ಜ್ಞಾನ ಸಂಪಾದನೆ ವಿದ್ಯಾರ್ಥಿ ಜೀವನದ ಮುಖ್ಯ ಗುರಿಯಾಗ ಬೇಕು – ಮಾತಾಜೀ ತ್ಯಾಗಮಯೀ.
ಚಳ್ಳಕೆರೆ ಜೂ.19

ಜ್ಞಾನ ಸಂಪಾದನೆಯೇ ವಿದ್ಯಾರ್ಥಿ ಜೀವನದ ಮುಖ್ಯ ಗುರಿಯಾಗ ಬೇಕು. ಇದನ್ನು ಪಡೆಯಲು ವಿದ್ಯಾರ್ಥಿಗಳು ಸತತ ಪ್ರಯತ್ನ ಮಾಡುತ್ತಿರ ಬೇಕು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷೆ ಮಾತಾಜೀ ತ್ಯಾಗಮಯೀ ತಿಳಿಸಿದರು.

ನಗರದ ಹೊರ ವಲಯದ ಆದರ್ಶ ವಿದ್ಯಾಲಯದ ಆವರಣದಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ “ವ್ಯಕ್ತಿತ್ವ ನಿರ್ಮಾಣಕಾರಿ ಉಪನ್ಯಾಸ” ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು “ಆದರ್ಶ ವಿದ್ಯಾರ್ಥಿ ಜೀವನಕ್ಕೆ ಸಂಬಂಧಪಟ್ಟಂತೆ” ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳು ತಮ್ಮ ಸುಪ್ತ ಶಕ್ತಿ-ಚೈತನ್ಯವನ್ನು ಪ್ರಯತ್ನ, ಏಕಾಗ್ರತೆ, ಶಿಸ್ತು ಬದ್ಧ ಆಲೋಚನೆಯ ಮೂಲಕ ಜಾಗೃತ ಗೊಳಿಸಿ ಕೊಳ್ಳಬಹುದು.

ಪ್ರತಿಯೊಬ್ಬ ವಿದ್ಯಾರ್ಥಿ ಯಲ್ಲಿಯೂ ಮಹಾತ್ಮ ನಾಗುವ ಲಕ್ಷಣಗಳಿರುತ್ತವೆ. ವಿದ್ಯಾರ್ಥಿ ಜೀವನದ ಸಾಫಲತೆಗೆ ಪ್ರಾರ್ಥನೆ, ಧ್ಯಾನ, ಭಜನೆ, ಸದ್ಗ್ರಂಥಗಳ ಅಧ್ಯಯನ ಸಹಾಯ ಮಾಡುತ್ತದೆ. ಇವುಗಳನ್ನು ತಮ್ಮ ದಿನನಿತ್ಯದ ದಿನಚರಿಯ ಭಾಗವಹಿಸಿ ಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.

ಕಾರ್ಯಕ್ರಮದ ಆರಂಭದಲ್ಲಿ ಪ್ರಾರ್ಥನೆ ಮತ್ತು ಭಜನೆಯನ್ನು ಯತೀಶ್ ಎಂ ಸಿದ್ದಾಪುರ ನಡೆಸಿ ಕೊಟ್ಟರು.
ಉಪನ್ಯಾಸ ಸಭೆಯ ಅಧ್ಯಕ್ಷತೆಯನ್ನು ಆದರ್ಶ ವಿದ್ಯಾಲಯದ ಮುಖ್ಯ ಶಿಕ್ಷಕ ಅಶೋಕರೆಡ್ಡಿ ವಹಿಸಿದ್ದರೆ ಕನ್ನಡ ಭಾಷಾ ಸಹ ಶಿಕ್ಷಕ ರುದ್ರಮುನಿ ಅವರು ಎಲ್ಲರನ್ನು ಸ್ವಾಗತಿಸಿ-ವಂದಿಸಿದರು.
ಈ ಸಂದರ್ಭದಲ್ಲಿ ಆಶ್ರಮದ ವತಿಯಿಂದ ಪುಸ್ತಕ ಮಾರಾಟ ಮತ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಂಗೀತ ಶಿಕ್ಷಕ ಶಿವಯೋಗಿ ಸೇರಿದಂತೆ ಶಾಲೆಯ ಶಿಕ್ಷಕ ವೃಂದ ಹಾಗೂ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

