ಕುಡಿಯುವ ನೀರಿಗಾಗಿ ತಾಲೂಕ ಪಂಚಾಯಿತಿ ಕಚೇರಿಗೆ ಮುತ್ತಿಗೆ – ಖಾಲಿ ಕೊಡಗಳೊಂದಿಗೆ ಗ್ರಾಮಸ್ಥರ ಧರಣಿ.
ಗುಂಡಕರ್ಜಗಿ ಜೂ.23

ಮುದ್ದೇಬಿಹಾಳ ತಾಲೂಕಿನ ಗುಂಡಕರ್ಜಗಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವoತೆ ಆಗ್ರಹಿಸಿ ಪಟ್ಟಣದ ತಾ.ಪ0 ಕಚೇರಿ ಎದುರು ಖಾಲಿ ಕೊಡಗ ಳೊಂದಿಗೆ ಪ್ರತಿಭಟನೆ ನಡೆಸಿದ ಗ್ರಾಮಸ್ಥರು ಮತ್ತು ಮಹಿಳೆಯರು ಇದ್ದರು.
ಮುದ್ದೇಬಿಹಾಳ, ರೂಡಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗುಂಡಕರ್ಜಗಿ ಗ್ರಾಮದಲ್ಲಿ ತೀವ್ರ ಗೊಂಡಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಖಂಡಿಸಿ ಗ್ರಾಮಸ್ಥರು ಹಾಗೂ ಮಹಿಳೆಯರು ಮಂಗಳವಾರ ಇಲ್ಲಿನ ತಾಲೂಕ ಪಂಚಾಯಿತಿ ಕಚೇರಿ ಎದುರು ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ನಡೆಸಿ, ಅಧಿಕಾರಿಗಳ ನಿರ್ಲಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ಕುಡಿಯುವ ನೀರಿನ ಕುರಿತು ಹಲವು ಬಾರಿ ಮನವಿ ಸಲ್ಲಿಸಿದ್ದರು ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಿದ ಗ್ರಾಮಸ್ಥರು ರೂಡಗಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಭಾರತಿ ಸಿನ್ನೂರ್ ಘೋಷಣೆ ಕೂಗಿದರು, ಮಳೆ ಕೊರತೆಯಿಂದ ಗ್ರಾಮದಲ್ಲಿ ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಉಂಟಾಗಿದ್ದು, ದಿನಗೂಲಿ ಕಾರ್ಮಿಕರಾಗಿರುವ ಜನರಿಗೆ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಎಂದು ಪ್ರತಿಭಟನಾಕಾರರು ದೂರಿದರು. ತಾ ಪಂ ಕಚೇರಿ ಮುಖ್ಯಗೇಟ್ ಮುಂದೆ ಖಾಲಿ ಕೊಡಗುಗಳನ್ನು ಇಟ್ಟು ಸತ್ಯಾಗ್ರ ನಡೆಸಿದ ಗ್ರಾಮಸ್ಥರು, ಎರಡು ದಿನಗಳ ಒಳಗೆ ಸಮಸ್ಯೆಯನ್ನು ಬಗೆಹರಿಸದಿದ್ದರೆ ಹೋರಾಟವನ್ನು ಮತ್ತಷ್ಟು ತಿವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಾ.ಪ0 ಸಹಾಯಕ ಲೆಕ್ಕಾಧಿಕಾರಿ ವೀರೇಶ್ ಹೂಗಾರ್ ಅವರು ಹೋರಾಟಗಾರರೊಂದಿಗೆ ಚರ್ಚೆ ನಡೆಸಿ, ತಕ್ಷಣವೇ ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುವುದು ಹಾಗೂ ಎರಡು ದಿನಗಳೊಳಗೆ ಪೈಪ್ ಲೈನ್ ದುರಸ್ಥಿ ಮಾಡಿ ಶಾಶ್ವತ ನೀರು ಸರಬರಾಜು ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಯುವ ಮುಖಂಡ ಆನಂದ್ ಮುದೂರ, ಗ್ರಾಮದಲ್ಲಿ ಹಲವು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಇದ್ದರೂ ಸಂಬಂಧಪಟ್ಟ ಅಧಿಕಾರಿಗಳು ಸ್ಪಂದಿಸಿಲ್ಲ, ಎಂದು ಅಸಮಾಧಾನ ವ್ಯಕ್ತಪಡಿಸಿದರು, ಅಧಿಕಾರಿಗಳು ಲಿಖಿತ ಭರವಸೆ ನೀಡಿದ ಬಳಿಕ ಗ್ರಾಮಸ್ಥರು ತಮ್ಮ ಧರಣಿಯನ್ನು ಹಿಂಪಡೆದರು.
ಈ ಸಂದರ್ಭದಲ್ಲಿ ಆನಂದ ಮುದುರ, ಬಸವರಾಜ್ ಚಲವಾದಿ, ಪರಶುರಾಮ್ ಬಸರಕೋಡ್, ಮುತ್ತು ಅಮರಗೋಳ, ಶ್ರೀಧರ್ ಮಾದರ, ಶಿವಾನಂದ ಅರಳಿ ಚಂಡಿ, ಅಲ್ಲಾಭಕ್ಷ ಚಪ್ಪರ ಬಂದ್, ರಂಗಪ್ಪ ಸುತಗುಂಡರ, ರಮಜಾನ್ ಚಪ್ಪುರ್ ಬಂದ್, ನಾಗಮ್ಮ ಹೂಗಾರ್, ಬಸಲಿಂಗಮ್ಮ ಬಿರಾದಾರ್, ಶ್ರೀದೇವಿ ಅರಳಿಚಂಡಿ, ಜಯಂತ್ ಬಿ ಚಪ್ಪರ ಬಂದ್, ರಾಜ್ ಬಿ ಚಪ್ಪರ ಬಂದ, ಸೇರಿದಂತೆ ಅನೇಕ ಇನ್ನೂ ಗ್ರಾಮಸ್ಥರು ಭಾಗವಹಿಸಿದ್ದರು, ಮುದ್ದೇಬಿಹಾಳ ಠಾಣೆಯ ಪಿಎಸ್ಐ ಸಂಜಯ್ ತಿಪ್ಪಾರೆಡ್ಡಿ ಕ್ರೈಂ ಪಿಎಸ್ಐ ಆರ್,ಎಸ್ ಬಂಗಿ ಹಾಗೂ ಪೊಲೀಸ್ ಸಿಬ್ಬಂದಿ ಬಂದೋಬಸ್ತ್ ಒದಗಿಸಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಬಸವರಾಜ ಸಂಕನಾಳ ಮುದ್ದೇಬಿಹಾಳ
