ವಿಧಾನ ಸಭಾ ಕ್ಷೇತ್ರದಲ್ಲಿ ಅಭಿವೃದ್ಧಿಯ ಹೊಸ ಹೆಜ್ಜೆ – ₹12.73 ಕೋಟಿ ವಿವಿಧ – ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕರು.

ಮೊಳಕಾಲ್ಮೂರು ಆ.13

ವಿಧಾನ ಸಭಾ ಕ್ಷೇತ್ರದಲ್ಲಿ ಶ್ರೀ ಎನ್.ವೈ ಗೋಪಾಲಕೃಷ್ಣ ಅವರ ನೇತೃತ್ವದಲ್ಲಿ ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕು ಸ್ಥಾಪನೆ, ಭೂಮಿ ಪೂಜೆ ಹಾಗೂ ಉದ್ಘಾಟನೆ ನೆರವೇರಿಸಲಾಯಿತು.

ಕ್ಷೇತ್ರದ ರಸ್ತೆ, ಆರೋಗ್ಯ, ಶಿಕ್ಷಣ, ಕುಡಿಯುವ ನೀರು ಹಾಗೂ ಸಾಮಾಜಿಕ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದ್ದು, ಒಟ್ಟು ₹11.50 ಕೋಟಿ ಮೊತ್ತದ ಶಂಕು ಸ್ಥಾಪನೆ ಕಾಮಗಾರಿಗಳು ಹಾಗೂ ₹1.23 ಕೋಟಿ ಮೊತ್ತದ ಭೂಮಿ ಪೂಜೆ ಕಾಮಗಾರಿಗಳು ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಾಯಿತು.

ಪ್ರಮುಖ ಕಾಮಗಾರಿಗಳು:-

🚧 ರಾಂಪುರ ಗ್ರಾಮದ ಮುಖ್ಯ ರಸ್ತೆ ಅಭಿವೃದ್ಧಿ – ₹2 ಕೋಟಿ

🏥 ರಾಂಪುರ ಸಮುದಾಯ ಆರೋಗ್ಯ ಕೇಂದ್ರ ನರ್ಸ್ ವಸತಿಗೃಹ – ₹50 ಲಕ್ಷ

🏥 ರಾಂಪುರ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ವಸತಿಗೃಹ – ₹50 ಲಕ್ಷ

🛣️ ರಾಂಪುರ ಆರೋಗ್ಯ ಕೇಂದ್ರ ಸಿಸಿ ರಸ್ತೆ, ಚರಂಡಿ ಹಾಗೂ ಕಾಂಪೌಂಡ್ – ₹10 ಲಕ್ಷ

📚 ರಾಂಪುರ GMSR ಶಾಲೆ ಹೈಟೆಕ್ ಲೈಬ್ರರಿ ಕೊಠಡಿ – ₹23 ಲಕ್ಷ

🍽️ ರಾಂಪುರ GMSR ಶಾಲೆ ಭೋಜನಾಲಯ ಹಾಗೂ ಶೌಚಾಲಯ – ₹24 ಲಕ್ಷ

🏫 ಬೊಮ್ಮದೇವರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕೊಠಡಿ – ₹14.50 ಲಕ್ಷ

🏛️ ಬೊಮ್ಮದೇವರಹಳ್ಳಿ ವಾಲ್ಮೀಕಿ ಭವನ – ₹40 ಲಕ್ಷ

💧 ಸಿದ್ದಾಪುರ ಗ್ರಾಮದ ಸಮೀಪ ಚೆಕ್‌ಡ್ಯಾಂ ನಿರ್ಮಾಣ – ₹3.75 ಕೋಟಿ

🏥 ನಾಗಸಮುದ್ರ ಪ್ರಾಥಮಿಕ ಆರೋಗ್ಯ ಕೇಂದ್ರ ನರ್ಸ್ ವಸತಿಗೃಹ – ₹50 ಲಕ್ಷ

🛣️ ನಾಗಸಮುದ್ರ ಆರೋಗ್ಯ ಕೇಂದ್ರ ಸಿಸಿ ರಸ್ತೆ ಹಾಗೂ ಚರಂಡಿ – ₹25 ಲಕ್ಷ

🏛️ ಮೊಳಕಾಲ್ಮೂರು ಪಟ್ಟಣದಲ್ಲಿ ನೂತನ ಅಂಬೇಡ್ಕರ್ ಭವನ – ₹4 ಕೋಟಿ

ಈ ಕಾಮಗಾರಿಗಳ ಮೂಲಕ ಕ್ಷೇತ್ರದ ಗ್ರಾಮೀಣ ರಸ್ತೆ ಸಂಪರ್ಕ, ಆರೋಗ್ಯ ಸೇವೆ, ಶಿಕ್ಷಣ ಸೌಲಭ್ಯ, ನೀರಾವರಿ ಹಾಗೂ ಸಾಮಾಜಿಕ ಮೂಲಸೌಕರ್ಯಗಳಿಗೆ ಮತ್ತಷ್ಟು ಬಲ ದೊರೆಯಲಿದೆ.

“ಅಭಿವೃದ್ಧಿಯೇ ಅನ್ನ ಗುರಿ – ಜನ ಸೇವೆಯೇ ನನ್ನ ದಾರಿ ಎಂದು ಕೆಲಸ ಮಾಡುತ್ತಿರುವ ಶಾಸಕರಿಗೆ ಕ್ಷೇತ್ರದ ಮತದಾರರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.

ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ ಎಚ್ ಮೀನಕೆರಿ ಹೊಂಬಾಳೆ ಮೊಳಕಾಲ್ಮುರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button