ರಾಕೇಶ ಅಡಿಗ ,ಸೋನು ಗೌಡ ಜೊತೆಗಿನ ಮದುವೆಯ ಬಗೆಗಿನ ತಮ್ಮ ಅನಿಸಿಕೆಯನ್ನು ತಿಳಿಸಿದ್ದಾರೆ….!
ನಟ ರಾಕೇಶ್ ಅಡಿಗ ಈಗ ಬಿಗ್ ಬಾಸ್ ಸೀಸನ್ 9ರ ರನ್ನರ್ ಅಪ್ ಆಗಿ ಸೌಂಡ್ ಮಾಡ್ತಿದ್ದಾರೆ.ಬಿಗ್ ಬಾಸ್ ಸೀಸನ್ 9ರ ಆಟ ಇದೀಗ ಮುಗಿದಿದ್ದು. ರೂಪೇಶ್ ಶೆಟ್ಟಿ ವಿನ್ನರ್ ಆಗಿದ್ದರೆ, ರಾಕೇಶ್ ಅಡಿಗ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಮನೆಯಿಂದ ಹೊರಬರುತ್ತಲೇ ರಾಕೇಶ್ ಅಡಿಗ ಅವರಿಗೆ ಸೋನು ಗೌಡ ಜೊತೆಗಿನ ಮದುವೆ ಬಗ್ಗೆ ಪ್ರಶ್ನೆ ಎದುರಾಗುತ್ತಿದೆ. ಸೋನು ಮನೆ ಕಡೆಯಿಂದ ಮದುವೆ ಪ್ರಪೋಸಲ್ ಬಂದರೆ ರಾಕೇಶ ಅವರು ಏನು ಹೇಳಬಹುದು ಎಂದು ಇದೀಗ ಸ್ಪಷ್ಟಪಡಿಸಿದ್ದಾರೆ.
ಬಿಗ್ ಬಾಸ್ OTT ಯಲ್ಲಿ ಸೋನು ಮತ್ತು ರಾಕೇಶ್ ಅಡಿಗ ಅವರ ಸ್ನೇಹ ಹೈಲೈಟ್ ಆಗಿತ್ತು. ಇಬ್ಬರು ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದರು. ಈಗ ತಮ್ಮ ಮತ್ತು ಸೋನು ನಡುವಿನ ಗೆಳೆತನದ ಬಗ್ಗೆ ರಾಕೇಶ್ ಮಾತನಾಡಿದ್ದಾರೆ.
ಸೋನು ಕುಟುಂಬದ ಕಡೆಯಿಂದ ಒಂದು ವೇಳೆ ಮದುವೆ ಪ್ರಪೋಸಲ್ ಬಂದರೆ ಅದಕ್ಕೆ ಸೋನುನೇ ಉತ್ತರ ಕೊಡುತ್ತಾರೆ. ಸೋನುಗೆ ನನ್ನ ಬಗ್ಗೆ ಚೆನ್ನಾಗಿ ಗೊತ್ತು. ಮದುವೆ ಬಗ್ಗೆ ಮಾತು ಬಂದರೆ ನೋ ಅಂತಾನೇ ಹೇಳ್ತೀನಿ. ಇನ್ನೂ ಸೋನು ಗೌಡ ಅವರ ಮನೆ ಕಡೆಯಿಂದ ಮದುವೆ ಮಾತು ಬರೋದೇ ಇಲ್ಲಾ ಎಂದು ರಾಕೇಶ್ ಹೇಳಿದ್ದಾರೆ.