರ್ಯಾಲಯ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ ಕಾರ್ಯಾಲಯ, ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘ, ಮಾನ್ವಿ ತಾಲೂಕ ಕ್ರೀಡಾಂಗಣದಲ್ಲಿ ಸಾರ್ವಜನಿಕರ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾನ್ವಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಜಿ ಹಂಪಯ್ಯ ನಾಯಕ್ ಸಾಹುಕಾರ್ ಇವರು.
ಮಾನ್ವಿ ತಾಲೂಕ ಕ್ರೀಡಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾನ್ಯ ಶಾಸಕರು ಇವತ್ತು ನಮ್ಮ ದೇಶದಲ್ಲಿ 80 ನೇ. ಸ್ವಾತಂತ್ರ್ಯ ದಿನಾಚರಣೆ ಇಡೀ ದೇಶಾದ್ಯಂತ ಹಬ್ಬದ ವಾತಾವರಣವಿದೆ ಶತ ಶತಮಾನಗಳ ಬ್ರಿಟಿಷರ ದಬ್ಬಾಳಿಕೆ ಶೋಷಣೆಯಿಂದ ನಮ್ಮನ್ನು ಬಿಡುಗಡೆ ಗೊಳಿಸಿ ದೇಶಕ್ಕೆ ಸ್ವತಂತ್ರ ತರಲು ಸಾವಿರಾರು ನಾಯಕರು ತಮ್ಮ ಪ್ರಾಣವನ್ನು ತ್ಯಜಿಸಿದ್ದಾರೆ ಅವರ ತ್ಯಾಗದ ಫಲ ನಮಗೆ ಈ ಸ್ವತಂತ್ರ ಬಂದಿದೆ.

ಭಾರತೀಯರಾದ ನಾವೆಲ್ಲರೂ ದೇಶದ ಅಭಿವೃದ್ಧಿ ಕಡೆಗೆ ಸಾಗಬೇಕು ಇಂದಿನ ದಿನಮಾನಗಳಲ್ಲಿ ನಾವೆಲ್ಲರೂ ಜಾತಿ ಧರ್ಮದ ಭೇದ ಬಿಟ್ಟು ಎಲ್ಲರೂ ಭಾರತೀಯರು ಎನ್ನುವ ಭಾವನೆ ನಮ್ಮಲ್ಲಿ ಬರಬೇಕು ದೇಶಭಕ್ತಿ ದೇಶದ ಪ್ರತಿ ಮನೆ ಮನೆಯಲ್ಲೂ ಸಹ ಮುಳುಗಬೇಕು ಇದೆ ನಾವು ನಮ್ಮ ಹಿರಿಯರಿಗೆ ಕೊಡುವ ಗೌರವ ಇದೇ ದೇಶಭಕ್ತಿ ಈ ನಿಟ್ಟಿನಲ್ಲಿ ನಾವೆಲ್ಲರೂ ಸಾಗೋಣ ಎಂದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಬ್ದುಲ್ ಗಫುರ್ ಸಾಬ್, ಪಂಚ ಗ್ಯಾರಂಟಿಗಳ ಅಧ್ಯಕ್ಷರಾದ ಬಿ ಕೆ ಅಮರೇಶಪ್ಪ ವಕೀಲರು, ಸೈಯದ್ ಖಾಲಿದ್ ಖಾದ್ರಿ ರಜಾ ಸುಭಾಷ್ ಚಂದ್ರ ನಾಯಕ್, ಸತ್ತಾರ್ ಬಂಗ್ಲೆವಲೇ, ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು, ಇನ್ನಿತರರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

