ಅಭಿವೃದ್ಧಿ ಕೆಲಸ ಮಾಡಲು ಇಚ್ಛಾ ಶಕ್ತಿ ಬೇಕು -ಶಾಸಕರು ಜಿ.ಎಚ್ ಶ್ರೀನಿವಾಸ್ ಅಭಿಮತ.

ತರೀಕೆರೆ ಜುಲೈ.01

ಕುಡಿಯುವ ನೀರು ಮತ್ತು ರೈತರಿಗೆ ನೀರು ಒದಗಿಸಲು ಸುಮಾರು 850 ಕೋಟಿ ವೆಚ್ಚದಲ್ಲಿ ಕಾಮಗಾರಿಗಳನ್ನು ಮಾಡಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆಯಿಂದ 110 ಕೆರೆಗಳಿಗೆ ನೀರು ತುಂಬಿಸುತ್ತಿದ್ದೇನೆ 50,000 ಎಕರೆ ಭೂಮಿಯಿಂದ ಕೃಷಿಗೆ ಆದ್ಯತೆ ನೀಡಲಾಗಿದೆ ಎಂದು ಶಾಸಕರಾದ ಜಿ.ಎಚ್ ಶ್ರೀನಿವಾಸ್ ಹೇಳಿದರು.

ಅವರು ನಿನ್ನೆ ಹುಣಸಘಟ್ಟ ಗ್ರಾಮದಲ್ಲಿ ತರೀಕೆರೆ ಹೊಸದುರ್ಗ ರಸ್ತೆಯಿಂದ ನೇರಲಕೆರೆ ಮುಖಾಂತರ ತರೀಕೆರೆ- ಹೊಸದುರ್ಗ ಸಂಪರ್ಕಿಸುವ ರಸ್ತೆಯನ್ನು 120 ಲಕ್ಷ ಅನುದಾನದ ಸಿಸಿ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಅತಿ ಹೆಚ್ಚು ಅನುದಾನ ನೀಡಿದರು.

ಆದ್ದರಿಂದ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶಾಸಕರಾಗಿ ಕೆಲಸ ಮಾಡಿದ್ದೇನೆ. ಅಭಿವೃದ್ಧಿ ಕೆಲಸ ಮಾಡಲು ಇಚ್ಛಾಶಕ್ತಿ ಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಅಮೃತಾಪುರ ಏತ ನೀರಾವರಿಯಿಂದ ಮೇದಿಹಳ್ಳಿ ಗ್ರಾಮದ ತುಂಬಿರುವ ಕೆರೆಗೆ ಬಾಗಿನ ಅರ್ಪಿಸಿದರು.

ಶಾಸಕನಾಗಿ ಯಾರಿಗೂ ತಾರತಮ್ಮ ಇಲ್ಲದೆ ಎಲ್ಲಾ ಗ್ರಾಮಗಳಿಗೂ ಸಹ ಅಭಿವೃದ್ಧಿ ಕೆಲಸಗಳನ್ನು ಸಮಾನವಾಗಿ ಮಾಡಿದ್ದೇನೆ ಎಂದು ಹೇಳಿದರು. ನಂತರ ಕುಂಟಿನಮಡು ಗ್ರಾಮದಲ್ಲಿ 40 ಲಕ್ಷದ ಸಿಸಿ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿದರು. ಕಾಂಗ್ರೆಸ್ ಮುಖಂಡರಾದ ಪ್ರಸನ್ನ, ಸಂತೋಷ್ ಉಪಸ್ಥಿತರಿದ್ದು ಹುಣಸಘಟ್ಟ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಎಚ್ ಇ ಮಂಜುನಾಥ್ ಮಾತನಾಡಿ ಸಾಮಾನ್ಯರಿಂದ ಅತಿಸಾಮಾನ್ಯ ಜನರ ಬಳಿ ಬಂದು ಕಷ್ಟ ಸುಖ ವಿಚಾರಿಸುವ ಏಕೈಕ ಶಾಸಕರೆಂದರೆ ಜಿ.ಎಚ್ ಶ್ರೀನಿವಾಸ್ ರವರು ಎಂದು ಹೇಳಿದರು.

ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಜಗದೀಶ್, ಗಂಗಾಧರಯ್ಯ, ರಮೇಶಣ್ಣ,ಸಿದ್ದಪ್ಪ ಹಾಗೂ ಕೆ ಡಿ ಪಿ ಸದಸ್ಯರಾದ ಮಲ್ಲಿಕಾರ್ಜುನ್ ರವರು ಮಾತನಾಡಿದರು. ಸಹಾಯಕ ಅಭಿಯಂತರರಾದ ಸೋಮಶೇಖರ್ ರವರು ಉಪಸ್ಥಿತರಿದ್ದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ಎನ್.ವೆಂಕಟೇಶ್ ತರೀಕೆರೆ ಚಿಕ್ಕಮಗಳೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button