ತಾಯಿಯ ಸ್ಥಾನ ಬಹಳ ದೊಡ್ಡದು – ಜಿ.ಯಶೋಧಾ ಪ್ರಕಾಶ್.
ಚಳ್ಳಕೆರೆ ಆ.14



ನಮ್ಮ ನಿತ್ಯ ಜೀವನದಲ್ಲಿ ತಾಯಿಯ ಸ್ಥಾನ ಬಹಳ ದೊಡ್ಡದಾಗಿರುತ್ತದೆ ಎಂದು ಚಳ್ಳಕೆರೆಯ ಶಿವನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಜಿ.ಯಶೋಧಾ ಪ್ರಕಾಶ್ ತಿಳಿಸಿದರು.
ಶಿವ ನಗರದ ತಮ್ಮ ಜಿ.ವಿ.ಎಸ್ ನಿವಾಸದಲ್ಲಿ ಆಯೋಜಿಸಿದ್ದ ವಾರದ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಶ್ರೀಶಾರದಾದೇವಿ ಜೀವನಗಂಗಾ ಗ್ರಂಥ ಪಾರಾಯಣ ಮಾಡುತ್ತ “ಮಾತೆಯ ಮಡಿಲು” ಎಂಬ ಅಧ್ಯಾಯವನ್ನು ಓದುತ್ತಾ ಮಾತನಾಡಿದರು.

ಸತ್ಸಂಗದ ಆರಂಭದಲ್ಲಿ ಯತೀಶ್ ಎಂ ಸಿದ್ದಾಪುರ ನೇತೃತ್ವದಲ್ಲಿ ವಿಶೇಷ ಭಜನೆ, ಶ್ರೀಮದ್ ಭಗವದ್ಗೀತೆಯ ಜ್ಞಾನ ಯೋಗದ ಶ್ಲೋಕಗಳ ಕಲಿಕಾ ತರಗತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು.
ಸತ್ಸಂಗದಲ್ಲಿ ಶಾಂತಮ್ಮ, ವಿಜಯಲಕ್ಷ್ಮೀ, ಕೃಷ್ಣವೇಣಿ, ರಶ್ಮಿ, ಭ್ರಮರಂಬಾ, ಶಾರದಮ್ಮ, ಜಯಮ್ಮ, ಜಯಶೀಲಮ್ಮ, ಭಾಗ್ಯಲಕ್ಷ್ಮೀ, ಸರಸ್ವತಿ ಹಾಜರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.
