ಇಂದು ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ, ಪರಿಶೀಲನೆ ಮಾಡಿದ – ವಿಧಾನ ಸಭಾ ಕ್ಷೇತ್ರದ ನಿಕಟ ಪೂರ್ವ ಶಾಸಕರಾದ ಶ್ರೀ ರಾಜಾ ವೆಂಕಟಪ್ಪ ನಾಯಕ ದೊರೆ.

ಮಾನ್ವಿ ಆ.16

ಇಂದು ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ಮೈಲ್ 71 ಮತ್ತು 66 ಕವಿತಾಳ ಹತ್ತಿರ ಕಾಲುವೆ ಭೇಟಿ ನೀಡಿ ಪೂರ್ಣಗೊಂಡ ಕಾಮಗಾರಿಯನ್ನು ಪರಿಶೀಲನೆ ಮಾಡಿದ ಮಾನ್ವಿ ವಿಧಾನ ಸಭಾ ಕ್ಷೇತ್ರದ ನಿಕಟ ಪೂರ್ವ ಶಾಸಕರಾದ ಶ್ರೀ ರಾಜಾ ವೆಂಕಟಪ್ಪ ನಾಯಕ ದೊರೆ.

ನಂತರ ಮಾತನಾಡಿ ಕೆಳಭಾಗದ ಸಿರವಾರ ಮತ್ತು ಮಾನ್ವಿ ತಾಲ್ಲೂಕಿನ ರೈತರು ಮಳೆ ಇಲ್ಲದೆ ಈಗಾಗಲೇ ತುಂಬಾ ಸಂಕಷ್ಟದಲ್ಲಿದ್ದಾರೆ ಅದರಿಂದ ಸರ್ಕಾರ ಐಸಿಸಿ ಸಭೆಯಲ್ಲಿ ತೀರ್ಮಾನ ಮಾಡಿದಂತೆ ಕೆಳಭಾಗದ ರೈತರಿಗೆ ನೀರು ಹರಿಸಬೇಕೆಂದು ಒತ್ತಾಯಿಸಿದರು.

ಒಂದು ವೇಳೆ ಕೆಳಭಾಗದ ರೈತರಿಗೆ ನೀರು ಹರಿಸದಿದ್ದರೆ ರೈತರ ಜೊತೆಗೂಡಿ ಉಗ್ರವಾದ ಹೋರಾಟವನ್ನು ಮಾಡುತ್ತೇನೆ ಎಂದು ನಿಕಟ ಪೂರ್ವ ಶಾಸಕರಾದ “ಶ್ರೀ ರಾಜಾ ವೆಂಕಟಪ್ಪ ನಾಯಕ ದೊರೆ” ಸಂಭಂದಪಟ್ಟ ಅಧಿಕಾರಿಗಳಿಗೆ ಹಾಗೂ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಇದೇ ಸಂದರ್ಭದಲ್ಲಿ ರಾಜ್ಯ ಜೆ.ಡಿ.ಎಸ್ ಯುವ ಘಟಕದ ಉಪಾಧ್ಯಕ್ಷರಾದ ರಾಜಾ ರಾಮಚಂದ್ರ ನಾಯಕ ಸಿರವಾರ ತಾಲೂಕು ಜೆ.ಡಿ.ಎಸ್ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಪಾಟೀಲ ಬಲ್ಲಟಗಿ, ಕಾರ್ಯನಿರ್ವಾಹಕ ಅಭಿಯಂತರರಾದ ಕೋದಂಡ ರಾಮಯ್ಯ, ಶರಣಪ್ಪ ಗೌಡ ಮದ್ಲಾಪುರ, ಹನುಮಂತ ಬುಳ್ಳಾಪುರ, ಖಾಜಾಪಾಷ ಕವಿತಾಳ, ರುಕ್ಕುಮುದ್ದೀನ್ ಕವಿತಾಳ, ಸಣ್ಣ ಕಿರಿಲಿಂಗಪ್ಪ, ಶಶಿ ಸಾಹುಕಾರ, ಮುಸ್ತಫಾ ಒಂಟಿ ಬಂಡಿ, ರಾಜಶೇಖರ ಸಾಹುಕಾರ, ಶ್ರೀಕಾಂತ್ ಭೋವಿ, ರಾಮಚಾರಿ ಜಾಲಾಪೂರ, ಶರಣಗೌಡ ಗವಿಗಟ್ಟ, ದಾನಪ್ಪ ಸಿರವಾರ, ರಂಜಿತಾ ಕುಮಾರ್,ಲಕ್ಷ್ಮಣ ಸಿರವಾರ, ಸೂಗೂರಯ್ಯ ಸ್ವಾಮಿ ಗಣದಿನ್ನಿ, ಗೋಪಾಲ ನಾಯಕ ಹರವಿ, ಬಸನಗೌಡ ಬೆಟ್ಟದೂರು, ಲಕ್ಷ್ಮಣ ಯಾದವ, ಶಿವುರಾಮ ರೆಡ್ಡಿ, ಜಯಕುಮಾರ ಮಾನವಿ, ಮಲ್ಲನಗೌಡ, ವಿಜಯ್,ಅಪ್ಪು ಸೇರಿದಂತೆ ರೈತ ಮುಖಂಡರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button