ಯೋಗ ಮಾಡಿ ನಿರೋಗಿಯಾಗಿ – ಎಚ್.ಬಿ.ಎಂ.

ಮಾನ್ವಿ ಜೂ.23

“ಯೋಗವು ಕೇವಲ ವ್ಯಾಯಾಮವಲ್ಲ; ಅದು ಉತ್ತಮ ಆರೋಗ್ಯ, ಶಾಂತ ಮನಸ್ಸು ಮತ್ತು ಉತ್ತಮ ವ್ಯಕ್ತಿತ್ವವನ್ನು ರೂಪಿಸುವ ಜೀವನ ಪದ್ಧತಿಯಾಗಿದೆ. ವಿದ್ಯಾರ್ಥಿಗಳು ಪ್ರತಿದಿನ ಕನಿಷ್ಠ 20 ರಿಂದ 30 ನಿಮಿಷ ಯೋಗಾಭ್ಯಾಸ ಮಾಡಿದರೆ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಿ ಜೀವನದಲ್ಲಿ ಯಶಸ್ಸು ಸಾಧಿಸಬಹುದು. “ಆರೋಗ್ಯವೇ ಭಾಗ್ಯ” ಎಂಬ ಮಾತಿನಂತೆ, ಯೋಗವು ಆರೋಗ್ಯಕರ ಮತ್ತು ಸಂತೋಷದ ಬದುಕಿಗೆ ದಾರಿ ತೋರಿಸುತ್ತದೆ” ಉದ್ಘಾಟಿಸಿದ ಮಾಜಿ ಪುರಸಭೆ ಸದಸ್ಯ ಎಚ್.ಬಿ.ಎಂ. ಭಾಷ ಹೇಳಿದರು.

ಮೇರಾ ಯುವ ಭಾರತ ಕೇಂದ್ರ ರಾಯಚೂರು, ಭಾರತ ಸೇವಾದಳ, ರೆಡ್ ಕ್ರಾಸ್, ವಂದೇ ಮಾತರಂ ಯುವ ಸಂಘ ಮದ್ಲಾಪುರ, ಬಡವರ ಬಂಧು ಯುವಕ ಸಂಘ ಮಾನ್ವಿ ಸಂಯುಕ್ತ ಆಶ್ರಯದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಸರ್ಕಾರಿ ಪ್ರೌಢ ಶಾಲೆ ಕೋನಾಪೂರ ಪೇಟ್ ಶಾಲೆ ಅವರಣದಲ್ಲಿ ಆಚರಿಸಿ ಪ್ರಶಸ್ತಿಪತ್ರ ವಿತರಸಲಾಯಿತು.

ಮುಖ್ಯ ಅತಿಥಿಯಾಗಿ ಮಾತನಾಡಿದ ಸಂಪನ್ಮೂಲ ವ್ಯಕ್ತಿ ಮಹಿಬೂಬ್ ಮದ್ಲಾಪುರ “ಇವತ್ತಿನ ಬದುಕು ಒತ್ತಡಮಯ ಮತ್ತು ರೋಗಗಳೊಂದಿಗೆ ಬದುಕುವ ಜೀವನ ಅತ್ಯುತ್ತಮ ಜೀವನ ಶೈಲಿ ಅರ್ಥಪೂರ್ಣ ಮಾದರಿಯ ಇರಲು ಬಯಸಿದರೆ ಯೋಗ ರೂಡಿಸಿಕೊಳ್ಳಿ. ಮಕ್ಕಳಿಗೆ ಏಕಾಗ್ರತೆ ವೃದ್ಧಿಸಿಕೊಳ್ಳಲು ಯೋಗಾಭ್ಯಾಸ ಅಗತ್ಯ ಮೊಬೈಲ್ ಮತ್ತು ಟಿವಿ ರಿಮೊಟ್ ಗಳಿಂದ ಮುಕ್ತತೆ ಪಡೆದು ಸಾಧನೆಯ ಹಾದಿಯತ್ತಾ ಸಾಗಲು ನಾವು ದಿನನಿತ್ಯ ದ್ಯಾನ ಮಾಡುವುದು ಉತ್ತಮ” ಎಂದು ಹೇಳಿದರು.

ಅಧ್ಯಕ್ಷತೆಯಲ್ಲಿ ಮುಖ್ಯಗುರು ವಿರುಪಾಕ್ಷಪ್ಪ ಮಾತನಾಡುತ್ತಾ “ನಮ್ಮ ದೇಶದ ಅತ್ಯುನ್ನತ ಸಾಧನೆಗಳಲ್ಲಿ ಒಂದು ಪ್ರಪಂಚಕ್ಕೆ ನನ್ನ ದೇಶ ಯೋಗ ಪರಿಚಯಿಸಿದೆ ನಾವು ನೀವುಗಳು ಜಿಮ್ ಮತ್ತು ಇನ್ನಿತರೆಗಳಲ್ಲಿ ಭಾಗಿಯಾಗುವುದಕ್ಕಿಂತ ವ್ಯಾಯಮ ದ್ಯಾನ ಯೋಗ ಮಾಡೋಣ ದೇಹದಲ್ಲಿನ ಮನಸ್ಸು ಆತ್ಮ ಶುದ್ದವಾಗಿಟ್ಟು ಕೊಳ್ಳೋಣ.

ಈ ಸಂಧರ್ಭದಲ್ಲಿ ವೇದಿಕೆಯಲ್ಲಿ ಯೋಗ ಗುರು ಮೌನೇಶ ಪೋತ್ನಾಳ್, ಶಿಕ್ಷಕ ಸಂಜೀವಪ್ಪ ಚಲವಾದಿ, ವಿಜಯ, ಮಹೆಬೂಬ್ ಯಾದಗಿರಿ, ರಘುನಂದನ್, ರಾಮಸ್ವಾಮಿ, ಬಡವರ ಬಂಧು ಸಂಘದ ಅಧ್ಯಕ್ಷ ದೇವಣ್ಣ ಭಜಂತ್ರಿ, ಗ್ರಂಥಪಾಲಕ ರಮೇಶ ಪೂಜಾರಿ, ಪ್ರಗತಿಪರ ರೈತ ರೆಡ್ಡಿ ಮತ್ತು ಶಿಬಿರಾರ್ಥಿಗಳಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button