ಬಾಲ ಭಾರತಿ ಶಾಲೆಯಲ್ಲಿ ಅಂಗಾಂಗ – ದಾನ ದಿನಾಚರಣೆ.

ಆಲಮೇಲ ಆ.13

ಅಂಗಾಂಗ ದಾನ ಎನ್ನುವುದು ಮಾನವನ ಜೀವ ಉಳಿಸುವಲ್ಲಿ, ಅಂಗಾಂಗ ದಾನದ ಮಹತ್ವವನ್ನು ಸಾರಲು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಆಚರಿಸಲಾಗುವ ಪ್ರಮುಖ ದಿನವಾಗಿದೆ ಈ ವೇಳೆ ನನ್ನ ದೇಹದಾನ ವನ್ನು ಮಾಡಿರುವ ಪ್ರಯುಕ್ತ ಶಾಲೆಗೆ ಕರೆಯಿಸಿ ಸನ್ಮಾನಿಸಿದಕ್ಕಾಗಿ ಚಿರ ಋಣಿ ಎಂದು ಲಕ್ಷ್ಮೀಬಾಯಿ ಕುಂಬಾರ ಹೇಳಿದರು.

ಪಟ್ಟಣದ ವಿಶ್ವೇಶ್ವರ ಬಾಲ ಭಾರತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ದೇಹದಾನ ಮಾಡಿರುವ ಅಂಗನವಾಡಿ ಶಿಕ್ಷಕಿ ಲಕ್ಮೀಬಾಯಿ ಕುಂಬಾರ ರವರನ್ನು ಸನ್ಮಾನಿಸಲಾಯಿತು.

ಈ ವೇಳೆ ಅದ್ಯಕ್ಷತೆ ವಹಿಸಿ ಮಾತನಾಡಿದ ಶ್ರೀಶೈಲಪ್ಪ ಜೋಗೂರ ರವರು ಮರಣದ ನಂತರ ಅಂಗಾಂಗಗಳನ್ನು ದಾನ ಮಾಡುವುದರಿಂದ ಮತ್ತೊಂದು ಜೀವವನ್ನು ಹೇಗೆ ಉಳಿಸಬಹುದು ಎಂಬ ಅರಿವು ಮೂಡಿಸುವುದುಅಂಗಾಂಗ ದಾನದ ಬಗ್ಗೆ ಸಮಾಜದಲ್ಲಿರುವ ತಪ್ಪು ಕಲ್ಪನೆಗಳು ಮತ್ತು ಮೂಢ ನಂಬಿಕೆಗಳನ್ನು ಹೋಗಲಾಡಿಸುವುದು.

ಅಂಗಾಂಗ ದಾನ ಮಾಡಿ ಇತರರ ಬಾಳಿಗೆ ಬೆಳಕಾದ ಅಮರ ದಾನಿಗಳನ್ನು ಮತ್ತು ಅವರ ಕುಟುಂಬದವರ ತ್ಯಾಗವನ್ನು ಸ್ಮರಿಸಿ ಗೌರವಿಸುವುದು ನಮ್ಮ ಶಾಲೆಯ ಕಾರ್ಯ ಶ್ಲಾಘನೀಯ.

ಆರೋಗ್ಯವಂತ ನಾಗರಿಕರು ತಮ್ಮ ಮರಣಾನಂತರ ಅಂಗಾಂಗ ದಾನ ಮಾಡಲು ಸ್ವಯಂ ಪ್ರೇರಿತರಾಗಿ ಪ್ರತಿಜ್ಞೆ ಮಾಡಲು ಪ್ರೋತ್ಸಾಹಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.

ಈ ವೇಳೆ ಮುಖ್ಯ ಶಿಕ್ಷಕ ಲಕ್ಷ್ಮೀಪುತ್ರ ಕಿರನಳ್ಳಿ ಶಿಕ್ಷಕರಾದ ಚಂದ್ರಕಾಂತ ದೇವರಮನಿ ,ಲಕ್ಷ್ಮೀಬಾಯಿ ಹಳೇಮನಿ, ಸುವರ್ಣ ಸಾರಂಗಮಠ, ಸೀತಾ ಆರೇಶಂಕರ, ಸರುಬಾಯಿ ಬಂಡಗರ, ಸುನೀತಾ ಗುಂಡದ, ಅಂಜಲಿ ಕನ್ನೊಳ್ಳಿ, ಐಶ್ವರ್ಯ ಬೇಪಾರಿ ಮುಂತಾದವರು ಇದ್ದರು.

ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ ಹಿರೇಮಠ ಆಲಮೇಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button