🚨ಬ್ರೇಕಿಂಗ್ ನ್ಯೂಸ್ ಬ್ರೇಕಿಂಗ್ ನ್ಯೂಸ್🚨 🚨ಕೋಟ ಪಿಎಸ್ಐ ಮಾಂತೇಶ್ ಬಾಬು ಗೌಡ ಜನಸ್ನೇಹಿ ಕಾರ್ಯಕ್ಕೆ ಶ್ಲಾಘನೆ, ಮೂಡುಗಿಳಿಯಾರಿನಲ್ಲಿ ಸೈಬರ್ ಅಪರಾಧ ತಡೆ ಹಾಗೂ ಹಿರಿಯ ನಾಗರಿಕರ – ರಕ್ಷಣಾ ಜಾಗೃತಿ ಸಭೆ ಅತ್ಯಂತ ಯಶಸ್ವಿ!🚨
ಕೋಟ/ಮೂಡುಗಿಳಿಯಾರು ಜೂ.24

“ಹಿರಿಯ ನಾಗರಿಕರಿಗೆ ಯಾವುದೇ ಸಮಸ್ಯೆ ಎದುರಾದರೂ ತಕ್ಷಣ ನಮ್ಮನ್ನು ಸಂಪರ್ಕಿಸಿ. ನಿಮ್ಮ ಪ್ರತಿಯೊಂದು ಸಮಸ್ಯೆಗೂ ನಾವು ಪ್ರಾಮಾಣಿಕವಾಗಿ ಸ್ಪಂದಿಸುತ್ತೇವೆ ಮತ್ತು ನಿಮ್ಮ ರಕ್ಷಣೆಗೆ ಸದಾ ನಿಮ್ಮ ಬೆನ್ನಿಗೆ ನಿಲ್ಲುತ್ತೇವೆ” ಎಂದು ಕೋಟ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ (PSI) “ಮಾಂತೇಶ್ ಬಾಬು ಗೌಡ” ಅವರು ನೀಡಿದ ಭರವಸೆ ಇಡೀ ಸಭೆಯ ಮತ್ತು ಸಾರ್ವಜನಿಕರ ಮನ ಗೆದ್ದಿದೆ.
ಇಲ್ಲಿನ “ನೇತಾಜಿ ಸುಭಾಷ್ ಚಂದ್ರ ಬೋಸ್ ಪ್ರೌಢ ಶಾಲೆಯ ಸಭಾಂಗಣದಲ್ಲಿ” “ಹಿರಿಯ ನಾಗರಿಕರ ವೇದಿಕೆ ಕೋಟ ಮೂಡುಗಿಳಿಯಾರು” ಇವರ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಹಿರಿಯ ನಾಗರಿಕರಿಗೆ ಹಮ್ಮಿಕೊಳ್ಳಲಾಗಿದ್ದ ‘ಸೈಬರ್ ಅಪರಾಧ ತಡೆ ಅರಿವು ಮತ್ತು ರಕ್ಷಣಾ ಜಾಗೃತಿ’ ಕಾರ್ಯಕ್ರಮದಲ್ಲಿ ಅವರು ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
🚨 ದಕ್ಷ ಅಧಿಕಾರಿಗಳ ನಿಯೋಜನೆ:-

ಉಡುಪಿ ಎಸ್ಪಿ ಹರಿರಾಮ್ ಶಂಕರ್ ಅವರಿಗೆ ಸಾರ್ವಜನಿಕ ಅಭಿನಂದನೆ! ಪ್ರಸ್ತುತ ಸಮಾಜದಲ್ಲಿ ಹೆಚ್ಚುತ್ತಿರುವ ಡಿಜಿಟಲ್ ವಂಚನೆಗಳನ್ನು ತಡೆಯುವ ನಿಟ್ಟಿನಲ್ಲಿ ಸಾರ್ವಜನಿಕರ ಹಿತ ಕಾಯುವ, ಇಂತಹ ಅತ್ಯಂತ ದಕ್ಷ, ಜನಸ್ನೇಹಿ ಹಾಗೂ ಕರ್ತವ್ಯ ದಕ್ಷತೆಯುಳ್ಳ ಅಧಿಕಾರಿಗಳನ್ನು ಕೋಟ ಪೊಲೀಸ್ ಠಾಣೆಗೆ ನಿಯೋಜಿಸಿದ “ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ (SP) ಹರಿರಾಮ್ ಶಂಕರ್ (IPS)” ಅವರಿಗೆ ಕೋಟ ಮೂಡುಗಿಳಿಯಾರಿನ ಹಿರಿಯ ನಾಗರಿಕರು ಹಾಗೂ ಸಮಸ್ತ ಸಾರ್ವಜನಿಕರು ಪ್ರೀತಿ ಪೂರ್ವಕ ಧನ್ಯವಾದಗಳು ಮತ್ತು ವಿಶೇಷ ಅಭಿನಂದನೆಗಳನ್ನು ಸಲ್ಲಿಕೆ ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ ಪಿಎಸ್ಐ ಮಾಂತೇಶ್ ಬಾಬು ಗೌಡ ಅವರ ಕಾಳಜಿಯುಕ್ತ ಮಾನವೀಯ ನಡೆಯನ್ನು ಮೆಚ್ಚಿ, ಹಿರಿಯ ನಾಗರಿಕರು ಭಾವುಕರಾಗಿ ವೇದಿಕೆಯಲ್ಲಿ ಅವರನ್ನು ಭವ್ಯವಾಗಿ ಸನ್ಮಾನಿಸಿ ಗೌರವಿಸಿದರು.
💻 ಮೊಬೈಲ್ ಸುರಕ್ಷತೆ ಹಾಗೂ ರಸ್ತೆ ಸುರಕ್ಷತೆಯ ಮಹತ್ವದ ಮಾಹಿತಿ:-

