🚨ಬ್ರೇಕಿಂಗ್ ನ್ಯೂಸ್, ಕೋಟ ಬ್ಲಾಕ್ ಕಾಂಗ್ರೆಸ್ ಚುಕ್ಕಾಣಿ ಹಿಡಿದ ಸಹಕಾರ ಧೀಮಂತ🚨ಬೆವರು ಬೆಳೆಸಿದ ರಾಜಕೀಯ ಮಹಾಕಾವ್ಯ – ಶ್ರೀ ಜಿ.ತಿಮ್ಮ ಪೂಜಾರಿ ಪದಗ್ರಹಣದ ರೋಚಕ ಕಥನ..!

ಉಡುಪಿ ಜು.23

ಜೀವನವೆಂಬ ರಂಗ ಸ್ಥಳದಲ್ಲಿ ಕೆಲವರು ಬಂದು ಹೋಗುತ್ತಾರೆ, ಇನ್ನು ಕೆಲವರು ಅಕ್ಷರಶಃ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿಯುತ್ತಾರೆ! ಗಿಳಿಯಾರು ಗ್ರಾಮದ ಮಣ್ಣಿನ ವಾಸನೆಯ ಅಂಗಳದಲ್ಲಿ, ದಿವಂಗತ ಕುಷ್ಠ ಪೂಜಾರಿ ಹಾಗೂ ರುಕ್ಕ ಪೂಜಾರ್ತಿ ದಂಪತಿಯ ಒಡಲಲ್ಲಿ ಹುಟ್ಟಿದ ಆ ಪುಟ್ಟ ಕಂದ ಇಂದು ಕೋಟ ಬ್ಲಾಕ್ ಕಾಂಗ್ರೆಸ್ ರಾಜಕೀಯ ರಂಗದ ಮುಂಚೂಣಿ ನಾಯಕನಾಗಿ ಗರ್ಜಿಸುತ್ತಾ ನಿಂತಿದ್ದಾರೆ . ಅವರ ಹೆಸರು ಜಿ. ತಿಮ್ಮ ಪೂಜಾರಿ! ಇದು ಕೇವಲ ಅಂಕಿ ಅಂಶಗಳ ಒಂಟಿ ವ್ಯಕ್ತಿಯ ಕತೆಯಲ್ಲ; ಇದು ಮುಳ್ಳಿನ ಹಾದಿಯನ್ನು ಗುಲಾಬಿ ಹಾಸಿಗೆಯಾಗಿಸಿ, ಸತ್ಯಸಂಧತೆಯ ಬೆವರನ್ನು ಹರಿಸಿ ಬೆಳೆಸಿದ ಅಪ್ಪಟ ಜನಪರ ಮಹಾಕಾವ್ಯ.

🚨ನೌಕರಿಯ ಬದುಕಿಗೆ ತಿಲಾಂಜಲಿ, ಸಹಕಾರ ರಂಗದಲ್ಲಿ ಮೈಲಿಗಲ್ಲು:-

ಬ್ಯಾಂಕ್ ನೌಕರಿಯ ಭದ್ರ ಬದುಕಿನ ಆರಾಮದಾಯಕ ಹಾದಿಯನ್ನು 1995 ರಲ್ಲೇ ದಿಟ್ಟತನದಿಂದ ಬದಿಗೊತ್ತಿ, ಸಾರ್ವಜನಿಕ ಸೇವೆಗಾಗಿ ತನ್ನನ್ನು ತಾನು ಸಂಪೂರ್ಣವಾಗಿ ಅರ್ಪಿಸಿಕೊಂಡ ವಿಶಿಷ್ಟ ಚೇತನ ಇವರು. ಕೋಟ ಸಿ.ಎ. ಬ್ಯಾಂಕಿನಲ್ಲಿ ನೌಕರರಾಗಿ ಬದುಕಿನ ಬಂಡಿ ಎಳೆದ ಇವರು, ಅದೇ ಬ್ಯಾಂಕಿನ ನಿರ್ದೇಶಕರಾಗಿ ಪಟ್ಟಕ್ಕೇರಿದ್ದು ಒಂದು ರೋಚಕ ಅಧ್ಯಾಯ.

