ನವನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 80 ನೇ. ವರ್ಷದ – ಸ್ವಾತಂತ್ರ್ಯ ಉತ್ಸವ ಆಚರಿಸಿದರು.

ತಾರಾಪೂರ ಆ.16

ಆಲಮೇಲ ತಾಲೂಕಿನ ತಾರಾಪೂರ ನವನಗರದಲ್ಲಿ ಸಂಭ್ರಮ ಸಡಗರದಿಂದ 80 ನೇ. ವರ್ಷದ ಸ್ವಾತಂತ್ರೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸಿದರು.

ಮಹಾತ್ಮ ಗಾಂಧೀಜಿ ಹಾಗೂ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ ಭಾವ ಚಿತ್ರಕ್ಕೆ ಶ್ರೀ ವೇದಮೂರ್ತಿ ಸಂಗಯ್ಯ ಹಿರೇಮಠ ನೆರವೇರಿಸಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ಶ್ರೀ ವೇದಮೂರ್ತಿ ದೀಪಯ್ಯ ಹಿರೇಮಠ. ರೇವಣಸಿದ್ದಯ್ಯ ಹಿರೇಮಠ ವಹಿಸಿ ಕೊಂಡರು.

ಕಾರ್ಯಕ್ರಮದ ಅಧ್ಯಕ್ಷರಾದ. ಶಂಕರಗೌಡ ಪಾಟೀಲ ಎಸ್.ಡಿ.ಎಮ್.ಸಿ ಅಧ್ಯಕ್ಷರು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಸಾತನಗೌಡ ಬಿರಾದಾರ ಮಾತನಾಡಿ ನಮ್ಮಗೆ ಸ್ವಾತಂತ್ರ್ಯವನ್ನು ದೊರಕಿದ್ದು ಹಲವಾರು ಮಹಾತ್ಮರ ಹೋರಾಟಗಾರರ ತ್ಯಾಗ ಬಲಿದಾನದಿಂದ ನಮಗೆ 1947 ರಂದು ನಮಗೆ ಪವಿತ್ರವಾದ ಸ್ವಾತಂತ್ರ್ಯ ದೊರಕಿತ್ತು ನಾವು ನೀವೆಲ್ಲರೂ ಉಳಿಸಿ ಕೊಂಡು ಹೋಗೋಣ ಎಂದು ಹೇಳಿದರು.

ರೇವಣಸಿದ್ದ ಜೋಗೂರ. ಮಲ್ಲಿಕಾರ್ಜುನ್ ಬಿರಾದಾರ ನಿವೃತ್ತ ಶಿಕ್ಷಕರು. ಗಿರಿಮಲಪ್ಪ ಕಿಣಗಿ. ಹನಮಂತ್ರಾರಾಯ ಮಳ್ಳಿ. ಅಶೋಕ್ ಹಾಳ್ಕಿ. ಮುದುಗೌಡ ಬಿರಾದಾರ. ರಮೇಶ್ ಕಿಣಗಿ ಗ್ರಾಮ ಪಂಚಾಯಿತಿ ಸದಸ್ಯರು. ಅಂಗನವಾಡಿ ಕಾರ್ಯಕರ್ತರು. ಬಿಸಿ ಊಟ ಕಾರ್ಯಕರ್ತರು. ಎಸ್.ಡಿ.ಎಂ.ಸಿ ಸದಸ್ಯರು ಹಾಗೂ ಶಾಲೆಯ ಶಿಕ್ಷಕರು ಊರಿನ ಗುರು ಹಿರಿಯರು ಯುವಕರು ಮಹಿಳೆಯರು ಮುದ್ದು ಮಕ್ಕಳು ಭಾಗವಹಿಸಿದರು ಹಾಗೂ ಶಾಲೆಯ ಮುದ್ದು ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ ಹಿರೇಮಠ ಆಲಮೇಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button