ಅಗ್ನಿವೀರ ತರಬೇತಿ ಮುಗಿಸಿದ ಮಾನ್ವಿ – ತಾಲೂಕಿನ ಯುವಕರು.

ಮಾನ್ವಿ ಜು.01

ನಮ್ಮ ಕನಸುಗಳನ್ನು ಬದಿಗೊತ್ತಿ ನನ್ನ ತಮ್ಮನ ಕನಸನ್ನು ನಮ್ಮ ಮನೆಯವರೆಲ್ಲರೂ ಕೂಡಿ ನನಸು ಮಾಡಿದ್ದೇವೆ ನನ್ನ ತಮ್ಮ ಬಡತನದ ಬೇಗೆಯಲ್ಲಿ ಬೆಂದು ನೊಂದು ಅರಳಿದ ಪ್ರತಿಭೆ ಎಂದು ವೀರೇಶ್ ನಾಯಕನ ಸಹೋದರಿ ದೇವಮ್ಮ ನಾಯಕ್ ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಹಂಚಿ ಕೊಂಡರು.

ಸೋಮವಾರ ಮಂತ್ರಾಲಯ ಕ್ರಾಸ್ ನಿಂದ ತೆರೆದ ವಾಹನದಲ್ಲಿ ಗ್ರಾಮಸ್ಥರು ಅಕ್ಕ ಪಕ್ಕದ ಗ್ರಾಮದ ಹಿರಿಯ ಮುಖಂಡರು ನಿವೃತ್ತ ಯೋಧರು ಕಪ್ಗಲ್ ಶಾಲೆಯ ಮಕ್ಕಳು ಬೆಂಗಳೂರಿನ ಎಂಇಜಿ ತರಬೇತಿ ಕೇಂದ್ರದಲ್ಲಿ ತರಬೇತಿ ಮುಗಿಸಿಕೊಂಡು ಇಂದು ವೀರೇಶ್ ಭಸ್ಮಾಸುರ ನಾಯಕ ಸ್ವ ಗ್ರಾಮಕ್ಕೆ ಆಗಮಿಸಿದಾಗ ಅದ್ದೂರಿಯಾಗಿ ಗ್ರಾಮಸ್ಥರು ಸ್ವಾಗತ ಮಾಡಿ ಕೊಂಡರು.

ನಂತರ ವೇದಿಕೆಯ ಕಾರ್ಯಕ್ರಮದಲ್ಲಿ ಶಸಸ್ತ್ರಪಡೆಗಳ ಜಿಲ್ಲಾಧ್ಯಕ್ಷರಾದ ಕೃಷ್ಣಮೂರ್ತಿ ಕಲ್ಲೂರ್ ರವರು ಮಾತನಾಡಿ ದೇಶ ಕಾಯುವುದಕ್ಕೆ ಹಳ್ಳಿಯ ಪ್ರತಿಭೆಗಳು ಸರಕಾರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಮುಂಚೂಣಿ ಯಲ್ಲಿರುತ್ತಾರೆ ದೇಶ ಸೇವೆಯೇ ಈಶ ಸೇವೆ ಎಂದರು ಬಸವರಾಜ್ ನಾಯಕ ಮುಸ್ಟೂರ್ ಮಾತನಾಡಿ ಕಪಗಲ್ ಗ್ರಾಮಸ್ಥರು ಮಾನವಿ ತಾಲೂಕಿನ ಹಾಲಿ ಯೋಧರನ್ನು ಗುರುತಿಸಿ ಸನ್ಮಾನ ಮಾಡಿರುವುದು ಇಂದಿನ ಯುವ ಪೀಳಿಗೆಗೆ ದಾರಿದೀಪವಾಗಲಿದೆ ಪೋಷಕರು ಮಕ್ಕಳಿಗೆ ದೇಶದ ಬಗ್ಗೆ ಅರಿವು ಮೂಡಿಸ ಬೇಕೆಂದರು.

ತಾಲೂಕು ಆಡಳಿತ ತಾಲೂಕಿನ ಯುವಕರಿಗೆ ಶಾರೀರಿಕವಾಗಿ ದೈಹಿಕ ತರಬೇತಿ ಜೊತೆಗೆ ಗ್ರಂಥಾಲಯದ ವ್ಯವಸ್ಥೆ ಮಾಡಬೇಕು ಇದಕ್ಕೆ ಬೇಕಾಗಿರುವ ಶಾರೀರಿಕ ಶಿಕ್ಷಕರನ್ನು ನೇಮಕ ಮಾಡಿ ಆದೇಶ ಹೊರಡಿಸಬೇಕೆಂದು ರಾಘವೇಂದ್ರ ನಾಯಕ ವೇದಿಕೆಯ ಮುಖಾಂತರ ಸರ್ಕಾರಕ್ಕೆ ಆಗ್ರಹ ಪಡಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯ ಮುಖಂಡರು ಎಲ್ಲಾ ಸಮುದಾಯದ ಮುಖಂಡರು ಯುವ ಬ್ರಿಗೇಡ್ ಜಿಲ್ಲಾ ಸಂಚಾಲಕರು ಗ್ರಾಮದ ಮಹಿಳೆಯರು ಶಾಲೆಯ ವಿದ್ಯಾರ್ಥಿಗಳು ಹಾಜರಿದ್ದು ಹಾಲಿ ಯೋಧರಿಗೂ ನೀಡುತ್ತದೆ ಹಾಗೂ ಗ್ರಾಮದ ಮುಖಂಡರಿಗೂ ಸನ್ಮಾನ ಕಾರ್ಯಕ್ರಮ ನಂತರ ದೇಶಭಕ್ತರಿಗೆ ಕಾರಹುಣ್ಣಿಮೆಯ ಪ್ರಯುಕ್ತ ಪ್ರೀತಿಯ ಭೋಜನ ಕೂಡ ಯೋಧನ ತಂದೆ ಬಸ್ಮಾಸುರ ನಾಯಕ ಏರ್ಪಡಿಸಿ ಯಶಸ್ವಿ ಗೊಳಿಸಿದರು ಎಂದು ವರದಿಯಾಗಿದೆ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button