ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನದ ಫಲಪ್ರದವಾಗಿ ನೆಮ್ಮದಿ ಜೀವನ ಸಾಗಿಸುತ್ತಿದ್ದೇವೆ – ಸಿದ್ದರಾಮ ಹೋಗಾರ.
ಆಲಮೇಲ ಆ.16



ಪಟ್ಟಣದ ವಿಶ್ವೇಶ್ವರ ಬಾಲಭಾರತಿ ಪ್ರಾಥಮಿಕ ಶಾಲೆಯಲ್ಲಿ ನಿವೃತ್ತ ಪ್ರಾಚಾರ್ಯ ಸಿಧ್ಧರಾಮ ಹೂಗಾರ ಧ್ವಜಾರೋಹಣ ನೆರೆವೆರಿಸಿ ಮಾತನಾಡಿದರು.
ಬ್ರಿಟೀಷರು ಭಾರತೀಯರನ್ನು ದಾಸರಾಗಿ ಮಾಡಿ ಕೊಳ್ಳಲು ವ್ಯಾಪಾರದ ನೆಪವನ್ನು ಮಾಡಿಕೊಂಡು ಬಂದು ನಮ್ಮನ್ನು ಸುಧೀರ್ಘ ಕಾಲ ಆಳಿದರು.
ಈ ವೇಳೆ ಮಹಾತ್ಮಾ ಗಾಂಧಿಯವರ ನೇತೃತ್ವದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಅಸಹಕಾರ ಚಳುವಳಿ, ಉಪ್ಪಿನ ಸತ್ಯಾಗ್ರಹ, ಚಲೇಜಾವ ಚಳುವಳಿ ಮಾಡುವುದರ ಮುಖಾಂತರ ಅತ್ಯೂಗ್ರ ಸತ್ಯಾಗ್ರಹಗಳ ಫಲವಾಗಿ ಕಿತ್ತೂರು ಚೆನ್ನಮ್ಮ, ಸುಖದೇವ, ಚಂದ್ರಶೇಖರ ಅಝಾದ, ಖುಧಿರಾಮ ಭೋಸ್ ರಂತಹ ಅನೇಕ ಹೋರಾಟಗಾರರ ತ್ಯಾಗ ಬಲಿದಾನದ ನಂತರ ನಮಗೆ ಸ್ವಾತಂತ್ರ್ಯ ದೊರಕಿತು.

ಅಂತಹ ಪವಿತ್ರವಾದ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಹೋಗ ಬೇಕಾಗಿರುವುದು ನಮ್ಮೆಲ್ಲರ ಹೊಣೆಗಾರಿಕೆ ಇದಕ್ಕೆ ಸರಕಾರಗಳು ನಾಲ್ಕು ಅವಸ್ಥೆಗಳಾದ ಜನಸಂಖ್ಯೆ, ಪ್ರದೇಶ, ಸಾರ್ವಭೌಮ ಮತ್ತು ಉತ್ತಮ ಆಡಳಿತವನ್ನು ನೀಡುವುದರ ಮುಖೇನ ಗಾಂಧೀಜಿಯವರು ಕಂಡ ಕನಸು ರಾಮರಾಜ್ಯ ವಾಗಲು ಸಾಧ್ಯ ಎಂದರು. ಇದೇ ವೇಳೆ ಸಂಸ್ಥೆಯ ಅಧ್ಯಕ್ಷ ಶ್ರೀಶೈಲಪ್ಪ ಜೋಗೂರ, ಅಲೋಕ ಬಡದಾಳ ಮಾತನಾಡಿದರು.
ಈ ವೇಳೆ ಶಾಲೆಯ ವತಿಯಿಂದ ಬಿ.ಎಲ್.ಡಿ.ಇ ಆಸ್ಪತ್ರೆಗೆ ದೇಹದಾನ ಮಾಡಿರುವ ಆಶಾ ಕಾರ್ಯಕರ್ತೆ, ಮಹಿಳಾ ಮುಖಂಡರು ಗಂಗೂಬಾಯಿ ಅಮಲಝೇರಿ ರವರಿಗೆ ಸನ್ಮಾನಿಸಲಾಯಿತು.
ಈ ವೇಳೆ ಸಂಸ್ಥೆಯ ಕಾರ್ಯದರ್ಶಿ ಪ್ರಶಾಂತ ಬಡದಾಳ, ಸದಸ್ಯರಾದ ಅಶೋಕ ವಾರದ,ಅಲೋಕ ಬಡದಾಳ, ಅಕ್ಷಯ ಕುಲಕರ್ಣಿ, ಮುಖ್ಯ ಶಿಕ್ಷಕ ಲಕ್ಷ್ಮೀಪುತ್ರ ಕಿರನಳ್ಳಿ, ಚಂದ್ರಕಾಂತ ದೇವರಮನಿ, ಪ್ರಶಾಂತ ಗಡದೆ, ಲಕ್ಷ್ಮೀಬಾಯಿ ಹಳೇಮನಿ, ಸುವರ್ಣ ಸಾರಂಗಮಠ, ಸೀತಾ ಆರೇಶಂಕರ, ಸರುಬಾಯಿ ಬಂಡಗರ, ಸುನೀತಾ ಗುಂಡದ, ಅಂಜಲಿ ಕನ್ನೊಳ್ಳಿ, ಐಶ್ವರ್ಯ ಬೇಪಾರಿ ಮುಂತಾದವರು ಇದ್ದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ ಹಿರೇಮಠ ಆಲಮೇಲ

