🚨BIG BREAKING NEWS🚨DISTRICT IN UTTER SHOCK🚨ಜಿಲ್ಲಾಡಳಿತವೇ ಬೆಚ್ಚಿ ಬೀಳುವಂತಿದೆ ಹೆಬ್ರಿಯ ದಲಿತ ದೌರ್ಜನ್ಯ ಪ್ರಕರಣ – ಆರೋಪಿಗಳ ಭೀಕರ ಕುತಂತ್ರ ಬಯಲು..!
ಹೆಬ್ರಿ/ಉಡುಪಿ ಮೇ.28

ಜಿಲ್ಲೆಯ ಹೆಬ್ರಿ ತಾಲೂಕಿನ ಬಡಬೆಟ್ಟು ಬೇಳಂಜೆಯಲ್ಲಿ ಸಾಂಪ್ರದಾಯಿಕ ದಲಿತ ದೈವ ನರ್ತಕರಾದ ಗುಂಡು ಪರವ ಹಾಗೂ ಅವರ ಪತ್ನಿ ಜ್ಯೋತಿ ಅವರ ಕುಟುಂಬದ ಮೇಲೆ ನಡೆದಿರುವ ಅಡಿಯಿಂದ ಮುಡಿಯ ವರೆಗೆ ಅಮಾನವೀಯವಾಗಿರುವ ದೌರ್ಜನ್ಯ ಪ್ರಕರಣವು ಈಗ ಇಡೀ ಉಡುಪಿ ಜಿಲ್ಲೆಯನ್ನೇ ತಲ್ಲಣ ಗೊಳಿಸಿದೆ. ದಲಿತ ಮಹಿಳೆಯ ಮೇಲೆ ನಿರಂತರ ಜಾತಿ ನಿಂದನೆ ಮಾಡಿ, ಸಾಮಾಜಿಕ ಜಾಲ ತಾಣಗಳಲ್ಲಿ ಫೋಟೋ ಎಡಿಟ್ ಮಾಡಿ ತೇಜೋವಧೆ ನಡೆಸಿ, “ಬಹಿರಂಗವಾಗಿ ತಲ್ವಾರ್ ತೋರಿಸಿ ಜೀವ ಬೆದರಿಕೆ” ಹಾಕಿದ್ದ ಆರೋಪಿಗಳ ವಿರುದ್ಧ ಈಗಾಗಲೇ ಹೆಬ್ರಿ ಪೊಲೀಸ್ ಠಾಣೆಯಲ್ಲಿ ದಲಿತ ದೌರ್ಜನ್ಯ ಕಾಯ್ದೆ (Atrocity Act) ಅಡಿಯಲ್ಲಿ ಗಂಭೀರ ಕಾನೂನಾತ್ಮಕ ಪ್ರಕರಣ ದಾಖಲಾಗಿದೆ.
ಕಾನೂನಿನ ಬಿಗಿ ಪಾಶಕ್ಕೆ ಸಿಲುಕುತ್ತಿದ್ದಂತೆ ತೀವ್ರವಾಗಿ ಬೆದರಿ ಹೋಗಿರುವ ಆರೋಪಿಗಳು, ತಮ್ಮ ಈ ಅಕ್ಷಮ್ಯ ಅಪರಾಧ ಹಾಗೂ ಶಿಕ್ಷೆಯಿಂದ ತಪ್ಪಿಸಿ ಕೊಳ್ಳಲು ಬಿಲ್ಲವ ಸಂಘಟನೆಯ ಕೆಲ ವ್ಯಕ್ತಿಗಳನ್ನು ಇಟ್ಟುಕೊಂಡು ಉಡುಪಿ ಎಸ್.ಪಿ ಗೆ ಸುಳ್ಳು ಮನವಿ ಸಲ್ಲಿಕೆ ಮಾಡುವ ಮೂಲಕ ತನಿಖೆಯ ಹಾದಿ ತಪ್ಪಿಸಲು ಮತ್ತು ಸಂತ್ರಸ್ತರಿಗೆ ತೊಂದರೆ ಕೊಡಲು ಹತಾಶ ಹುನ್ನಾರ ನಡೆಸಿರುವುದು ಈಗ ಬಯಲಾಗಿದೆ!
