ಒಂದು ಹಸಿರು ಸಾವಿರಾರು ಉಸಿರು – ಮುಫ್ತಿ ಜೀಶಾನ್ ಮೌಲಾನ.

ಮಾನ್ವಿ ಜೂ.27

ಖಾದ್ರಿಯವರ ಗ್ರೀನ್ ಸಿಟಿ ಕ್ಲೀನ್ ಸಿಟಿ ಎಂಬ ಕನಸ್ಸಿನಂತೆ ಇಂದು ಒಂದು ಹಸಿರು ಗಿಡ ನೆಡಿ ಮುಂದಿನ ಪೀಳಿಗೆಗೆ ಅದು ಸಾಸ್ರಾರು ಜನರಿಗೆ ಉಸಿರಾಡಲು ಆಮ್ಲಜನಕ ನೀಡುವುದು, ನಾವು ನೀವುಗಳು ಸಸಿಗಳನ್ನು ಬೆಳೆಸುವ ಮತ್ತು ಉಳಿಸುವ ಸಂಕಲ್ಪ ಮಾಡ ಬೇಕಿದೆ.

ಆರೋಗ್ಯ ಮಹಾಭಾಗ್ಯ ಕಾಪಾಡಿ ಕೊಳ್ಳಲು ಇಂದಿನ ನಿರ್ಧಾರ ಅವಶ್ಯಕತೆ ಇದೆ, ಇಂದು ಮಾನ್ವಿಯ ಗುಡ್ಡದ ಮೇಲೆ‌ ನಿಂತಾಗ ಗ್ರೀನ್ ಗಿಡ ಕಾಣುತ್ತಿವೆ ಎಂದರೆ ಅದಕ್ಕೆ ಸಸಿ ಹಾಕಿದ ಪೂರ್ವಜರ ಕೊಡುಗೆ, ರಾಯಚೂರು ರಸ್ತೆಯ ಕೊನೆ ತುದಿಯಿಂದ ಬಸ್ ನಿಲ್ದಾಣದ ವರೆಗೆ ಗಿಡಗಳು ತುಂಬಿರುತ್ತಿದ್ದವು.

ಆದರೆ ಇಂದು ಮಾಯವಾಗಿವೆ ಅದನ್ನು ಮರಳಿ ತರುವುದು ನಮ್ಮೆಲ್ಲಾರ ಜವಾಬ್ದಾರಿ ಹೌದು. ಗಿಡ ನೆಟ್ಟರೆ ಪುಣ್ಯ ಅತನಿಗೆ ಸ್ವರ್ಗದಲ್ಲಿ ಸ್ಥಾನ ಇದೆ ಎಂಬ ಮಹಮದ್ ಪ್ರವಾದಿಯವರ ಮಾತು ನೆನಪಾಗುತ್ತಿದೆ”.ಎಂದು ಮುಫ್ತಿ ಸೈಯದ್ ಹಸನ್ ಜೀಶಾನ್ ಖಾದ್ರಿ ಖಾಸ್ಮಿ ಮೌಲಾನ ಉದ್ಘಾಟನೆಯಲ್ಲಿ ಹೇಳಿದರು.

ಮಾನ್ವಿ ಯುವ ಬಳಗ ಗ್ಲೋಬಲ್ ಕಂಪ್ಯೂಟರ್, ಭಾರತ ಆಪ್ಟಿಕಲ್ಸ್ ಸಿರವಾರ, ರಾತಿಬ್ ಫುಡ್ ಡಿಲೆವರಿ ಆ್ಯಪ್, ಮಾನಸ ಎಂಟರ್ ಪ್ರೈಸಸ್ ಮಾನ್ವಿಯ ಯುವ ಬಳಗದ ತಂಡದಿಂದ ಸಸಿ ನೆಡುವ ಕಾರ್ಯಕ್ರಮ ಭಾಷುಮಿಯ ಸಾಹುಕಾರ ಪ್ರಥಮ ಧರ್ಜೆ ಕಾಲೇಜಿನಲ್ಲಿ ಉದ್ಘಾಟನೆ ಮಾಡಲಾಯಿತು.

ವೇದಿಕೆಯಲ್ಲಿ ಧರ್ಮಗುರು ಸೈಯದ್ ಅಹಮದ್ ಖಾದ್ರಿ, ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷ ದೊಡ್ಡ ಬಸ್ಸಪ್ಪ ಗೌಡ, ಶಾಸಕರ ಪುತ್ರ ಶಿವರಾಜ್ ಅಡ್ವಕೇಟ್, ಪ್ರಾಚಾರ್ಯ ಜೆ.ಎಲ್ ಈರಣ್ಣ, ಮಾಜಿ ಪುರಸಭೆ ಅಧ್ಯಕ್ಷ ಬಸವಂತಪ್ಪ, ರಾಜ ಶ್ಯಾಮಸುಂದರ್ ನಾಯಕ್, ಸಿಡಿಸಿ ಸದಸ್ಯ ಸಿ. ಗುರುರಾಜ್, ನಂದಿಕೋಲ್ ಮಠ, ಪ್ರಾಧ್ಯಾಪಕ ಸೈಯದ್ ಮಿನ್ಹಾಜ್ ಉಲ್ ಹಸನ್, ಜಗನ್ನಾಥ್ ಮಾನ್ವಿಕರ್ ಗ್ರಾಮಾಭಿವೃದ್ಧಿ ಸಂಘದ ಅಧ್ಯಕ್ಷೆ ಡಾ. ರೋಹಿಣಿ ಮಾನ್ವಿಕರ್, ಲಕ್ಷ್ಮೀದೇವಿ, ಸೈಯದ್ ನಜೀರ್ ಖಾದ್ರಿ ಇದ್ದರು.

ಸ್ವಾಗತ ಸಿಂಡಿಕೇಟ್ ಸದಸ್ಯ ಜೀಶಾನ್ ಅಖಿಲ್ ಸಿದ್ಧಿಕಿ ನಡೆಸಿದರೆ ನಿರೂಪಣೆ ಮಹಿಬೂಬ್ ಮದ್ಲಾಪುರ ಮಾಡಿದರು.

ತಂಡದಲ್ಲಿ ಶೇಕ್ ಸೈಫುದ್ದಿನ್ ಅಜಗಾರ್, ಸೈಯದ್ ಮುಜಾಹಿದ್ ಮೈನುದ್ಧಿನ್ ಖಾದ್ರಿ, ಮಹಮ್ಮದ್ ಶೋಹಿಬ್, ಶೇಕ್ ಆಸಿಫ್, ಜುಬೇರ್, ಆಫ್ತಾಬ್, ಫಯಾಜ್, ಉಮೈರ್, ಸಾಬಿರ್, ಇರ್ಫಾನ್, ಅಮೀರ್ ಇನ್ನಿತರೆ ಎಲ್ಲಾ ಪಕ್ಷ, ಸಮುದಾಯ, ಸಂಘದ ಗಣ್ಯರು ಸಾಕ್ಷಿಯಾಗಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button