ತಾವರಖೇಡ ಟು ಮುಗಳಖೋಡಗೆ ನೂತನ ಬಸ್ ಪ್ರಾರಂಭ – ಭಕ್ತರ ಬೇಡಿಕೆಗೆ ಸ್ಪಂದಿಸಿದ ಶಾಸಕರು.

ಆಲಮೇಲ ಆ.17

ತಾಲೂಕಿನ ಭೀಮ ನದಿಯ ದಂಡಿಯಲ್ಲಿರುವ ಪುಣ್ಯ ಕ್ಷೇತ್ರ ಶ್ರೀ ಪೀರ್ ಗೈಬ ಸಾಹೇಬ ನೆಲೆಸಿರುವ ಪುಣ್ಯ ಕ್ಷೇತ್ರ ತಾವರಖೇಡ ಗ್ರಾಮದಿಂದ ದಿನಾಂಕ. 17/8/2026 ರಂದ ತಾವರಖೇಡ ದಿಂದ ಮುಗಳಖೋಡಕ್ಕೆ ನೂತನ ಬಸ್ಸಿಗೆ ಶ್ರೀ ವೇದಮೂರ್ತಿ ಮಾಂತಯ್ಯ ಹಿರೇಮಠ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

ರೇವಣಸಿದ್ದ ಬಿರಾದಾರ ಮಾತನಾಡಿ ಸದ್ಗುರು ಶ್ರೀ ಯಲ್ಲಾಲಿಂಗ ಮಹಾರಾಜರು ಜುಲೈ 13. 1885 ರಂದು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಮಿರಗಿ ಗ್ರಾಮದ ತಂದೆ ಶಿವಪ್ಪ. ತಾಯಿ ಕಾಶಿಬಾಯಿ ದಂಪತಿಯ ಮಗನಾಗಿ ಜನಿಸಿದರು.

ಶ್ರೀ ಯಲ್ಲಾಲಿಂಗ ಮಹಾರಾಜರು ಚಿಕ್ಕ ವಯಸ್ಸಿನಲ್ಲಿ ಕುರಿ ಕಾಯುವ ಕಾಯಕ ಮಾಡುತ್ತಾ ಶಿವ ಧ್ಯಾನದಲ್ಲಿ ನಿರಂತರಾಗುತ್ತಿದ್ದರು. ಗರಡಿ ಮನೆಯಲ್ಲಿ ಕುಸ್ತಿ ಪಟು ಆಗಿ ಹಾಗೂ ಸುಮಾರು 30 ರಿಂದ 40 ನೇ. ವಯಸ್ಸಿನಲ್ಲಿ ತಾವರಖೇಡ ಗ್ರಾಮದ ಜಾತ್ರೆಯಲ್ಲಿ ಕುಸ್ತಿ ಆಡಿ ಬೆಳ್ಳಿಯ ಖಡ್ಗ ಪಡೆದಿರುವ ಇತಿಹಾಸ ಇದೆ ಎಂದು ಹೇಳಿದರು. ಮುಗಳಖೋಡ ಯಲ್ಲಾ ಲಿಂಗ ಮಹಾರಾಜರು ತಾವರಖೇಡ ಗ್ರಾಮದಲ್ಲಿ ಕುಸ್ತಿ ಆಡಿದರಿಂದ ತಾವರಖೇಡ ಕಡಣಿ ತಾರಾಪುರ ಹಂಚಿನಾಳ ಗ್ರಾಮಗಳಲ್ಲಿ ಅಪಾರವಾದ ಭಕ್ತರನ್ನು ಹೊಂದಿದರು.

ಭಕ್ತರ ಬಹುದಿನಗಳ ಬೇಡಿಕೆಯಾದ ತಾವರಖೇಡ.ದಿಂದ ಮುಗಳಖೋಡ ಹೋಗಲು ಸಿಂದಗಿ ಮತ ಕ್ಷೇತ್ರದ ಶಾಸಕ ಅಶೋಕ ಮನಗೂಳಿ ಆವರು ಮೇಲಾಧಿಕಾರಿಗಳೊಂದಿಗೆ ಮಾತನಾಡಿ ನಮ್ಮ ಬೇಡಿಕೆಗೆ ಸ್ಪಂದಿಸಿ ಮುಗಳಖೋಡ ಮಠಕ್ಕೆ ಹೋಗುವ ಭಕ್ತರಿಗೆ ಬಸ್ಸಿನ ಸೌಕರ್ಯ ಕಲ್ಪಿಸಿ ಕೊಟ್ಟ ಸಿಂದಗಿ ಮತ ಕ್ಷೇತ್ರದ ಶಾಸಕರಾದ ಆಶೋಕ ಮನಗೂಳಿ ಇವರಿಗೆ ತಾವರಖೇಡ ಕಡಣಿ ಗ್ರಾಮಸ್ಥರು ಅಭಿನಂದಿಸಿದರು.

ಪ್ರತಿ ದಿನಾಲು ತಾವರಖೇಡ ದಿಂದ ಬಿಡುವ ಸಮಯ ಬೆಳಗ್ಗೆ 6=00 ಗಂಟೆಗೆ. ಮುಗಳಖೋಡ ತಲುಪುವ ಸಮಯ ಮಧ್ಯಾಹ್ನ 12=30 ಕ್ಕೆ ಮುಗಳಖೋಡ ತಲುಪುವುದು ನಂತರ ಮಧ್ಯಾಹ್ನ 1=30 ಕ್ಕೆ ಮುಗಳಖೋಡ ಬಿಡುವುದು ರಾತ್ರಿ 8=00 ಗಂಟೆಗೆ ತಾವರಖೇಡ ಗ್ರಾಮಕ್ಕೆ ತಲುಪುವುದು ಎಂದು ಕೆ.ಎಸ್.ಆರ್.ಟಿ.ಸಿ ನಿರ್ವಾಹಕ ಪಿ.ಜಿ ಹಿರೇ ಕುರುಬರ ತಿಳಿಸಿದರು. ನಂತರ ನಿರ್ವಾಹಕರಿಗೆ ಹಾಗೂ ಬಸ್ ಚಾಲಕರಿಗೆ ಗ್ರಾಮಸ್ಥರಿಂದ ಸನ್ಮಾನಿಸಲಾಯಿತು.

ಸಿದ್ದು. ಆಫಜಲಪುರ. ಶಿವಾನಂದ. ಬಗಲಿ. ಶರಣಪ್ಪ ನಾಟಿಕಾರ್. ಸುರೇಶ್ ಪೂಜಾರಿ. ಮಲ್ಲು ಬೋಗೂಂಡಿ. ಅಣ್ಣಾರಾಯ ಬಗಲಿ. ರಾಜಶೇಖರ್ ಪಾಟೀಲ. ರಮೇಶ್ ಅಫಜಲಪುರ. ಈರಣ್ಣ ಬಿರಾದಾರ. ಹನುಮಂತ್ರಾರಾಯ ಬಗಲಿ. ಯಲ್ಲಾಲಿಂಗ ಬಿರಾದಾರ ಹಾಗೂ ಗ್ರಾಮಸ್ಥರು ಉಪಸ್ಕರಿದ್ದರು.

ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ ಹಿರೇಮಠ ಆಲಮೇಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button