ಹುಲ್ಲೂರ ಗ್ರಾಮದಲ್ಲಿ ಶ್ರೀ ಗ್ರಾಮ ದೇವತೆ, ಶ್ರೀ ಮಾರುತೇಶ್ವರ & ಶ್ರೀ ರಾಮಲಿಂಗೇಶ್ವರ – ಅದ್ದೂರಿ ಜಾತ್ರಾ ಮಹೋತ್ಸವ ಜರುಗುವುದು.
ಹುಲ್ಲೂರ ಮೇ.20

ಮುದ್ದೇಬಿಹಾಳ ತಾಲೂಕಿನ ಹುಲ್ಲೂರ ಗ್ರಾಮದಲ್ಲಿ ಶ್ರೀ ಗ್ರಾಮ ದೇವತೆ ಶ್ರೀ ಮಾರುತೇಶ್ವರ ಹಾಗೂ ಶ್ರೀ ರಾಮಲಿಂಗೇಶ್ವರ ಜಾತ್ರಾ ಮಹೋತ್ಸವವು ಮೇ 20 ರಿಂದ 25 ರ ವರೆಗೆ ಅದ್ದೂರಿ ಜಾತ್ರೆ ನಡೆಯಲಿದೆ.
ಮೇ 20 ಮತ್ತು 21 ರಂದು ಹುಲ್ಲೂರಿನವರಿಗೆ ಮಾತ್ರ ಅವಕಾಶವಿರುವ ಸೂಪರ್ ಸಿಕ್ಸ್ ಕ್ರಿಕೆಟ್ ಟೂರ್ನಮೆಂಟ್, ಊರಿನ ಯುವಕರಿಗೆ ಹಬ್ಬ, ಮೇ 22 ಬೆಳಿಗ್ಗೆ 10 :00 ಗಂಟೆಗೆ ಶ್ರೀ ಗ್ರಾಮ ದೇವತೆ ಪಲ್ಲಕ್ಕಿಯು ಗಂಗಸ್ಥಳದಿಂದ ಸಕಲ ವಾದ್ಯ ವೈಭವಗಳೊಂದಿಗೆ ಡೊಳ್ಳು ಕುಣಿತದೊಂದಿಗೆ ಆಗಮಿಸಲಿದ್ದು.
ನಂತರ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಲಿದ್ದು ಮಧ್ಯಾಹ್ನ ಮಹಾಪ್ರಸಾದ, ಅಂದೇ ರಾತ್ರಿ 10:00 ಗಂಟೆಗೆ ಶ್ರೀ ಮಾರುತೇಶ್ವರ ತರುಣ ನಾಟ್ಯ ಸಂಘ ಹುಲ್ಲೂರ್ ಇವರಿಂದ ” ಸಿಡಿದೆದ್ದ ಶಿವಶಕ್ತಿ” ಅರ್ಥಾರ್ಥ್ (ರೈತನ ಬಾಳು ಕಣ್ಣೀರಿನ ಗೋಳು) ಎಂಬ ಸುಂದರ ಸಾಮಾಜಿಕ ನಾಟಕ, ಟಿ, ಆರ್, ಪೂಜಾರಿ ವಿರಚಿತ ನಾಟಕ ಜರುಗುವುದು. ಮೇ 23 ರಾತ್ರಿ 8:30 ಕ್ಕೆ ಕಲಾಸಿಂಚನ ಮೆಲೋಡಿಸ್ ಮುದ್ದೇಬಿಹಾಳ ರವರಿಂದ ರಸಮಂಜರಿ ಕಾರ್ಯಕ್ರಮ ಜರುಗಲಿದೆ.
ಮೇ 25 ಸೋಮವಾರ ಬೆಳಗ್ಗೆ 10:00 ಗಂಟೆಗೆ ಶ್ರೀರಾಮಲಿಂಗೇಶ್ವರ ಪಲ್ಲಕ್ಕಿ ಉತ್ಸವ ಹಾಗೂ ಸಂಜೆ 5:00 ಗಂಟೆಗೆ ಮಹಾರಾತ್ಯೋತ್ಸವ ಜರುಗುವುದು.
ಅಂದು ಜಾತ್ರೆಯ ಉದ್ದಕ್ಕೂ ಮಹಾಪ್ರಸಾದ, ಈ ಬಾರಿ ಜಾತ್ರೆಯಲ್ಲಿ ಧಾರ್ಮಿಕತೆಯ ಜೊತೆಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ.
ಹುಲ್ಲೂರ ಗ್ರಾಮದ ಸಮಸ್ತ ಸದ್ಭಕ್ತ ವೃಂದ ಮಂಡಳಿ ಜಾತ್ರೆಯನ್ನು ಅಚ್ಚುಕಟ್ಟಾಗಿ ನಡೆಸಲು ಸಿದ್ಧತೆ ಮಾಡಿ ಕೊಂಡಿದೆ ಎಂದು ಜಾತ್ರಾ ಕಮಿಟಿಯು ನಮ್ಮ ಪ್ರಕಟಣೆಯಲ್ಲಿ ತಿಳಿಸಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ. ಸಂಕನಾಳ ಮುದ್ದೇಬಿಹಾಳ

