QR- ಕೋಡ್ ಸ್ಕ್ಯಾನ್ ಮಾಡಿ ನಿಮ್ಮೊಂದಿಗಿನ ಪೊಲೀಸರ ವರ್ತನೆ ಯನ್ನು ತಿಳಿಸಿ.!?

ಬೆಂಗಳೂರು: ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ಗ್ರಂಥಾಲಯ ನಿರ್ಮಿಸಿದ್ದ ಆಗ್ನೇಯ ವಿಭಾಗದ ಪೊಲೀಸರು, ಇದೀಗ ಜನಸ್ನೇಹಿ ಪೊಲೀಸ್ ವ್ಯವಸ್ಥೆ ಜಾರಿಗೊಳಿಸಲು ಮತ್ತೊಂದು ಹೆಜ್ಜೆ ಇಟ್ಟಿದ್ದಾರೆ.ಆಗ್ನೇಯ ವಿಭಾಗದ 14 ಪೊಲೀಸ್ ಠಾಣೆಗಳಿಗೂ ಈಗ ಕ್ಯೂಆರ್ ಕೋಡ್ ವ್ಯವಸ್ಥೆ ಬಂದಿದೆ.
ಆಗ್ನೇಯ ವಿಭಾಗದ 14 ಪೊಲೀಸ್ ಠಾಣೆಗಳಿಗೂ ಈಗ ಕ್ಯೂಆರ್ ಕೋಡ್ ವ್ಯವಸ್ಥೆ ಬಂದಿದೆ. ಜತೆಗೆ ಎಸಿಪಿ ಕಚೇರಿಯಲ್ಲೂ ಕ್ಯೂಆರ್ ಕೋಡ್ ಸ್ಕ್ಯಾನರ್ ಬೋರ್ಡ್ ಅಳವಡಿಸಲಾಗಿದೆ. ಇದಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.ಠಾಣೆಗೆ ಬರುವ ದೂರುದಾರರು, ಸಿಬ್ಬಂದಿ ಕಾರ್ಯ ವೈಖರಿ, ದೂರು ಸ್ವೀಕಾರವಾಯಿತೆ? ಸಿಬ್ಬಂದಿ ವರ್ತನೆ ಹೇಗಿತ್ತು? ಎಂಬುದನ್ನು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಅಭಿಪ್ರಾಯ ತಿಳಿಸುವ ವ್ಯವಸ್ಥೆ ಇದಾಗಿದೆ. ಇದನ್ನು ಪರಾಮರ್ಶೆ ಮಾಡಲು ಪ್ರತ್ಯೇಕ ತಂಡವನ್ನೇ ನಿಯೋಜಿಸಲಾಗಿದೆ. ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.ಠಾಣೆಯಲ್ಲಿ ಏನಾದರೂ ಸಮಸ್ಯೆ ಎದುರಾದರೆ ಸ್ಕ್ಯಾನ್ ಮಾಡಿ ನಿಗದಿತ ಕಾಲಂನಲ್ಲಿ ಬರೆದರೆ ಸಾಕು. ಹಿರಿಯ ಅಧಿಕಾರಿಗಳು ಸಿಬ್ಬಂದಿಗೆ ಸೂಚನೆ ನೀಡಿ ಕೆಲಸ ಆಗುವಂತೆ ನೋಡಿಕೊಳ್ಳುತ್ತಿದ್ದಾರೆ.
ಠಾಣೆಗಳಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಈ ವ್ಯವಸ್ಥೆ ಸಹಕಾರಿಯಾಗಿದೆ. ಸಾರ್ವಜನಿಕರು ಠಾಣೆಗೆ ಪ್ರವೇಶಿಸುತ್ತಿದ್ಧಂತೆ ಸಿಬ್ಬಂದಿ ನಮಸ್ಕರಿಸಿದರೆ? ಕುಡಿಯಲು ನೀರು ಕೊಟ್ಟರೆ? ಎಂಬುದರ ಬಗ್ಗೆಯೂ ಅಲ್ಲಿ ಬರೆಯಬಹುದು. ಸಂಬಂಧಪಟ್ಟ ಸಿಬ್ಬಂದಿ ಕೆಲಸದ ಬಗ್ಗೆಯೂ ಅಲ್ಲಿ ತಿಳಿಸಬಹುದು. ಸಿಬ್ಬಂದಿ ಹಣ ಕೇಳಿದರೆ? ಒಟ್ಟಾರೆ ನಿಮ್ಮ ಅನುಭವ ಹೇಗಿತ್ತು ಎಂಬುದರ ಬಗ್ಗೆಯೂ ಅಲ್ಲಿ ಬರೆಯಬಹುದು. ಕ್ಯೂಆರ್ ಕೋಡ್ ಅಳವಡಿಸಿಕೊಂಡ ಮೇಲೆ ಗುಣಾತ್ಮಕ ಬದಲಾವಣೆಯಾಗಿದೆ’ ಎಂದು ಡಿಸಿಪಿ ಸಿ.ಕೆ.ಬಾಬಾ ತಿಳಿಸಿದ್ದಾರೆ.’ಎಫ್‌ಐಆರ್ ಸ್ವೀಕರಿಸದಿದ್ದರೂ ಅಲ್ಲಿ ಮಾಹಿತಿ ಹಾಕಿದರೆ ಸಾಕು ಮರು ಕ್ಷಣವೇ ಎಫ್‌ಐಆರ್ ದಾಖಲಿಸುವ ವ್ಯವಸ್ಥೆ ಆಗಲಿದೆ. ಸಿಟ್ಟಿನಿಂದ ಬಂದವರೂ ಖುಷಿಯಿಂದ ಹೋಗಬೇಕೆಂದು ಈ ವ್ಯವಸ್ಥೆ ಅನುಷ್ಠಾನಕ್ಕೆ ತರಲಾಗಿದೆ’ ಎಂದು ಹೇಳಿದರು.