ಆಯುಷ್ಮಾನ್ ಆರೋಗ್ಯ ಕೇಂದ್ರ – ಶಂಕು ಸ್ಥಾಪನೆ.

ತರೀಕೆರೆ ಆ.16

ಗರ್ಭಿಣಿ ಬಾಣಂತಿ ಮತ್ತು ನವ ಜಾತು ಶಿಶು ಹಾರೈಕೆ, ಮಾಡಲು ತರೀಕೆರೆ ಕ್ಷೇತ್ರಕ್ಕೆ 11 ಆಯುಷ್ಮಾನ್ ಆರೋಗ್ಯ ಕೇಂದ್ರಗಳು ಮಂಜುರಾತಿ ಯಾಗಿದ್ದು. ತರೀಕೆರೆ ತಾಲೂಕಿಗೆ ಏಳು ಕೇಂದ್ರಗಳು ಮತ್ತು ಅಜ್ಜಂಪುರ ತಾಲೂಕಿಗೆ ನಾಲ್ಕು ಆಯುಷ್ಮಾನ್ ಆರೋಗ್ಯ ಕೇಂದ್ರಗಳನ್ನು ಶಂಕು ಸ್ಥಾಪನೆ ಮಾಡಲಾಗುತ್ತಿದೆ. ಎಂದು ಶಾಸಕರಾದ ಜಿ.ಎಚ್ ಶ್ರೀನಿವಾಸ್ ಹೇಳಿದರು.

ಅವರು ಇಂದು ಹಾದಿಕೆರೆ ಗ್ರಾಮದಲ್ಲಿ 65 ಲಕ್ಷ ರೂ ಅನುದಾನದಲ್ಲಿ ಆಯುಷ್ಮಾನ್ ಆರೋಗ್ಯ ಕೇಂದ್ರದ ಶಂಕು ಸ್ಥಾಪನೆ ಮಾಡಿ ಮಾತನಾಡಿದರು.

ಈ ಕೇಂದ್ರಗಳಲ್ಲಿ ಮಕ್ಕಳ ಆರೋಗ್ಯ ಮತ್ತು ಚುಚ್ಚುಮದ್ದು ಸೇವೆಗಳು, ಬಾಲ್ಯವಸ್ಥೆ ಮತ್ತು ಅದಿ ಹರಿಯದ ಆರೋಗ್ಯ ಸೇವೆಗಳು, ಕುಟುಂಬ ಯೋಜನೆ ಗರ್ಭ ನಿರೋಧಕ ಸೇವೆಗಳು ಮತ್ತು ಇತರೆ ಸಂತಾನೋತ್ಪತ್ತಿ ಆರೋಗ್ಯ ಸೇವಗಳು, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳು ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿರ್ವಹಣೆ, ತುರ್ತು ವೈದ್ಯಕೀಯ ಸೇವೆಗಳು, ಮಾನಸಿಕ ಆರೋಗ್ಯ ಕಾಯಿಲೆಗಳ ತಪಾಸಣೆ ಮತ್ತು ನಿರ್ವಹಣೆ, ಸಾಮಾನ್ಯ ಸಾಂಕ್ರಾಮಿಕ ರೋಗಗಳ ನಿರ್ವಹಣೆ ಮತ್ತು ಸಣ್ಣಪುಟ್ಟ ಕಾಯಿಲೆಗಳು ಮತ್ತು ತೀವ್ರ ತೆರನಾದ ಸಾಮಾನ್ಯ ರೋಗಗಳಿಗೆ ಹೊರರೋಗಿ ಆರೈಕೆ ವ್ಯವಸ್ಥೆ ಇದ್ದು,ಸಾಮಾನ್ಯ ನೇತ್ರ ದೋಷಗಳು ಮತ್ತು ಇ.ಎನ್.ಟಿ ಸಮಸ್ಯೆಗಳಿಗೆ ಹಾರೈಕೆ ಮತ್ತು ನೇತ್ರ ದೋಷಗಳು ಹಾರೈಕೆ, ಬಾಯಿ ಆರೋಗ್ಯ ಹಾರೈಕೆ, ಹಿರಿಯ ನಾಗರೀಕ ಮತ್ತು ಉಪ ಶಾಮಕ ಆರೋಗ್ಯ ಸೇವೆಗಳು,ಜನ ಆರೋಗ್ಯ ಸಮಿತಿಯ ಮೂಲಕ ಓ.ಪಿ.ಡಿ ಸೇವೆಗಳ ಗುಣಮಟ್ಟ ಸ್ವಚ್ಛತೆ ಔಷಧಿ ಲಭ್ಯತೆ ಹಾಗೂ ರೋಗಿಗಳ ಸೌಲಭ್ಯಗಳನ್ನು ಸುಧಾರಿಸಲಾಗುತ್ತದೆ.

