ಅದ್ವಿಕ್ ಹುಟ್ಟು ಹಬ್ಬದ ಪ್ರಯುಕ್ತ ಬೆಳಕು ಶಾಲೆಗೆ – ಲೇಖನ ಸಾಮಗ್ರಿಗಳ ವಿತರಣೆ.
ಚಳ್ಳಕೆರೆ ಜೂ.24


ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ಸದ್ಭಕ್ತರು ಹಾಗೂ ಉತ್ತಮ ದಾನಿಗಳು ಆದ ಡಾ, ರಜಿತಾ ಮತ್ತು ಅಮಿತಗುಪ್ತ ಅವರ ಎರಡನೇ ಮಗ ಅದ್ವಿಕ್ ನ ನಾಲ್ಕನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ನಗರದ ನಾಯಕನಹಟ್ಟಿ ರಸ್ತೆಯಲ್ಲಿ ಬರುವ ವೆಂಕಟೇಶ್ವರ ನಗರದಲ್ಲಿರುವ ಬೆಳಕು-ಕಿವುಡ ಮತ್ತು ಮೂಗರ ವಸತಿ ಶಾಲೆಯ ಮೂವತ್ತೈದು ಮಕ್ಕಳಿಗೆ ಬ್ಯಾಗ್, ಪ್ಲೈವುಡ್, ಸ್ಲೇಟ್, ಪೆನ್, ಪೆನ್ಸಿಲ್ ಸೇರಿದಂತೆ ಲೇಖನ ಸಾಮಗ್ರಿಗಳನ್ನು ವಿತರಿಸುವುದರ ಜೊತೆಗೆ ಮಕ್ಕಳು ಮತ್ತು ಶಾಲೆಯ ಶಿಕ್ಷಕರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡುವ ಮೂಲಕ ಸಾರ್ಥಕ ಸೇವೆಯನ್ನು ಸಲ್ಲಿಸಿ ಜನ್ಮ ದಿನವನ್ನು ಅರ್ಥ ಪೂರ್ಣವಾಗಿ ಆಚರಿಸಿ ಸಂಭ್ರಮಿಸಲಾಯಿತು.


ಕಾರ್ಯಕ್ರಮದ ಕುರಿತು ಶಾಲೆಯ ಸಹ ಶಿಕ್ಷಕ ಮಂಜುನಾಥ ಮಾತನಾಡಿ ಹುಟ್ಟು ಹಬ್ಬವನ್ನು ಈ ರೀತಿಯಾಗಿ ಆಚರಿಸಿ ಕೊಳ್ಳುತ್ತಿರುವುದು ಬಹಳ ಅರ್ಥ ಪೂರ್ಣವಾಗಿದ್ದು. ಇದು ಎಲ್ಲರಿಗೂ ಪ್ರೇರಣೆ ಮತ್ತು ಆದರ್ಶವಾಗ ಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಸುಧಾಮಣಿ, ಡಾ, ಅಮಿತಗುಪ್ತ, ಡಾ, ರಜಿತಾ, ಅದ್ವೈತ್, ಸಮಾಜ ಸೇವಕ ಯತೀಶ್ ಎಂ ಸಿದ್ದಾಪುರ, ರಾಕೇಶ್, ತುಳಸೀ, ಶಾಲೆಯ ಮುಖ್ಯ ಶಿಕ್ಷಕ ರಾಮಾಂಜನೇಯ, ಸಹ ಶಿಕ್ಷಕರಾದ ಶ್ರೀನಿವಾಸ, ಸರಸ್ವತಿ, ಮಂಜಣ್ಣ, ಸುಮಂಗಳಾ, ಖಾಸಿಂಸಾಬ್, ಮೂರ್ತಿ, ಭೀಮಪ್ಪ, ರಾಜಣ್ಣ, ನಾಗರಾಜ್ ಸೇರಿದಂತೆ ಮಕ್ಕಳು ಉಪಸ್ಥಿತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