ಸತತ 32 ವರ್ಷಗಳಿಗೂ ಹೆಚ್ಚು ಕಾಲ ನಿರ್ದೇಶಕರಾಗಿ, ಕಳೆದ 10 ವರ್ಷಗಳಿಂದ ಅಧ್ಯಕ್ಷರಾಗಿ ಆ ಬ್ಯಾಂಕನ್ನು ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಧ್ರುವತಾರೆಯಂತೆ ಬೆಳಗುವಂತೆ ಮಾಡಿದ “ಅಭಿವೃದ್ಧಿ ಹರಿಕಾರ” ಇವರು. ಅಪೆಕ್ಸ್ ಮಾರುಕಟ್ಟೆಯಿಂದ ಹಿಡಿದು ಎಸ್‌ಕೆಎಡಿಎಸ್‌ ವರೆಗೆ, ತಾಪಂ ಸದಸ್ಯರಾಗಿ ಮಾಡಿದ ಜನ ಸೇವೆಯಿಂದ ಹಿಡಿದು ರೋಟರಿಯ ವಲಯ ಲೆಫ್ಟಿನೆಂಟ್ (ZL) ಹುದ್ದೆಯ ವರೆಗೆ — ಮುಟ್ಟಿದ್ದೆಲ್ಲವನ್ನೂ ಚಿನ್ನವಾಗಿಸಿದ ಮಾಂತ್ರಿಕ ಶಕ್ತಿ ಈ ತಿಮ್ಮ ಪೂಜಾರಿ..!

🚨ರಾಜಕೀಯದ ಹೊಸ ಮೈಲಿಗಲ್ಲು — ಭವ್ಯ ಪದಪ್ರಧಾನ ಸಮಾರಂಭ:-

ಈಗ ರಾಜಕೀಯ ರಂಗದಲ್ಲೂ ಹೊಸ ಇತಿಹಾಸ ಸೃಷ್ಟಿಯಾಗುವ ಕಾಲ ಬಂದಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಯ ಅಧ್ಯಕ್ಷರ ಆದೇಶದಂತೆ, ಕೋಟ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಅಚ್ಚರಿಯೆಂಬಂತೆ ನೇಮಕ ಗೊಂಡಿರುವ ಜಿ. ತಿಮ್ಮ ಪೂಜಾರಿಯವರ ಭವ್ಯ ಪದಪ್ರಧಾನ ಸಮಾರಂಭವು ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ.

📅 ದಿನಾಂಕ:-

26-07-2026, ಭಾನುವಾರ

🕙 ಸಮಯ:-

ಬೆಳಿಗ್ಗೆ 10.00 ಗಂಟೆಗೆ

📍ಸ್ಥಳ:-

ವಿಶ್ವಕರ್ಮ ಸಭಾಭವನ, ಚೇಂಪಿ, ಸಾಲಿಗ್ರಾಮ

🚨ದಿಗ್ಗಜರ ದಂಡು ಮತ್ತು ಕಾರ್ಯಕ್ರಮದ ವಿಶೇಷತೆಗಳು:-

ಈ ಐತಿಹಾಸಿಕ ಸಮಾರಂಭದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ “ಶ್ರೀ ಅಶೋಕ ಕುಮಾರ್ ಕೊಡವೂರು” ಅವರು ವಹಿಸಲಿದ್ದಾರೆ. ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ “ಶ್ರೀ ಯು. ಟಿ. ಖಾದರ್” ಅವರು ಈ ದಿವ್ಯ ಸಮಾರಂಭವನ್ನು ಉದ್ಘಾಟಿಸಿ, ದೀಪ ಬೆಳಗಲಿದ್ದಾರೆ. ಉಡುಪಿ ಜಿಲ್ಲೆಯ ಎಲ್ಲಾ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಈ ಮಹತ್ವದ ಸಮಾರಂಭದಲ್ಲಿ ಗೌರವ ಉಪಸ್ಥಿತರಿದ್ದು ಬಲ ತುಂಬಲಿದ್ದಾರೆ.

