ಹುಬ್ಬಳ್ಳಿಯಲ್ಲಿ ‘ರುದ್ರಾಭಿಷೇಕಂ’ ಚಿತ್ರದ – ಹಾಡುಗಳ ಬಿಡುಗಡೆ.
ಹುಬ್ಬಳ್ಳಿ ಮೇ.20

‘ಪ್ಯಾನ್ ಇಂಡಿಯಾ ಕ್ರಿಯೇಷನ್ಸ್’ ಬೆಂಗಳೂರ ಅವರ ‘ರುದ್ರಾಭಿಷೇಕಂ’ ಚಲನ ಚಿತ್ರದ ‘ಇಂದಲ್ಲ ನಾಳೆ’ ಮತ್ತು ‘ಹೃದಯದ ಬಾಗಿಲ ತೆರೆದರೆ’ ಎರಡು ಹಾಡುಗಳ ಬಿಡುಗಡೆ ಸಮಾರಂಭ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಗಳ ಮಠದ ಆವರಣದಲ್ಲಿ ನೆರವೇರಿತು.
ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ್ ಶೆಟ್ಟರ್ ದೀಪ ಬೆಳಗಿಸಿ ಉದ್ಘಾಟಿಸಿ ‘ಇಂದಲ್ಲ ನಾಳೆ’ ಹಾಡಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕನ್ನಡ ಚಿತ್ರರಂಗ ಇಂದು ದೊಡ್ಡ ಮಟ್ಟಕ್ಕೆ ಬೆಳೆದಿದ್ದು, ಹಿಂದಿ ಹಾಗೂ ಇಂಗ್ಲಿಷ್ ಚಿತ್ರಗಳಿಗೆ ಸ್ಪರ್ಧೆ ನೀಡುವ ಮಟ್ಟದ ಸಿನಿಮಾಗಳು ನಿರ್ಮಾಣವಾಗುತ್ತಿವೆ. ಪ್ರೇಕ್ಷಕರು ಕನ್ನಡ ಚಿತ್ರಗಳನ್ನು ಚಿತ್ರಮಂದಿರಗಳಲ್ಲೇ ನೋಡಿ ಎಂದರು.
ನಟ ವಿಜಯ ರಾಘವೇಂದ್ರ ಮಾತನಾಡಿ ಸಿದ್ಧಾರೂಢ ಮಠ ನಮ್ಮ ಕುಟುಂಬಕ್ಕೆ ಹೊಸದೇನಲ್ಲ. ಇದು ರಾಜ್ ಕುಮಾರ್ ಮಾಮನ ಹೃದಯಕ್ಕೆ ತುಂಬ ಹತ್ತಿರವಾದ ಸ್ಥಳ, ಶಿವಣ್ಣ, ಅಪ್ಪು ಮಾಮ ಎಲ್ಲರಿಗೂ ಅತ್ಯಂತ ಪ್ರಿಯವಾದ ಜಾಗ” ಎಂದ ಅವರು ಚಿತ್ರದಲ್ಲಿ ಮೊದಲ ಬಾರಿಗೆ ವೀರಗಾಸೆ ಕಲಾವಿದನ ಪಾತ್ರ ನಿರ್ವಹಿಸಿದ್ದು, ತಂದೆ-ಮಗನ ಪಾತ್ರದಲ್ಲಿ ಅಭಿನಯಿಸಿರುವೆ ಎಂದರು.
ನಿರ್ದೇಶಕ ವಸಂತ್‌ಕುಮಾರ್ ಮಾತನಾಡಿ, ದೈವಪರ ಹಿನ್ನೆಲೆಯ ಜನಪದ ಕಲೆಯನ್ನು ಮನೆ ಮನೆಗೂ ತಲುಪಿಸುವ ಉದ್ದೇಶದಿಂದ ಚಿತ್ರ ನಿರ್ಮಿಸಲಾಗಿದೆ. ದೇವನಹಳ್ಳಿ, ಗೋಕರ್ಣ, ಹೊನ್ನಾವರ, ಕುಮಟಾ, ಅಬ್ಬಕ್ಕ ಫೋರ್ಟ್ ಹಾಗೂ ಅಘನಾಶಿನಿ ಹಿನ್ನೀರು ಪ್ರದೇಶಗಳಲ್ಲಿ ೫೦ ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದ್ದು ಚಿತ್ರವು ಜೂನ ೧೬ ರಂದು ತೆರೆಗೆ ಬರಲಿದೆ ಎಂದರು.