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೋಟ ಪಿಎಸ್ಐ ಮಾಂತೇಶ್ ಬಾಬು ಗೌಡ ಹಾಗೂ ಠಾಣಾ ಸಿಬ್ಬಂದಿ “ಅಶೋಕ್ ಕುಮಾರ್” ಅವರು ಸಭೆಗೆ ಪ್ರಮುಖ ಮಾಹಿತಿಗಳನ್ನು ನೀಡಿದರು.
ಮೊಬೈಲ್ ಸುರಕ್ಷತೆ:-
ವಾಟ್ಸಾಪ್ ಹಾಗೂ ಮೊಬೈಲ್ ಮೂಲಕ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಸೈಬರ್ ವಂಚನೆಗಳ ಕುರಿತು ಹಿರಿಯ ನಾಗರಿಕರು ಮತ್ತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಯಿತು.
ರಸ್ತೆ ಸುರಕ್ಷತೆ:-
ಪ್ರತಿಯೊಬ್ಬರೂ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಮತ್ತು ವಾಹನಗಳ ವೇಗದ ಮಿತಿಯನ್ನು ಕಾಯ್ದು ಕೊಳ್ಳುವಂತೆ ರಸ್ತೆ ಸುರಕ್ಷತೆಯ ಬಗ್ಗೆ ಕಟ್ಟುನಿಟ್ಟಿನ ತಿಳಿ ಹೇಳಲಾಯಿತು.
ಗುರುತಿನ ಚೀಟಿ:-
ಹಿರಿಯ ನಾಗರಿಕರ ಗುರುತು ಚೀಟಿಯ ಮಹತ್ವ ಹಾಗೂ ಸಭೆಗಳಿಗೆ ಸಮಯಕ್ಕೆ ಸರಿಯಾಗಿ ಹಾಜರಾಗುವ ಬಗ್ಗೆಯೂ ವೇದಿಕೆಯಿಂದ ಪ್ರಮುಖ ಸಲಹೆಗಳು ಬಂದವು.
📝 ನೂತನ ಸದಸ್ಯರ ಸೇರ್ಪಡೆ ಹಾಗೂ ಸಭಾ ನಡಾವಳಿ:-

ಪ್ರೌಢ ಶಾಲೆಯ ವಿದ್ಯಾರ್ಥಿನಿಯರ ಸುಶ್ರಾವ್ಯ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯರಾದ “ಸೋಮಶೇಖರ ಶೆಟ್ಟಿ” ಅವರು ಸರ್ವರನ್ನೂ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಸಭೆಯಲ್ಲಿ ಹಿಂದಿನ ಸಭಾ ನಡವಳಿಕೆಯ ವರದಿಯನ್ನು ಕಾರ್ಯದರ್ಶಿಗಳು ಓದಿ ಅಧಿಕೃತ ಅನುಮೋದನೆ ನೀಡಿದರು. ಸಂಘದ ಕೋಶಾಧಿಕಾರಿಗಳು ಹಿಂದಿನ ತಿಂಗಳ ಲೆಕ್ಕ ಪತ್ರವನ್ನು ಮಂಡಿಸಿದರು.