ಈ ಆರೋಗ್ಯ ಕೇಂದ್ರದಲ್ಲಿ ಆರು ಜನ ಸಿಬ್ಬಂದಿಗಳು ಇದ್ದು ಸಮುದಾಯ ಆರೋಗ್ಯ ಅಧಿಕಾರಿ, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ, ಆರೋಗ್ಯ ನಿರೀಕ್ಷಣಾಧಿಕಾರಿಗಳು ಹಾಗೂ ಮೂರು ಜನ ಆಶಾ ಕಾರ್ಯಕರ್ತರು ಕರ್ತವ್ಯ ನಿರ್ವಹಿಸುತ್ತಿರುತಾರೆ.

ಜಿಲ್ಲೆಯಲ್ಲಿಯೇ ಅತ್ಯುತ್ತಮವಾದ ತಾಯಿ ಮತ್ತು ಮಗುವಿನ ಆಸ್ಪತ್ರೆ, ಶೀಘ್ರದಲ್ಲಿಯೇ ಉದ್ಘಾಟನೆ ಮಾಡಲಾಗುತ್ತದೆ ಈ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಮತ್ತು ಸುಸಜ್ಜಿತ ಸೇವೆಗಳು ದೊರೆಯುತ್ತದೆ ಎಂದು ಹೇಳಿದರು. ಸದ್ಯದಲ್ಲಿಯೇ ಉಬ್ರಾಣಿ ಏತ ನೀರಾವರಿಯಿಂದ ಈ ಭಾಗದ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಲಾಗುತ್ತದೆ.

ವಿದ್ಯುತ್ ಸರಬರಾಜು ತೊಂದರೆ ಇದ್ದು ಸಾರ್ವಜನಿಕರು ಸಹಕರಿಸ ಬೇಕು ಹಾದೀಕೆರೆ ಕಾಲೋನಿಗೆ ಕಂದಾಯ ಉಪ ಗ್ರಾಮ ಯೋಜನೆಯಲ್ಲಿ ಹಕ್ಕುಪತ್ರಗಳನ್ನು ನೀಡಲಾಗಿದೆ. ನಾಗರಾಜಪುರ ಗ್ರಾಮದಲ್ಲಿ 60 ಮನೆಗಳಿಗೆ ಹಕ್ಕುಪತ್ರ ನೀಡಿದ್ದೇವೆ, ನೀರಿನ ಸಮಸ್ಯೆ ಬಗೆಹರಿಸಲು ತುಂಗಾ ನದಿಯಿಂದ ಭದ್ರಾ ನಾಳೆ ಗೆ ನೀರು ತುಂಬಿಸಿ ಕೊಳ್ಳುವ ಕೆಲಸ ನಡೆಯುತ್ತಿದೆ. ರಾಗಿ ಬಸವನಹಳ್ಳಿ ರಸ್ತೆ ಯಿಂದ ಹಾದಿಕೆರೆ ಜನರಿಗೆ ಜಮೀನು ತೋಟಗಳಿಗೆ ಹೋಗಲು ಅನುಕೂಲವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಡಿ.ಎಚ್.ಓ ಮಂಜುನಾಥ್, ಎ.ಎಚ್.ಓ ಮಧುಸೂದನ್, ತಾಲೂಕ ಆರೋಗ್ಯ ಅಧಿಕಾರಿ ಚಂದ್ರಶೇಖರ್, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ರೇಖಾ ರವೀಶ್, ಚಂದ್ರ ಮೌಳಿ ಗ್ರಾಮದ ಮುಖಂಡರಾದ ಭುವನೇಶ್ವರ್, ಹಾಗೂ ವಸಂತಕುಮಾರ್ ಉಪಸ್ಥಿತರಿದ್ದರು ಎಂದು ವರದಿಯಾಗಿದೆ.

ಜಿಲ್ಲಾ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್.ವೆಂಕಟೇಶ್ ತರೀಕೆರೆ ಚಿಕ್ಕಮಗಳೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button