ವೇದಿಕೆಯಲ್ಲಿ ಅಕ್ಷರಶಃ ಘಟಾನುಘಟಿಗಳ ದಂಡೇ ಹರಿದುಬರಲಿದೆ! ಮಂಜುನಾಥ ಭಂಡಾರಿ, ವಿನಯ ಕುಮಾರ್ ಸೊರಕೆ, ಜಯಪ್ರಕಾಶ ಹೆಗ್ಡೆ ಸೇರಿದಂತೆ ಕೆಪಿಸಿಸಿಯ ಹಿರಿಯ ನಾಯಕರು, ಮಾಜಿ ಸಚಿವರು ಹಾಗೂ ಪ್ರಮುಖ ಕಾಂಗ್ರೆಸ್ ಮುಖಂಡರು ಭಾಗವಹಿಸಿ, ನೂತನ ಅಧ್ಯಕ್ಷರಿಗೆ ಶುಭ ಹಾರೈಸಲಿದ್ದಾರೆ.

💐ಆದರದ ಸ್ವಾಗತ:-

ಈ ಪದಪ್ರಧಾನ ಸಮಾರಂಭಕ್ಕೆ ಬ್ಲಾಕ್ ಕಾಂಗ್ರೆಸ್ ಸಮಿತಿ ಕೋಟದ ಅಧ್ಯಕ್ಷರಾದ “ಶ್ರೀ ಶಂಕರ್ ಕುಂದರ್”, ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ “ರೇಖಾ ಪಿ. ಸುವರ್ಣ”, ಯುವ ಕಾಂಗ್ರೆಸ್ ಕುಂದಾಪುರ ವಿ.ಸ. ಕ್ಷೇತ್ರ ಅಧ್ಯಕ್ಷರಾದ “ಶ್ರೀ ಇಚ್ಚಿತಾರ್ಥ ಶೆಟ್ಟಿ” ಹಾಗೂ ಯುವ ಕಾಂಗ್ರೆಸ್ ಕೋಟ ಬ್ಲಾಕ್ ಅಧ್ಯಕ್ಷರಾದ “ಶ್ರೀ ರಂಜಿತ್ ಕುಮಾರ್” ಅವರು ಸಮಸ್ತ ಜನತೆಯನ್ನು ಆದರದಿಂದ ಸ್ವಾಗತಿಸಿದ್ದಾರೆ.

ಸಹಕಾರದಿಂದ ಸಮಾಜ ಸೇವೆಗೆ, ಅಲ್ಲಿಂದ ರಾಜಕೀಯದ ಕಿರೀಟದ ವರೆಗೆ — ತಿಮ್ಮ ಪೂಜಾರಿಯವರ ಈ ಪಯಣ ಕೇವಲ ರಾಜಕೀಯ ಪ್ರಯಾಣವಲ್ಲ, ಅದು ಜನರ ವಿಶ್ವಾಸದ ದ್ಯೋತಕ.

ಮುಂಬರುವ ದಿನಗಳಲ್ಲಿ ಇನ್ನಷ್ಟು ಎತ್ತರಕ್ಕೇರಿ, ಸಮಾಜಕ್ಕೆ ದಾರಿ ದೀಪವಾಗಲಿ ಎಂಬುದು ಪ್ರತಿಯೊಬ್ಬ ಕನ್ನಡಿಗನ, ಪ್ರತಿಯೊಬ್ಬ ಅಭಿಮಾನಿಯ ಅಂತರಾಳದ ಹಾರೈಕೆ..!

ವರದಿ:ಆರತಿ.ಗಿಳಿಯಾರು,ಉಡುಪಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button