ಇದಕ್ಕೆ ಬಾಬಲಾಲ್ ಅವರು ಚರ್ಚೆ ನಡೆಸಿ ಬೆಂಬಲಿಸಿದರು. ಇದೇ ಸಂದರ್ಭದಲ್ಲಿ “ವೆಂಕಟರಮಣ ಆಚಾರ್” ಅವರನ್ನು ಶಾಲು ಹೊದಿಸಿ, ಹೂಮಾಲೆ ಹಾಕಿ ಅತ್ಯಂತ ಪ್ರೀತಿಯಿಂದ ಸಂಘಟನೆಗೆ ಬರಮಾಡಿ ಕೊಳ್ಳಲಾಯಿತು.
🎂 ಹಿರಿಯ ಚೇತನಗಳ ಹುಟ್ಟು ಹಬ್ಬದ ಸಂಭ್ರಮ-ಸನ್ಮಾನ:-
ಇದೇ ಸುಂದರ ವೇದಿಕೆಯಲ್ಲಿ ಹಿರಿಯ ನಾಗರಿಕರಾದ “ಅನಿತಾ ಶೆಟ್ಟಿ ಗಿಳಿಯಾರು (ಸಣ್ಣ ಬಸವನ ಕಲ್ಲು), ಸೋಮಶೇಖರ ಶೆಟ್ಟಿ (ನಿವೃತ್ತ ಮುಖ್ಯೋಪಾಧ್ಯಾಯರು), ಶರಣಯ್ಯ ಹಿರೇಮಠ್ (ನಿವೃತ್ತ ಮೆಸ್ಕಾಂ ಅಧಿಕಾರಿ) ಮತ್ತು ಪಾರ್ವತಿ ಶೆಡ್ತಿ” ಇವರೆಲ್ಲರ ಹುಟ್ಟು ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು.

ಈ ಹಿರಿಯ ಚೇತನಗಳು ತಮ್ಮ ಸುದೀರ್ಘ ಜೀವನದ ಸಾರ್ಥಕ ಪಯಣದ ಅನುಭವಗಳನ್ನು ಹಂಚಿ ಕೊಂಡರು. ಸಂಘದ ವತಿಯಿಂದ ಇವರೆಲ್ಲರನ್ನೂ ಭವ್ಯವಾಗಿ ಸನ್ಮಾನಿಸಿ, ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರಲಾಯಿತು.
👥 ಗಣ್ಯರ ಉಪಸ್ಥಿತಿ:-
ಕಾರ್ಯಕ್ರಮದ ಯಶಸ್ವಿ ನಿರೂಪಣೆಯನ್ನು ಶರಣಯ್ಯ ಹಿರೇಮಠ್ ನೆರವೇರಿಸಿದರು. ವೇದಿಕೆಯಲ್ಲಿ ಸುಬ್ರಮಣ್ಯ ಹೇರಳೆ, ಶಂಕರಾಚಾರ್ಯ, ಕೋಟ ಗ್ರಾ.ಪಂ. ಮಾಜಿ ಸದಸ್ಯರಾದ ರಾಜರಾಮ್ ಶೆಟ್ಟಿ ಹಾಗೂ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ಜೂಲಿಯೆಟ್ ಕ್ರಾಸ್ಥಾ ಉಪಸ್ಥಿತರಿದ್ದರು.
ಬಂದಂತಹ ಅತಿಥಿಗಳಿಗೆ, ಠಾಣಾ ಸಿಬ್ಬಂದಿ ಅಶೋಕ್ ಕುಮಾರ್ ಅವರಿಗೆ ಹಾಗೂ ಉಪಸ್ಥಿತರಿದ್ದ ಮಾಧ್ಯಮ ಮಿತ್ರರನ್ನು ಗುರುತಿಸಿ ಹೂವು ನೀಡಿ ಗೌರವಿಸಲಾಯಿತು.
ಒಟ್ಟಾರೆಯಾಗಿ, ವಿದ್ಯಾರ್ಥಿಗಳಿಗೆ ಜ್ಞಾನ ದೀಪ ಹಾಗೂ ಹಿರಿಯ ನಾಗರಿಕರಿಗೆ ರಕ್ಷಣೆಯ ಭರವಸೆ ನೀಡಿದ ಈ ಸಮಾರಂಭವು ಅತ್ಯಂತ ಸುಂದರ ಹಾಗೂ ಅರ್ಥಪೂರ್ಣ ಕಾರ್ಯಕ್ರಮವಾಗಿ ಮೂಡಿ ಬಂತು.
ವರದಿ:ಆರತಿ.ಗಿಳಿಯಾರು.ಉಡುಪಿ.
