ರಿಷಭ್ ಪಂತ್ ಪರಾಕ್ರಮದ ಆಟ, ಭಾರತದ ಪರವಾಗಿ 4000 ರನ್; ಸಿಕ್ಸರ್ಗಳ ಅರ್ಧಶತಕ ಪೂರೈಸಿದ ರಿಷಬ್ ಪಂತ್..!
6,6,6,6,6,4,4,4,4,4,4 ಪಂತ್ ಪರಾಕ್ರಮ ಆಟಕ್ಕೆ ಬೆಚ್ಚಿ ಬಿದ್ದ ಬಾಂಗ್ಲಾ ಬೌಲರ್ಸ್ಸ್ .
ಮೀರ್‌ಪುರ ಟೆಸ್ಟ್‌ನಲ್ಲಿ ರಿಷಬ್ ಪಂತ್ ಬಾಂಗ್ಲಾ ಬೌಲರ್‌ಗಳನ್ನು ಬೆಂಡೆತ್ತಿದ್ದಾರೆ. ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಪಂತ್ 5 ಸಿಕ್ಸರ್, 6 ಫೋರ್‌ಗಳ ಮೂಲಕ ಅಜೇಯ ರನ್ 86 ಗಳಿಸಿದ್ದಾರೆ. ಇವರಿಗೆ ಶ್ರೇಯಸ್ ಅಯ್ಯರ್ (58*) ಕೂಡ ಉತ್ತಮ ಬೆಂಬಲ ನೀಡಿದ್ದು, ಶತಕದ ಜೊತೆಯಾಟ ಆಡಿದ್ದಾರೆ. ಇವರಿಬ್ಬರ ಆಟದ ನೆರವಿನಿಂದ ಭಾರತ ಟೀ ಬ್ರೇಕ್ ವೇಳೆ 226/4 ಗಳಿಸಿದೆ. ಇದಕ್ಕೂ ಮೊದಲು ರಾಹುಲ್ (10), ಗಿಲ್ (20), ಪೂಜಾರಾ (24) ಮತ್ತು ಕೊಹ್ಲಿ (24) ರನ್‌ಗಳಿಗೆ ಔಟಾಗಿದ್ದರು.ಈ ಮೂವರ ವಿಕೆಟ್ ಬಳಿಕ ಮೈದಾನಕ್ಕೆ ಬಂದ ರಿಷಭ್ ಪಂತ್ ಕೊಹ್ಲಿ ವಿಕೆಟ್ ಬಳಿಕ ನಾಲ್ಕನೇ ವಿಕೆಟ್ಗೆ ಪೂಜಾರ ಜೊತೆಗೂಡಿದ ಪಂತ್ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿದರು. ಆದರೆ ಮತ್ತೊಮ್ಮೆ ಬಿಗ್ ಇನ್ನಿಂಗ್ಸ್ ಆಡುವಲ್ಲಿ ಎಡವಿದರು. ಈ ಪಂದ್ಯದಲ್ಲೂ ಪಂತ್ ತಮ್ಮ ಬ್ಯಾಡ್ ಶಾಟ್ ಸೆಲೆಕ್ಷನ್ನಿಂದಾಗಿ ತಮ್ಮ ವಿಕೆಟ್ ಕಳೆದುಕೊಳ್ಳಬೇಕಾಯಿತು.