“ಏನಾಯಿತು” ಮುಹೂರ್ತದೊಂದಿಗೆ – ಚಿತ್ರೀಕರಣ ಆರಂಭ.

ಹುಬ್ಬಳ್ಳಿ ಜೂ.27

ಉತ್ತರ ಕರ್ನಾಟಕದಲ್ಲಿ ಹೆಚ್ಚು ಸಿನಿಮಾಗಳು ತಯಾರಾಗಲಿ. ಇಲ್ಲಿನ ಕಲಾವಿದರಿಗೆ ಹೆಚ್ಚಿನ ಅವಕಾಶಗಳು ದೊರೆಯಲಿ ಎಂದು ಸ್ವರ್ಣ ಗ್ರೂಪ್ ಕಂಪನಿ ಎಂ.ಡಿ ಡಾ, ಸಿ.ಎಚ್.ವಿ.ಎಸ್.ವಿ ಪ್ರಸಾದ್ ಹೇಳಿದರು.

ಅವರು ಹುಬ್ಬಳ್ಳಿ ಸಿದ್ಧಾರೂಢ ಮಠದಲ್ಲಿ ನಡೆದ ವಿಸ್ಮಯ ವೆಂಚರ್ಸ್ ನಿರ್ಮಾಣದ “ಏನಾಯಿತು” ಕನ್ನಡ ಚಲನಚಿತ್ರಕ್ಕೆ ಕ್ಯಾಮೆರಾ ಚಾಲನೆ ನೀಡಿ ಉತ್ತಮ ಸದಬಿರುಚಿಯ ಚಿತ್ರಗಳು ಹೆಚ್ಚು ಹೊರ ಬರಬೇಕಿದೆ.

ಉತ್ತರ ಕರ್ನಾಟಕದಲ್ಲಿ ಹಲವು ಕಲಾವಿದರು ತಂತ್ರಜ್ಞರು ಇದ್ದಾರೆ ಇವರಿಗೆಲ್ಲ ಇನ್ನಷ್ಟು ಅವಕಾಶ ಸಿಗಬೇಕಾಗಿದೆ ಆ ನಿಟ್ಟಿನಲ್ಲಿ ಈ ಭಾಗದಲ್ಲಿ ಸಿನಿಮಾ ಕೆಲಸಗಳು ಹೆಚ್ಚು ನಡೆಯ ಬೇಕಿದೆ ಎಂದರು.

ಕ್ಲಾಪ್ ಮಾಡಿದ ಸಿದ್ಧಾರೂಢ ಮಠ ಟ್ರಸ್ಟ್ ಚೇರ್ಮನ್ ಬಾಳು ಮಗಜಿಕೊಂಡಿ ಮಾತನಾಡಿ ಇಡೀ ಕುಟುಂಬದವರು ಕುಳಿತು ನೋಡುವ ಹಾಗೂ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಲನ ಚಿತ್ರಗಳು ಹೊರ ಬರಲಿ ಎಂದರು.

ಮುಖ್ಯ ಅತಿಥಿಗಳಾಗಿ ಎವಿಕೆ ಫೌಂಡೇಶನ್ ವೆಂಕಟೇಶ್ ಕಾಟವೆ, ಹಿರಿಯ ಕವಿ ಮಹಾಂತಪ್ಪ ನಂದೂರ್, ಡಾ, ರಾಮು ಮುಲಗಿ ಹಾಗೂ ನಾಯಕ ನಟ ಈಶಾನ್ ರಘುರಾಜನ್, ನಟಿ ಚೈತ್ರ ತೋಟದ್, ನಿರ್ದೇಶಕ ತಮನ್ನಾ, ಚಲನ ಚಿತ್ರ ಪತ್ರಕರ್ತ, ಪಿ.ಆರ್.ಓ ಡಾ, ಪ್ರಭು ಗಂಜಿಹಾಳ, ಡಾ, ವೀರೇಶ ಹಂಡಿಗಿ, ವಿನಾಯಕ ಶೆಟ್ಟಿ, ನವೀನ ಪಾಟೀಲ ಜೈನ್, ರಾಘು ಬುಧಪನವರ್, ಕೃಷ್ಣ ಉಲ್ಲಿಕಾಶಿ ಚಿತ್ರ ತಂಡದವರು ಪಾಲ್ಗೊಂಡಿದ್ದರು.

ಛಾಯಾಗ್ರಹಣ ಗೌರಿ ವೆಂಕಟೇಶ, ಕಥೆ ಡಾ, ಶೈಲಜಾ ಶರ್ಮ, ಸಾಹಿತ್ಯ ಸಂಭಾಷಣೆ-ಚಿತ್ರಕಥೆ ಈಶಾನ ರಘುರಾಜನ್, ಸಂಗೀತ ವಿ.ಮನೋಹರ, ಪತ್ರಿಕಾ ಸಂಪರ್ಕ ಡಾ, ಪ್ರಭು ಗಂಜಿಹಾಳ, ಡಾ, ವೀರೇಶ ಹಂಡಿಗಿ, ನಿರ್ದೇಶನ ತಮನ್ನ ಅವರದಿದೆ.

ಹುಬ್ಬಳ್ಳಿ-ಧಾರವಾಡ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಉತ್ತರ ಕರ್ನಾಟಕದ ಕಲಾವಿದರಿಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ ಎಂದು ನಿರ್ದೇಶಕ ತಮನ್ನ ತಿಳಿಸಿದ್ದಾರೆ.ರಾಜ್ಯ ಮಟ್ಟದ

ವಿಶೇಷ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್::ಡಾ, ಪ್ರಭು ಗಂಜಿಹಾಳ ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button