ಚಿತ್ರದ ಸಂಗೀತ ನಿರ್ದೇಶಕ ವಿ. ಮನೋಹರ್, ನಿರ್ಮಾಪಕ ಚಿದಾನಂದಮೂರ್ತಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಾಳು ಮುಗಜಿಕೊಂಡಿ, ವಿನಾಯಕ ಘೋಡಕೆ, ಪತ್ರಕರ್ತ ಗಣಪತಿ ಗಂಗೊಳ್ಳಿ, ಸಂಭಾಜಿ ಕಲಾಲ್ ,ಭರಮರೆಡ್ಡಿ ಪೂಜಾರ್, ವಿನಯ್ ಪಾಟೀಲ, ಹಳೆಹುಬ್ಬಳ್ಳಿ ಪೋಲೀಸ್ ಇನ್ಸ್ಪೆಕ್ಟರ್ ಎಂ.ಎನ್.ಸಿಂಧೂರ, ನಾಯಕಿ ಪ್ರಿಯಾಂಕ ತಿಮ್ಮೇಶ, ಮಮತಾಮನು, ಮನು, ಮುತ್ತುರಾಜ್ ಟಿ ಸೇರಿದಂತೆ ಚಿತ್ರ ತಂಡದ ಕಲಾವಿದರು, ತಂತ್ರಜ್ಞರು ಪಾಲ್ಗೊಂಡಿದ್ದರು. ಖ್ಯಾತ ಗಾಯಕ ವಿಷ್ಣು, ಹುಬ್ಬಳ್ಳಿಯ ಗಾಯಕ ರವೀಂದ್ರ ರಾಮದುರ್ಗಕರ ಹಾಡುಗಳ ಮೂಲಕ ರಂಜಿಸಿದರು. ಇದೆ ಸಂದರ್ಭದಲ್ಲಿ ವಿಜಯ ರಾಘವೇಂದ್ರರಿಗೆ ಚಿತ್ರ ತಂಡದಿಂದ ‘ನ್ಯಾಚರಲ್ ಸ್ಠಾರ್’ ಬಿರುದು ನೀಡಿ ಗೌರವಿಸಲಾಯಿತು.
ಚಿತ್ರದಲ್ಲಿ ನಾಯಕರಾಗಿ ವಿಜಯ ರಾಘವೇಂದ್ರ, ನಾಯಕಿಯಾಗಿ ಪ್ರಿಯಾಂಕ ತಿಮ್ಮೇಶ, ಬಲರಾಜ್ ವಾಡಿ, ಶಂಕರ ನಾರಾಯಣ್, ಮೈಸೂರು ಬಸವರಾಜ್, ಬ್ಯಾಂಕ್‌ಪ್ರಸಾದ, ಮನು, ಬುಲೆಟ್ ವಿನು, ವಿನಯ್, ಸನತ್, ಸಂದೀಪ್, ಮಹಾಲಿಂಗ್ ಹೂಗಾರ್, ಸೌಂದರ್ಯ, ನವನೀತ, ಮಮತಾ ಮನು, ಮಂಜುಳಾ, ಧನಲಕ್ಷ್ಮಿ, ಸ್ವಾತಿ ಮೊದಲಾದವರಿದ್ದಾರೆ.
ತಾಂತ್ರಿಕ ವರ್ಗದಲ್ಲಿ ಛಾಯಾಗ್ರಹಣ ಮುತ್ತುರಾಜ್, ವಿ.ಮನೋಹರ್ ಸಂಗೀತ , ಭಜರಂಗಿ ಮೋಹನ್ ನೃತ್ಯ ಸಂಯೋಜನೆ, ಥ್ರಿಲ್ಲರ್‌ಮಂಜು ಸಾಹಸ, ಬಾಬುಖಾನ್ ಕಲಾ ನಿರ್ದೇಶನ, ನೊಣವಿನಕೆರೆ ಕುಮಾರ ಪ್ರಸಾಧನ, ಮುತ್ತುರಾಜ್.ಟಿ ಸಂಕಲನ, ನಾಗೇಂದ್ರ, ಡಾ, ಪ್ರಭು.ಗಂಜಿಹಾಳ, ಡಾ, ವೀರೇಶ್ ಹಂಡಿಗಿ ಪಿ.ಆರ್.ಓ ಸಹ ನಿರ್ದೇಶನ ಮನು ಮತ್ತು ಧೀರಜ್ ಅವರದಿದ್ದು, ಕೆ ವಸಂತ್‌ಕುಮಾರ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಜೊತೆಗೆ ಚಿತ್ರಕ್ಕೆ ಹಾಡುಗಳನ್ನು ಬರೆದು ತತ್ವ ಜ್ಞಾನಿಯಾಗಿ ಅಭಿನಯಿಸಿದ್ದಾರೆ.
ಕೆ.ಎನ್. ಮಂಜುನಾಥ, ಎನ್. ಜಯರಾಮಪ್ಪ, ಕೆ. ವೆಂಕಟೇಶ್, ಬಿ. ಚಿದಾನಂದಮೂರ್ತಿ, ಸುರೇಶ್‌ಬಾಬು, ಅಶ್ವಥ್‌ನಾರಾಯಣ, ಶಿವಕುಮಾರ್. ಕೆ.ಎಸ್. ರವಿಕುಮಾರ್ ಹಾಗೂ ಕುಸುಮ ವಸಂತ್‌ಕುಮಾರ ಚಿತ್ರ ನಿರ್ಮಿಸಿದ್ದಾರೆ.
ರಾಜ್ಯ ಮಟ್ಟದ ವಿಶೇಷ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಡಾ, ಪ್ರಭು ಗಂಜಿಹಾಳ ಗದಗ

