ದೇಶದಾದ್ಯಂತ 80 ನೇ. ಸ್ವಾತಂತ್ರ್ಯೋತ್ಸವದ ನಿಮಿತ್ತವಾಗಿ – ಧ್ವಜಾರೋಹಣವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಿದರು.
ಆಲಮೇಲ ಆ.16



ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನಾದ್ಯಾಂತ ಸರಕಾರಿ ಹಾಗೂ ಅರೆ ಸರ್ಕಾರಿ ಶಾಲೆ ಕಾಲೇಜು ಮತ್ತು ಎಲ್ಲಾ ಸರಕಾರಿ ಕಚೇರಿಗಳಲ್ಲಿ ಸಡಗರ ಸಂಭ್ರಮದಿಂದ 80 ನೇ. ಸ್ವಾತಂತ್ರ್ಯೋತ್ಸವ ದಿನಾಚರಣೆ ಆಚರಿಸಲಾಯಿತು.
ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಮತ್ತು ಉರ್ದು ಶಾಲೆ ಹಾಗೂ ಗ್ರಾಮ ಪಂಚಾಯಿತಿ ಕಾರ್ಯಾಲಯ ಕಡಣಿಯಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಸರಕಾರಿ ಮಾದರಿಯ ಪ್ರಾಥಮಿಕ ಶಾಲೆ ಮತ್ತು ಉರ್ದು ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಹಾಂತೇಶ್ ಕತ್ತಿ ರೈತ ಹಸಿರು ಸೇನೆ ಆಲಮೇಲ ತಾಲೂಕು ಅಧ್ಯಕ್ಷ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ಪ್ರಾರ್ಥನೆ ಗೀತೆಯೊಂದಿಗೆ ಪ್ರಾರಂಭಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಗುರುಗಳು ಹಾಗೂ ವಿದ್ಯಾರ್ಥಿಗಳು ಸರ್ವರನ್ನು ಸ್ವಾಗತಿಸಿದರು. ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಮಲ್ಲು ವಡಿಗೇರಿ ಮಹಾತ್ಮ ಗಾಂಧೀಜಿಯವರ ಹಾಗೂ ಡಾ ಬಿ.ಆರ್ ಅಂಬೇಡ್ಕರ ಅವರ ಫೋಟೋ ಪೂಜೆ ನಡೆಸಿ ಕೊಟ್ಟರು.
ಎಸ್.ಡಿ.ಎಂ.ಸಿ ಅಧ್ಯಕ್ಷ ಶಿವಯೋಗಿ ಕತ್ತಿ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮುದ್ದು ಮಕ್ಕಳು ದೇಶಭಕ್ತಿ ಗೀತೆ, ನೃತ್ಯ, ಭಾಷಣ ಮಾಡುವುದರೊಂದಿಗೆ ಸ್ವತಂತ್ರ ಹೋರಾಟಗಾರರ ನೆನಪುಗಳನ್ನು ಮರುಕಳಿಸಿದರು.

ಈ ಸ್ವತಂತ್ರ ನಮ್ಮ ದೇಶದ ಮಹಾನ್ ನಾಯಕರ ಪ್ರಾಣ ಬಲಿದಾನದ ಪ್ರತೀಕವಾಗಿದೆ. ಈ ಸ್ವತಂತ್ರವನ್ನು ದೇಶದ ಪ್ರತಿಯೊಬ್ಬ ಪ್ರಜೆಯೂ ಉಳಿಸಿ ಬೆಳೆಸಿ ಕೊಂಡು ಹೋಗಬೇಕು ಎಂದು ಮಕ್ಕಳು ತಮ್ಮ ಭಾಷಣದಲ್ಲಿ ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಶಾಲೆಯ ಹಾಗೂ ಉರ್ದು ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ಶಾಲೆಯ ಗುರುಗಳು, ಗುರು ಮಾತೆಯರು, ಊರಿನ ಹಿರಿಯರು, ಯುವಕರು, ಮುದ್ದು ವಿದ್ಯಾರ್ಥಿಗಳು, 80 ನೇ. ದ್ವಜಾರೋಹಣದಲ್ಲಿ ಭಾಗಿಯಾಗಿ ಸಡಗರ ಸಂಭ್ರಮದಿಂದ ಸ್ವತಂತ್ರ ದಿನ ಆಚರಿಸಿದರು.
ಇದೇ ಸಂದರ್ಭದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕ ಸಂಘ (ರಿ) ಜಿಲ್ಲಾ ಅಧ್ಯಕ್ಷ ಕೆದಾರ್ ಕ್ಷತ್ರಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ನೋಟು ಬುಕ್ಕು ಪೆನ್ನು ವಿತರಿಸಿದರು.
ಸ್ವತಂತ್ರ ದಿನಾಚರಣೆ ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವರಿಗೂ ಶುಚಿ ರುಚಿಯಾದ ಉಪಹಾರ ವ್ಯವಸ್ಥೆ ಮಾಡಲಾಗಿತ್ತು ಎಂದು ವರದಿಯಾಗಿದೆ.
ವರದಿ: ಗಾಲೀಬಸಾಬ್ ನಾಗಾವಿ.

