ರಾಜ್ಯ ವಿದ್ಯುತ್ ದರದಲ್ಲಿ ವ್ಯತ್ಯಯ..!?

ರಾಜ್ಯದ ಜನತೆಗೆ ಮತ್ತೆ ವಿದ್ಯುತ್ ಶಾಕ್!
ರಾಜ್ಯದಲ್ಲಿ ಮತ್ತೆ ವಿದ್ಯುತ ದರ ಏರಿಕೆ ಮೂಲಕ ಗ್ರಾಹಕರಿಗೆ ಶಾಕ್ ನೀಡಲು ಎಸ್ಕಾಂಗಳು ಮುಂದಾಗಿದ್ದು, ಯೂನಿಟ್‌ಗೆ 1.20ರಿಂದ 1.40 ರೂ. ಹೆಚ್ಚಳಕ್ಕೆ KERCಗೆ ಪ್ರಸ್ತಾವನೆ ಸಲ್ಲಿಸಿವೆ. ಖರೀದಿ, ಸೋರಿಕೆ, ಸಬ್ಸಿಡಿ ಸೇರಿ ವಿವಿಧ ವೆಚ್ಚ ಆಧರಿಸಿ ದರ ಹೆಚ್ಚಳಕ್ಕೆ ಮನವಿ ಮಾಡಿವೆ. ಕಳೆದ ಬಾರಿ ESCOM 1.85 ರೂ. ಹೆಚ್ಚಳಕ್ಕೆ ಪ್ರಸ್ತಾಪ ಮಾಡಿದ್ದವು. ದರ ಪರಿಷ್ಕರಣೆಯಾಗುವ ವೇಳೆಗೆ ಚುನಾವಣೆ ಘೋಷಣೆಯಾದರೆ ಸ್ವಲ್ಪ ಮಟ್ಟಿಗೆ ರಿಲೀಫ್ ಸಿಗಲಿದ್ದು, ಬಳಿಕ ಪೂರ್ವಾನ್ವಯವಾಗುವಂತೆ ದರ ಜಾರಿಯಾಗಲಿದೆ.