ಬಾಗಲಕೋಟೆಯಲ್ಲಿ ಬಸ್ – ಲಾರಿ ನಡುವೆ ಅಪಘಾತ ಓರ್ವ ವಿದ್ಯಾರ್ಥಿ ಸಾವು…!
ಬಾಗಲಕೋಟೆ :
ಬಸ್ ಮತ್ತು ಗೂಡ್ಸ್ ಲಾರಿ ನಡುವಿನ ಅಪಘಾತದಲ್ಲಿ ವಿದ್ಯಾರ್ಥಿಯೊರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಬಾಗಲಕೋಟ ತಾಲೂಕಿನ ವಿದ್ಯಾಗಿರಿ – ಗದ್ದನಕೇರಿ ರಸ್ತೆಯಲ್ಲಿರುವ ಇಟಗಿ ಭೀಮಾಂಬಿಕಾ ದೇವಿ ದೇವಾಲಯ ಹತ್ತಿರ ಇಂದು ಬೆಳಗ್ಗೆ ಸುಮಾರು 10: 45 ರ ವೇಳೆಗೆ ನಡೆದಿದೆ. ಅಮಲಝರಿ ಮತ್ತು ಬಾಗಲಕೋಟೆ ನಡುವೆ ಸಂಚರಿಸುವ ಬಸ್ ಮತ್ತು ಗೂಡ್ಸ್ ಲಾರಿ ನಡುವೆ ಈ ಅಪಘಾತವಾಗಿದೆ,
ಇದನ್ನು ಕಂಡ ಸ್ಥಳೀಯರು ಆಂಬುಲೆನ್ಸ್ ಗೆ ಕರೆ ಮಾಡಿದ್ದು, ಆಂಬುಲೆನ್ಸ್ ಸ್ಥಳಕ್ಕೆ ಬರುವ ಹೊತ್ತಿಗಾಗಲೇ ಓರ್ವ ವಿದ್ಯಾರ್ಥಿ ಯೊಬ್ಬ ಸಾವನ್ನಪ್ಪಿದ್ದು ಅನೇಕರಿಗೆ ಗಾಯಗಳಾಗಿವೆ. ಮೃತ ವಿದ್ಯಾರ್ಥಿಯ ಮುಖ ನಜ್ಜು ಗುಜ್ಜಾಗಿದ್ದು , ಮುಖದ ತುಂಡುಗಳು ರಸ್ತೆ ಬದಿಯಲ್ಲಿ ತುಂಡಾಗಿ ಬಿದ್ದಿವೆ, ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿಯನ್ನು ಅರಕೇರಿ ಗ್ರಾಮದ ರಾಹುಲ್ ಜಗದೀಶ್ ಪಾಟೀಲ ಎಂದು ಹೇಳಲಾಗುತ್ತಿದೆ.ಈತ ಸಕ್ರಿ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದಾನೆಂದು ಸದ್ಯ ಮಾಹಿತಿ ಲಭ್ಯವಾಗಿದೆ. ಸ್ನೇಹಿತರ ಹಾಗೂ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.