“ಮಳೆ – ಇಳೆಗೆ ಬರಲು ಪರಿಸರ ಸ್ವರ್ಗ ಸಿರಿಯು”…..

ಮಳೆ ಇಳೆಗೆ ಸುರಿಯಲು ಕಪ್ಪನೆಯ
ಮೋಡಗಳ ಸಮ್ಮೀಲನವು
ಗುಡಗು ಮಿಂಚುಗಳ ಗರ್ಜನೆಯ ಆರ್ಭಟವು
ಮಳೆ ಧರೆಗೆ ಇಳೆಯಲು
ಸರ್ವ ಜೀವ ಸಂಕುಲಗಳ ಹರುಷದ ಹೊನಲು
ಭೂಮಾತೆಯ ಮಡಿಲು ಹಸಿರು ಸಿರಿಯು
ಸರ್ವ ಸಸ್ಯಜೀವ ಸಂಕುಲಗಳು
ಹೂವುನಗೆಯು
ರೈತಾಪಿಗಳ ಕಾಯಕ ಕೃಷಿಗೆ ಮೆರಗು
ಹೂವು ಹಣ್ಣು ತರಕಾರಿ ಬೆಳೆಗೆ ಜೇನ ಹನಿಯು
ಪ್ರಾಣಿ ಪಕ್ಷಿ ಕ್ರೀಮಿಕೀಟಗಳ ವಂಶಾಭಿವೃದ್ಧಿಗೆ
ಜೀವ ಸೆಲೆಯು
ಸರ್ವ ಜಲಚರಗಳ ನಲಿವ ಖುಷಿಯ ಕ್ಷಣಗಳು
ಗಿಡ ಮರ ಬೆಳೆದರೆ ಮಳೆ ಬೆಳೆಯು
ಮಳೆ ಇಳೆಗೆ ಬರಲು ಪರಿಸರ ಸ್ವರ್ಗ ಸಿರಿಯು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ದೇಶಂಸು ದೇವರ ಹಿಪ್ಪರಗಿ

