ಎಲ್ಲಾ ಶಕ್ತಿಯೂ ನಮ್ಮೊಳಗೆ ಇದೆ ಅದರಲ್ಲಿ ವಿಶ್ವಾಸವಿರ ಬೇಕು – ಮಾತಾಜೀ ತ್ಯಾಗಮಯೀ.

ಚಳ್ಳಕೆರೆ ಜೂ.23

ಪೂಜ್ಯ ಮಾತಾಜೀ ತ್ಯಾಗಮಯೀ ಅವರಿಂದ ಸ್ವಾಮಿ ವಿವೇಕಾನಂದರ ಚೈತನ್ಯದಾಯಕ ನುಡಿಗಳು

ಮನುಷ್ಯನೊಳಗೆ ಎಲ್ಲಾ ಶಕ್ತಿ-ಸಾಮರ್ಥ್ಯಗಳು ಇವೆ.ಅವನು ಅದರಲ್ಲಿ ವಿಶ್ವಾಸವಿಟ್ಟು ಮುಂದುವರೆದರೆ ಅದ್ಭುತ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷೆ ಮಾತಾಜೀ ತ್ಯಾಗಮಯೀ ತಿಳಿಸಿದರು.

ಗಾಯತ್ರಿ ಮಂತ್ರ ಪಠಣ

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ ವಾರದ ವ್ಯಕ್ತಿತ್ವ ನಿರ್ಮಾಣಕಾರಿ ತರಗತಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು “ಸ್ವಾಮಿ ವಿವೇಕಾನಂದರ ಚೈತನ್ಯದಾಯಕ ನುಡಿಗಳ” ಬಗ್ಗೆ ಮಾತನಾಡುತ್ತಿದ್ದರು.

ಶ್ರೀರಾಮಕೃಷ್ಣರ ನಾಮಸ್ಮರಣೆ

ಈ ಕಾರ್ಯಕ್ರಮದ ಪ್ರಯುಕ್ತ ಡಾ, ಭೂಮಿಕಾ ನೇತೃತ್ವದಲ್ಲಿ ಮಕ್ಕಳಿಂದ ಓಂಕಾರ, ದಿವ್ಯತ್ರಯರ ಪ್ರಣಾಮಮಂತ್ರ ಪಠಣ, ಶ್ರೀರಾಮಕೃಷ್ಣರ ನಾಮಸ್ಮರಣೆ, ಗಾಯತ್ರಿ ಮಂತ್ರ ಪಠಣ, ಯತೀಶ್ ಎಂ ಸಿದ್ದಾಪುರ ಅವರಿಂದ ಭಜನೆ ಹಾಗೂ ಪ್ರಸಾದ ವಿನಿಯೋಗ ನಡೆಯಿತು.

ಡಾ, ಭೂಮಿಕ ಅವರ ನೇತೃತ್ವದಲ್ಲಿ ಮಕ್ಕಳಿಂದ ದಿವ್ಯತ್ರಯರ ಪ್ರಣಾಮ ಮಂತ್ರ ಪಠಣ

ತರಗತಿಯಲ್ಲಿ ಸುಧಾಮಣಿ, ರಶ್ಮಿ, ವಿವೇಕ್, ಯಶಸ್ವಿ, ಹರ್ಷಿತಾ, ಚರಣ್ಯ, ಸಹನಾ, ವಿವಿಕ್ತ, ಯಶಸ್, ಚಿರಣ್ಯ, ಜಶ್ವಿತಾ, ಕುಸುಮ, ಧ್ರುವ ನಾರಾಯಣ, ನಿಖಿಲೇಶ್ ಯಾದವ್, ಲಕ್ಷ್ಮೀ, ನಮ್ರತಾ, ಹರ್ಷಿಕಾ, ಚಿರಾಗ್, ಲಹರಿ, ಮಹಾಲಕ್ಷ್ಮೀ, ಸಂಜನಾ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button