📌 ಹೆಬ್ರಿ ಠಾಣೆಯಲ್ಲಿ ಎಫ್.ಐ.ಆರ್ ದಾಖಲು:-
ತಪ್ಪಿಸಿ ಕೊಳ್ಳಲು ಆರೋಪಿಗಳ ಹಗಲು ದರೋಡೆಯಂತಹ ತಂತ್ರ..!
ಕಾನೂನು ಕ್ರಮದಿಂದ ಬಚಾವಾಗಲು ಸುಳ್ಳು ಕಥೆ:-
ಸಂತ್ರಸ್ತೆ ಜ್ಯೋತಿ ಅವರು ನೀಡಿದ ಬಲವಾದ ಸಾಕ್ಷ್ಯಗಳ ಆಧಾರದ ಮೇಲೆ ಚಾರದ ವಿಜ್ಞೇಶ್ ಪೂಜಾರಿ, ಕೆರ್ಜಾಡಿಯ ಸಂತೋಷ್ ಪೂಜಾರಿ ಹಾಗೂ ಅವರ ಹಿಂಬಾಲಕರ ವಿರುದ್ಧ ಹೆಬ್ರಿ ಠಾಣೆಯಲ್ಲಿ ಮೊಕದ್ದಮೆ ಹೂಡಲಾಗಿದೆ. ಇದರಿಂದ ಪಾರಾಗಲು ಆರೋಪಿಗಳು ಬಿರುವೆರ್ ಕುಡ್ಲ ಉಡುಪಿ ಘಟಕದ ಹೆಸರಿನಲ್ಲಿ ಉಡುಪಿ ಎಸ್.ಪಿ ಗೆ ಮನವಿ ಸಲ್ಲಿಸಿದ್ದಾರೆ. ದೌರ್ಜನ್ಯಕ್ಕೊಳಗಾದ ನಿರಪರಾಧಿ ದಲಿತ ಕುಟುಂಬವೇ ಇಡೀ ಸಮಾಜ ಮತ್ತು ದೈವ ಚಾಕಿರಿಯವರ ಬಗ್ಗೆ ಅವಹೇಳನ ಮಾಡಿದೆ ಎಂದು ಉಲ್ಟಾ ಸುಳ್ಳು ದೂರು ನೀಡಿ ದಲಿತರ ಧ್ವನಿಯನ್ನು ಅಡಗಿಸಲು ಸಂಚು ರೂಪಿಸಿದ್ದಾರೆ.
⚠️ ಸಾಕ್ಷಿ ನಾಶದ ಭೀತಿ ಮತ್ತು ಬಿಲ್ಲವ ಸಂಘಟನೆಯ ಕೆಲವರ ಸಹಕಾರ:-
ತೀವ್ರ ನಿಗಾ ಇಡಲು ಆಗ್ರಹ..! ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಂತ ಆಘಾತಕಾರಿ ವಿಚಾರವೆಂದರೆ, ದೌರ್ಜನ್ಯ ಎಸಗಿರುವ ಈ ಕಿಡಿಗೇಡಿಗಳಿಗೆ ಬಿಲ್ಲವ ಸಂಘಟನೆಯ ಕೆಲವೊಬ್ಬರು ಪರೋಕ್ಷವಾಗಿ ಮತ್ತು ಪ್ರತ್ಯಕ್ಷವಾಗಿ ಸಹಕಾರ ನೀಡುತ್ತಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ.
“ಅಧಿಕಾರ, ಸಮಾಜ ಹಾಗೂ ಸಂಘಟನೆಯ ಹೆಸರನ್ನು ದುರ್ಬಳಕೆ ಮಾಡಿಕೊಂಡು ಆರೋಪಿಗಳು ಕಾನೂನು ಬದ್ಧ ಸಾಕ್ಷ್ಯಗಳನ್ನು ನಾಶ ಪಡಿಸುವ (Destruction of Evidence) ಮತ್ತು ಸಂತ್ರಸ್ತ ಕುಟುಂಬಕ್ಕೆ ಮರು-ಬೆದರಿಕೆ ಹಾಕಿ ದೂರು ವಾಪಸ್ ಪಡೆಯುವಂತೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುವ ಎಲ್ಲಾ ಸಾಧ್ಯತೆಗಳಿವೆ. ಈ ದೌರ್ಜನ್ಯಕ್ಕೆ ಬೆಂಬಲ ನೀಡುತ್ತಿರುವ ಆ ಕೆಲವೊಬ್ಬರ ಮೇಲೂ ಪೊಲೀಸ್ ಇಲಾಖೆ ತೀವ್ರ ನಿಗಾ ಇಟ್ಟು ಅವರ ವಿರುದ್ಧವೂ ಕಾನೂನು ಕ್ರಮ ಜರುಗಿಸ ಬೇಕು” ಎಂದು ಪ್ರಗತಿಪರ ಸಂಘಟನೆಗಳು ಕಟುವಾಗಿ ಒತ್ತಾಯಿಸಿವೆ.
