‘ಕಾಲಘಟ್ಟ’ ಚಿತ್ರದ “ನೀನೇನೆ ನನ್ನ ದೇವತೆ” – ಹಾಡು ಭರ್ಜರಿ ಸದ್ದು.
ಬೆಂಗಳೂರು ಮೇ.28

ದಿಕ್ಷೀತಾ ಎಂಟರ್ ಪ್ರೈಸೆಸ್ ಬೆಂಗಳೂರು ಅವರ “ಕಾಲಘಟ್ಟ” ಕನ್ನಡ ಚಲನ ಚಿತ್ರದ ಮೊದಲ ಲಿರಿಕಲ್ ಹಾಡು “ನೀನೇನೆ ನನ್ನ ದೇವತೆ” ಬಿಡುಗಡೆ ಯಾಗಿದ್ದು ಸಿನಿ ಪ್ರೇಕ್ಷಕರ ಮತ್ತು ಸಂಗೀತ ಪ್ರಿಯರ ಗಮನ ಸೆಳೆದು ಯ್ಯೂಟೂಬ್ ದಲ್ಲಿ ಭರ್ಜರಿ ಸದ್ದು ಮಾಡುತ್ತಿದೆ.
ಹಾಡು ಕೇವಲ ಒಂದು ಮೆಲೋಡಿ ಅಲ್ಲ, ಅದು ನಮ್ಮ ಮಣ್ಣಿನ ಆತ್ಮವನ್ನು ಹೊತ್ತ ಭಾವನೆ. ಹಾಡಿನಲ್ಲಿ ಮೈಲಾರ, ಹರಕೆ, ಜಾಗಟೆ, ಕಾವೇರಿ ಹೀಗೆ ನಮ್ಮ ನಾಡಿನ ನಂಬಿಕೆ ಮತ್ತು ಸಂಸ್ಕೃತಿಯನ್ನು ಪ್ರತಿ ಬಿಂಬಿಸುವ ಪದಗಳನ್ನು ಬಳಸಲಾಗಿದೆ.
ಈ ಹಾಡಿನ ಮೂಲಕ ಪ್ರೇಕ್ಷಕರಿಗೆ ತಮ್ಮ ಊರು, ತಮ್ಮ ಪ್ರೀತಿ, ತಮ್ಮ ನೆನಪುಗಳನ್ನು ನಮ್ಮ ನಾಡಿನ ಸಂಸ್ಕೃತಿಯನ್ನು ಹೊಸ ರೀತಿಯಲ್ಲಿ ಮರುಕಳಿಸುವ ಪ್ರಯತ್ನ ಮಾಡಲಾಗಿದೆ ಎಂದು ಯುವ ನಿರ್ದೇಶಕ ಕೆ. ಪ್ರಕಾಶ್ ಅಂಬಳೆ ತಿಳಿಸಿದ್ದಾರೆ.
ಚಿತ್ರದಲ್ಲಿ ನಾಯಕನಾಗಿ ಅಭಿದಾಸ್ ಹಾಗೂ ನಿತಿಲ್ ಅಭಿನಯಿಸಿದ್ದು, ನಾಯಕಿಯರಾಗಿ ಖುಷಿ ಮತ್ತು ಮೇಘ ಕಾಣಿಸಿ ಕೊಂಡಿದ್ದಾರೆ.

ಚಿತ್ರರಂಗದ ಹಿರಿಯ ಕಲಾವಿದರಾದ ಶೋಭರಾಜ್, ಭವ್ಯ, ರಮೇಶ್ ಭಟ್, ಪ್ರಶಾಂತ್ ರವಿ, ಮಂಡ್ಯ ಸೀತಾರಾಮ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ತಾಂತ್ರಿಕ ವರ್ಗದಲ್ಲಿ ಛಾಯಾಗ್ರಹಣ-ಸದಾಶಿವ ಹಿರೇಮಠ-ರಾಜ್ ಕಡೂರ್, ಸಂಗೀತ ಎ.ಎಂ ನೀಲ್, ಸಂಕಲನ ವೆಂಕಿ ಯುಡಿವಿ, ಸಾಹಸ ಮಾಸ್ ಮಾದ, ಸಾಹಿತ್ಯ ನಮ್ ಋಷಿ, ಸ್ಯಾಂಕಿ, ಸಿದ್ದುಶಿವರಾಮ್, ಪ್ರಸಾಧನ ವಿಜಯ್, ಪಿ.ಆರ್.ಓ- ಹರೀಶ್ ಅರಸು, ಡಾ, ಪ್ರಭು ಗಂಜಿಹಾಳ, ಡಾ, ವೀರೇಶ್ ಹಂಡಿಗಿ, ಪ್ರಚಾರ ವಿನ್ಯಾಸ ಆರ್.ಕ್ರಿಯೇಟಿವ್, ನಿರ್ದೇಶನ ತಂಡ ಗಣೇಶ್, ರವಿ, ಸಾಗರ್ ಇದ್ದು, ಕಥೆ-ಚಿತ್ರಕಥೆ-ಸಂಭಾಷಣೆ ಜೊತೆಗೆ ನಿರ್ದೇಶನವನ್ನು ಕೆ.ಪ್ರಕಾಶ್ ಅಂಬಳೆ ಮಾಡಿದ್ದಾರೆ.
ಲಯನ್ ಚಿಕ್ಕೇಗೌಡ , ಟಿ.ಸಿ ತಳಗವಾಡಿ ನಿರ್ಮಾಪಕರಾಗಿದ್ದಾರೆ. ಮುಂದಿನ ತಿಂಗಳು ರಾಜ್ಯಾದ್ಯಂತ ತೆರೆಗೆ ಬರಲಿರುವ “ಕಾಲಘಟ್ಟ” ಚಿತ್ರ ತಂಡಕ್ಕೆ ಸಿನಿ ಪ್ರೇಕ್ಷಕರ ಪ್ರೀತಿ ಮತ್ತು ಆಶೀರ್ವಾದ ಇರಲಿ ಎಂಬ ಆಶಯವನ್ನು ಚಿತ್ರ ತಂಡ ವ್ಯಕ್ತಪಡಿಸಿದೆ.
ರಾಜ್ಯ ಮಟ್ಟದ ವಿಶೇಷ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಡಾ, ಪ್ರಭು ಗಂಜಿಹಾಳ ಗದಗ
