ಮಾನ್ವಿ ತಾಲೂಕಿನ ಜನರೇ ಎಚ್ಚರ – ಕಳ್ಳರು ಬರುತ್ತಿದ್ದಾರೆ ಎಚ್ಚರಾ.
ಮಾನ್ವಿ ಫೆ.27

ಮಾನ್ವಿ ತಾಲೂಕಿನ ಜನತೆ ಎಚ್ಚರ ಎಚ್ಚರ ಯಾಕಂದರೆ ಬಂಧು ಬಳಗದವರ ಮನೆಯಲ್ಲಿ ಜಾತ್ರೆ, ಮದುವೆ ಇದೆ ಎಂದು ಹೋದರೆ ನಿಮ್ಮ ಮನೆಗೆ ಕಳ್ಳರು ನುಗ್ಗಿ ಬಂಗಾರ ಹಣ ಸೇರಿದಂತೆ ಬೈಕ್ ದೋಚುವುದು ಗ್ಯಾರಂಟಿ ಗ್ಯಾರಂಟಿ.

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಪೋತ್ನಾಳ್ ಗ್ರಾಮದ ಲಕ್ಷ್ಮಿಕಾಂತರಡ್ಡಿ ಅವರು ಯಾಪಲಪರ್ವಿ ಗ್ರಾಮದಲ್ಲಿ ಜಾತ್ರೆ ಇದೆ ಎಂದು ಮನೆಗೆ ಬೀಗ ಹಾಕಿ ತೆರಳಿದ್ದಾರೆ. ಮನೆಗೆ ಬೀಗ ಹಾಕಿರುವುದನ್ನು ಮನಗಂಡ ಖದೀಮರು ಬೀಗ ಮುರಿದು ಮನೆಯಲ್ಲಿದ್ದ ಒಟ್ಟು 6 ಲಕ್ಷ ಮೌಲ್ಯದ ಬಂಗಾರ ಹಣ ಕದ್ದು ಪರಾರಿಯಾಗಿದ್ದಾರೆ.

ಮಾನ್ವಿ ತಾಲೂಕಿನ ಬೈಕ್ ಕಳ್ಳತನ ಹಾಗೂ ಮನೆ ಗಳ್ಳತನ ಹೆಚ್ಚಾಗುತ್ತಿದ್ದು ಪೊಲೀಸ್ ಇಲಾಖೆಗೆ ಕಳ್ಳರೆ ಸವಾಲಾಗಿದ್ದಾರೆ. ಕಳ್ಳರು ಯಾವ ಗ್ಯಾಂಗ್ ನವರು ಯಾವ ಭಾಗದವರು ಲಗ್ಗೆ ಇಟ್ಟಿದ್ದಾರೆಂದು ತನಿಖೆಯಿಂದ ತಿಳಿಯಲಿದ್ದು. ಮಾನ್ವಿ ಪೊಲೀಸ್ ಇಲಾಖೆಯವರು ನಾನಾ ರೀತಿಯಲ್ಲಿ ತಲಾಶ್ ನಡೆಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