ನಿನ್ನ ಏಳ್ಗೆಗೆ ನೀನೆ ಶಿಲ್ಪಿ – ಜಗನ್ನಾಥ ರಾಂಪೂರ್.

ಮಾನ್ವಿ ಆ.16

ಇಂದಿನ ಮಕ್ಕಳು ನಾಳೆಯ ಭಾರತದ ಭವಿಷ್ಯ ನಿಮ್ಮಲ್ಲಿ ಕಲಿಕೆಯ ಜೊತೆ ಜೊತೆಯಾಗಿ ಜೀವನದ ಕೌಶಲ್ಯಗಳು ಬೆಳಿಬೇಕಿದೆ. ಅತ್ಯುತ್ತಮ ಸಮಾಜ ರೂಪಿಸುವಲ್ಲಿ ನಿಮ್ಮ ಪಾತ್ರ ಕೂಡ ಮುಖ್ಯ ನಮ್ಮ ಸಂಸ್ಥೆಯ ಲಾಭಾಂಶವನ್ನು ಶೇಕಡವಾರುಗಳಲ್ಲಿ ಸಮ ಸಮಾಜ ನಿರ್ಮಿಸಲು ಸಮಾಜ ಮುಖಿ ಕಾರ್ಯಕ್ಕೆ ವಿನಿಯೋಗಿಸುತ್ತೇವೆ ಎಂದು ಸಂಸ್ಥೆಯ ನಿರ್ದೇಶಕ ಜಗನ್ನಾಥ ರಾಂಪೂರ್ ಉದ್ಘಾಟನಾ ನುಡಿಯಲ್ಲಿ ಹೇಳಿದರು.

ಕಾವೇರಿರಂಗ ಪತ್ತಿನ ಸಹಕಾರಿ ಸಂಘ ನಿಯಮಿತ ಮತ್ತು ಸರ್ಕಾರಿ ಬಾಲಕೀಯರ ಪದವಿ ಪೂರ್ವ ಕಾಲೇಜು ಮಾನವಿ ಸಹಯೋಗದೊಂದಿಗೆ ಜೀವನ ಕೌಶಲ್ಯ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು.

ಸಂಪನ್ಮೂಲ ವ್ಯಕ್ತಿ ಮಹಿಬೂಬ್ ಮದ್ಲಾಪುರ ತರಬೇತಿಯಲ್ಲಿ “ಹದಿ ಹರೆಯದ ಹಂತ ಅರ್ಡಲ್ಸ್ ಏಜ್ ನಲ್ಲಿ ನಾವು ನಮ್ಮ ನಿಚ್ಚಳ ಗುರಿ ಅದರ ಪ್ರಮಾಣಿಕ ಪ್ರಯತ್ನ, ಕೌಶಲ್ಯಾದರಿದ ಬದುಕು, ಭಾವನೆಗಳನ್ನು ಹೇಗೆ ನಿರ್ವಾಹಣೆ ಮಾಡಬೇಕು, ಸಂಬಂಧಗಳ ಬಾಂಧವ್ಯ, ಸ್ನೇಹಿತರ ಜೊತೆ ವರ್ತನೆ, ಉತ್ತಮ ಹವ್ಯಾಸಗಳು, ಸಮಾಜಿಕ ಪೀಡುಗು ರೋಗದಂತೆ ಆವರಿಸಿ ಕೊಂಡಿರುವ ಮೊಬೈಲ್ ಅಡಿಕ್ಷನ್ ಬಳಕೆ, ಗುರು ಹಿರಿಯರಿಗೆ ಗೌರವದ ಭಾವನೆ, ನಾಯಕತ್ವ, ಏಕಾಗ್ರತೆಯನ್ನು ಕಾಪಾಡಿ ಕೊಳ್ಳುವ ಹಂತಗಳು, ಓದು ಬರಹದ ಕ್ರಮ ಬದ್ಧತೆ ಬಗ್ಗೆ ಚಟುವಟಿಕೆ ಮತ್ತು ಪ್ರಾಯೋಗಿಕವಾಗಿ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ನಾಗಮಲ್ಲೇಶ ಜಿ. ಮಾತನಾಡಿ ಅತ್ಯವಶ್ಯಕ ತರಬೇತಿ ಸಿಕ್ಕಿದೆ ಮಕ್ಕಳಲ್ಲಿ ಮಕ್ಕಳಿಗೆ ಇದರ ಅವಶ್ಯಕತೆ ಇತ್ತು ಆಂತರಿಕ ವ್ಯಕ್ತಿತ್ವ ವೃದ್ಧಿಸಿ ಕೊಳ್ಳುವುದರಲ್ಲಿ ಈ ತರಬೇತಿ ತುಂಬಾ ಉಪಯುಕ್ತವಾಗಿದೆ. ಈ ಹಂತದಲ್ಲಿ ಹಲವಾರ ಬದಲಾವಣೆ ಕಲಿಕೆ ಛಲದ ನಿರ್ಧಾರಗಳಲ್ಲಿ ನಿರ್ಣಾಯಿಸಲು ಪ್ರತಿಭೆ ಮುಖ್ಯವಾಹಿನಿಯಲ್ಲಿ ಹೊರಹಾಕಲು ಅನುಕೂಲವಾಗಿದೆ ಎಂದರು. ವೇದಿಕೆಯಲ್ಲಿ ಉಪಾಧ್ಯಕ್ಷ ಅರವಿಂದ ಬಾಸುತ್ಕರ್, ಉಪನ್ಯಾಸಕ ಅಯ್ಯಪ್ಪ ಮತ್ತು ವಿದ್ಯಾರ್ಥಿಗಳಿದ್ದರು.

ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button