🚨 ಉಡುಪಿ ಎಸ್.ಪಿ ಯವರೇ ತಕ್ಷಣ ಆರೋಪಿಗಳನ್ನು ಬಂಧಿಸಿ:-
ದಲಿತ ಸಂಘಟನೆಗಳ ತೀವ್ರ ಜನಾಕ್ರೋಶ! ಪರಿಶಿಷ್ಟ ಜಾತಿಗೆ ಸೇರಿದ ಒಬ್ಬ ಗೌರವಾನ್ವಿತ ದೈವ ನರ್ತಕ ಹಾಗೂ ದಲಿತ ಮಹಿಳೆಯ ವರ್ಚಸ್ಸಿಗೆ ಧಕ್ಕೆ ತಂದು, ಅವರ ಇಡೀ ಕುಟುಂಬವನ್ನೇ ಆತ್ಮ ಹತ್ಯೆಯ ಹಾದಿಗೆ ತಳ್ಳಲು ಯತ್ನಿಸಿರುವ ಆರೋಪಿಗಳನ್ನು ಹೆಬ್ರಿ ಪೊಲೀಸರು ತಕ್ಷಣವೇ ಜೈಲಿಗಟ್ಟ ಬೇಕಾಗಿದೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರು (SP):-
ಆರೋಪಿಗಳು ಕಾನೂನಿನಿಂದ ತಪ್ಪಿಸಿ ಕೊಳ್ಳಲು ಮಾಡುತ್ತಿರುವ ಈ ಸುಳ್ಳು ದೂರಿನ ನಾಟಕಕ್ಕೆ ಮಣಿಯದೆ, ಭಯದ ನೆರಳಿನಲ್ಲಿ ದಿನ ದೂಡುತ್ತಿರುವ ನಿರಪರಾಧಿ ದಲಿತ ಕುಟುಂಬಕ್ಕೆ ತಕ್ಷಣವೇ ಹೆಬ್ರಿ ಠಾಣೆಯ ಮೂಲಕ ಕಟ್ಟು ನಿಟ್ಟಿನ ಸೂಕ್ತ ಪೊಲೀಸ್ ರಕ್ಷಣೆ ಒದಗಿಸ ಬೇಕು. ಆರೋಪಿಗಳು ಮತ್ತು ಅವರಿಗೆ ಸಾಥ್ ನೀಡುತ್ತಿರುವ ವ್ಯಕ್ತಿಗಳು ಯಾವುದೇ ಕಾರಣಕ್ಕೂ ಸಾಕ್ಷಿ ನಾಶ ಮಾಡದಂತೆ ಕಠಿಣ ನಿಗಾ ವಹಿಸ ಬೇಕು. ಇಲ್ಲದಿದ್ದರೆ ಜಿಲ್ಲಾದ್ಯಂತ ಇರುವ ಎಲ್ಲಾ ದಲಿತ, ಹಾಗೂ ಪ್ರಗತಿಪರ ಸಂಘಟನೆಗಳು ಒಟ್ಟಾಗಿ ಉಡುಪಿ ಎಸ್.ಪಿ ಕಚೇರಿ ಮುಂಭಾಗದಲ್ಲಿ ಇತಿಹಾಸದಲ್ಲೇ ಕಾಣದಂತಹ ಬೃಹತ್ ಉಗ್ರ ಪ್ರತಿಭಟನೆ ಹಮ್ಮಿ ಕೊಳ್ಳುವುದು ನಿಶ್ಚಿತ ಎಂದು ದಲಿತಪರ ಸಂಘಟನೆಗಳು ತಿಳಿಸಿವೆ.
ವರದಿ:ಆರತಿ.ಗಿಳಿಯಾರು,ಉಡುಪಿ.
